ಮಾದಕ ವಸ್ತು, ಮಾನವ ಕಳ್ಳ ಸಾಗಾಣಿಕೆ ದೇಶಕ್ಕೆ ಮಾರಕ: ನ್ಯಾ.ಡಿ.ಕೆ.ಮಂಜುನಾಥಾಚಾರಿ

| Published : Jul 19 2024, 12:53 AM IST

ಮಾದಕ ವಸ್ತು, ಮಾನವ ಕಳ್ಳ ಸಾಗಾಣಿಕೆ ದೇಶಕ್ಕೆ ಮಾರಕ: ನ್ಯಾ.ಡಿ.ಕೆ.ಮಂಜುನಾಥಾಚಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನಿಗೆ ಬುದ್ಧಿಶಕ್ತಿ, ವಿವೇಚನಾ ಶಕ್ತಿಯಿದ್ದರೂ ಮಾದಕ ವಸ್ತುಗಳ ಸೇವೆನೆಗೆ ಬಲಿಯಾಗಿ ತನ್ನ ಅಮೂಲ್ಯ ಜೀವನ ಹಾಳು ಮಾಡುಕೊಳ್ಳುತ್ತಿರುವುದು ವಿಷಾಧನೀಯ ಸಂಗತಿ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಡಿ.ಕೆ.ಮಂಜುನಾಥಾಚಾರಿ ಅವರು ಕಾನೂನು ಸೇವಾ ಸಮಿತಿ ವಕೀಲ ಸಂಘ, ತಾಲೂಕು ಆರೋಗ್ಯ ಇಲಾಖೆ ಮತ್ತು ನ್ಯಾಷನಲ್ ಕಾಲೇಜಿನ ಸಂಯುಕ್ತ ಅಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಕಾರ್ಯಕ್ರಮದಲ್ಲಿ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಮನುಷ್ಯನಿಗೆ ಬುದ್ದಿಶಕ್ತಿ, ವಿವೇಚನಾ ಶಕ್ತಿಯಿದ್ದರೂ ಕೂಡ ಮಾದಕ ವಸ್ತುಗಳ ಸೇವೆನೆಗೆ ಬಲಿಯಾಗಿ ತನ್ನ ಅಮೂಲ್ಯ ಜೀವನ ಹಾಳು ಮಾಡುಕೊಳ್ಳುವುದು ವಿಷಾಧನೀಯ ಸಂಗತಿ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾದೀಶ ಡಿ.ಕೆ. ಮಂಜುನಾಥಾಚಾರಿ ಕಳವಳ ವ್ಯಕ್ತಪಡಿಸಿದರು.

ಇಂದು ಕಾನೂನು ಸೇವಾ ಸಮಿತಿ ವಕೀಲ ಸಂಘ, ತಾಲೂಕು ಆರೋಗ್ಯ ಇಲಾಖೆ ಮತ್ತು ನ್ಯಾಷನಲ್ ಕಾಲೇಜಿನ ಸಂಯುಕ್ತ ಅಶ್ರಯದಲ್ಲಿ ಆಯೋಜನೆ ಮಾಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ದೇಹವೇ ದೇಗುಲ ಎಂದು ಹೇಳಿದ್ದಾರೆ. ಇಂತಹ ದೇವಾಲಯನ್ನು ದುಶ್ಚಟಗಳಿಂದ ಇಂದಿನ ಪೀಳಿಗೆ ಹಾಳು ಮಾಡಿಕೊಳ್ಳುತ್ತಿದೆ. ಕೆಲವು ಸಮಾಜ ಘಾತುಕ ಶಕ್ತಿಗಳು ಹದಿ ಹರೆಯದವರನ್ನು ಗುರಿಯಾಗಿಸಿಕೊಂಡು ಹಣ ಮಾಡಲು ಕುಕೃತ್ಯಗಳಿಗೆ ಪ್ರೋತ್ಸಾಹಿಸುತ್ತಾರೆ. ಆದ್ದರಿಂದ ಯಾರೂ ಇಂತಹ ಯಾವುದೇ ಚಟಗಳಿಗೆ ಬಲಿಯಾಗದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯೆ ಡಾ. ಲಾವಣ್ಯ ಮಾತನಾಡಿ, ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. 1980ರಲ್ಲಿ 28-30 ವರ್ಷ ವಯೋಮಾನದ ಬಳಿಕ ಮದ್ಯಪಾನ, ಧೂಮಪಾನಕ್ಕೆ ಒಳಗಾಗುತ್ತಿದ್ದರು. ಆದರೆ, ಇತ್ತೀಚೆಗೆ 17-18 ವರ್ಷ ವಯೋಮಾನದವರು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಇವರು ಸಾಮಾನ್ಯ ವ್ಯಕ್ತಿಗಿಂತ 3 ಪಟ್ಟು ಹೆಚ್ಚು ಕಾಯಿಲೆಗಳಿಗೆ ಒಳಗಾಗುತ್ತಾರೆ. ಇಂದಿನ ಯುವ ಸಮೂಹ ಹೆಣ್ಣು- ಗಂಡು ಎಂಬ ಭೇದ ಭಾವವಿಲ್ಲದೇ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.