ನರೇಗಾ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಿ

| Published : Feb 04 2024, 01:31 AM IST / Updated: Feb 04 2024, 01:32 AM IST

ಸಾರಾಂಶ

ನರೇಗಾ ಯೋಜನೆಯಡಿ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಹುಕ್ಕೇರಿಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರು ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ ಕಿವಿಮಾತು ಹೇಳಿದರು.

ತಾಲೂಕಿನ ಕೋಟ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶನಿವಾರ ಮಹಾತ್ಮಾ ಗಾಂಧಿ ನರೇಗಾ ದಿವಸ ಅಂಗವಾಗಿ ಕಾರ್ಮಿಕರಿಗೆ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ನರೇಗಾ ಕಾರ್ಮಿಕರು ಕುಟುಂಬದ ನಿರ್ವಹಣೆಯೊಂದಿಗೆ ಆರೋಗ್ಯ ಸದೃಢವಾಗಿ ಕಾಪಾಡಿಕೊಳ್ಳಬೇಕು ಎಂದರು.

ನರೇಗಾ ಯೋಜನೆಯಡಿ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ನೀಡಲಾಗುವುದು. ಸಮುದಾಯ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಜಮೀನ ಸಮತಟ್ಟು, ದನಗಳ ಶೆಡ್, ಸೋಕ್ ಪಿಟ್, ತೋಟಗಾರಿಕೆ ಬೆಳಗಳು, ರೇಷ್ಮೆ ಬೆಳೆ, ಮುಂತಾದ ಕಾಮಗಾರಿಗಳನ್ನು ಕೈಕೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದರು.ತಾಂತ್ರಿಕ ಸಂಯೋಜಕ ಅರ್ಷದ ನೇರ್ಲಿ ಮಾತನಾಡಿದರು. ಪಿಡಿಒ ಶಿವಾನಂದ ವಾಸನ್ನವರ ಶಿಬಿರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ನಾಯಿಕ ಅಧ್ಯಕ್ಷತೆ ವಹಿಸಿದ್ದರು. ಎಂಐಎಸ್ ಸಂಯೋಜಕ ಶಂಕರ ಶಿರಗುಪ್ಪಿ, ಐಇಸಿ ಸಂಯೋಜಕ ಮಹಾಂತೇಶ ಬಾದವಾನಮಠ, ಆಡಳಿತ ಸಹಾಯಕಿ ಪ್ರೀತಿ ಜವಳಿ, ತಾಂತ್ರಿಕ ಸಹಾಯಕ ಸುವರ್ಣಾ ಅಗಸರ, ಪುಷ್ಪಾ ಹೊಸೂರ, ವಿಶ್ವನಾಥ ಜಗದಾಳ, ಲಕ್ಷ್ಮಣ ಮದನ್ನವರ, ಕಿರಣ ಕಮತೆ, ಭೈರನಾಥ ಪಾಟೀಲ, ದೇವನಗೌಡ ಪಾಟೀಲ, ಸಾಗರ ಪಾಟೀಲ, ಬಸವರಾಜ ಸೊಪ್ಪಡ್ಲ, ಅಮರ ಕಾಕತಿಕರ, ಡಿಇಒ ರವಿ ಕುಂಬಾರ, ಗ್ರಾಮ ಕಾಯಕ ಮಿತ್ರ ಆಶಾ ಭಾಮನೆ ಮತ್ತಿತರರು ಇದ್ದರು. ಇದೇ ವೇಳೆ ಕೇಕ್ ಕತ್ತರಿಸುವ ಮೂಲಕ ನರೇಗಾ ದಿವಸ ಕಾರ್ಮಿಕರೊಂದಿಗೆ ಆಚರಣೆ ಮಾಡಲಾಯಿತು.