ಗ್ರಾಮೀಣರ ಬದುಕಿಗೆ ಚೈತನ್ಯ ತುಂಬಿದ ನರೇಗಾ: ಕೆಪಿಸಿಸಿ ಕಾರ್ಯದರ್ಶಿ ನಿವೇದಿತಾ ಆಳ್ವ

| Published : Jan 19 2024, 01:45 AM IST

ಗ್ರಾಮೀಣರ ಬದುಕಿಗೆ ಚೈತನ್ಯ ತುಂಬಿದ ನರೇಗಾ: ಕೆಪಿಸಿಸಿ ಕಾರ್ಯದರ್ಶಿ ನಿವೇದಿತಾ ಆಳ್ವ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮಗಳ ಅಭಿವೃದ್ಧಿಗೆ ಹೆದ್ದಾರಿಯಾಗಿದೆ. ಅಭಿವೃದ್ಧಿಯ ವ್ಯಾಖ್ಯಾನ ಅರಿಯದ ಬಿಜೆಪಿಗೆ ದೇಶ ಎಂದರೆ ನರೇಂದ್ರ ಮೋದಿ ಮತ್ತು ಅಮೀತ್ ಶಾ ಮಾತ್ರ ಆಗಿದ್ದಾರೆ.

ಹೊನ್ನಾವರ:

ಅಧಿಕಾರ ವಿಕೇಂದ್ರಿಕರಣ ಹಾಗೂ ಗ್ರಾಮಗಳ ಅಭಿವೃದ್ಧಿ, ಮಹಿಳಾ ಸಬಲೀಕರಣದ ಆಶಯದೊಂದಿಗೆ ಆರಂಭಗೊಂಡ ಪಂಚಾಯತ್‌ ರಾಜ್ ವ್ಯವಸ್ಥೆ ಇಂದು ಸದೃಢವಾಗಿ ಬೆಳೆದಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ನಿವೇದಿತಾ ಆಳ್ವ ಹೇಳಿದರು.

ಅವರು ಇಲ್ಲಿನ ಆಶ್ರಯಂ ಸಭಾಭವನದಲ್ಲಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಗುರುವಾರ ಏರ್ಪಡಿಸಿದ್ದ ಸರ್ವೋಯದ ಸಂಕಲ್ಪ ಶಿಬಿರದ ಪ್ರಥಮ ದಿನ ಉದ್ಘಾಟಿಸಿ ಮಾತನಾಡಿದರು.ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಪ್ರಧಾನಿ ರಾಜೀವ ಗಾಂಧಿ ಪಂಚಾಯತ್‌ ರಾಜ್ ವ್ಯವಸ್ಥೆ ಜಾರಿಗೆ ತಂದರು. ಈ ಮೂಲಕ ನರೇಗಾ ಗ್ರಾಮಸ್ಥರ ಬದುಕಿಗೆ ಚೈತನ್ಯ ನೀಡಿತು ಎಂದರು.ರಾಜೀವ ಗಾಂಧಿ ಪಂಚಾಯತ್‌ ರಾಜ್ ಸಂಘಟನೆ ರಾಜ್ಯ ಸಂಚಾಲಕ ವಿಜಯ್ ಸಿಂಗ್ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ಗ್ರಾಮಗಳ ಅಭಿವೃದ್ಧಿಗೆ ಹೆದ್ದಾರಿಯಾಗಿದೆ. ಅಭಿವೃದ್ಧಿಯ ವ್ಯಾಖ್ಯಾನ ಅರಿಯದ ಬಿಜೆಪಿಗೆ ದೇಶ ಎಂದರೆ ನರೇಂದ್ರ ಮೋದಿ ಮತ್ತು ಅಮೀತ್ ಶಾ ಮಾತ್ರ ಆಗಿದ್ದಾರೆ. ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್‌ ತಂದ ಯೋಜನೆಗಳ ಹೆಸರು ಬದಲಾವಣೆಯಲ್ಲಿ ಮಾತ್ರ ಬಿಜೆಪಿಗರು ನಿಸ್ಸಿಮರು ಎಂದು ಕಿಡಿಕಾರಿದರು.ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ, ಜನತೆಗೆ ಧರ್ಮದ ಮಂಕು ಬೂದಿ ಎರಚಿ ದೇಶದ ಅಭಿವೃದ್ಧಿಯನ್ನು ಬಿಜೆಪಿ ಕುಂಠಿತಗೊಳಿಸಿದೆ. ಯುವಕರ ಕೈಗೆ ಉದ್ಯೋಗ ನೀಡದೆ ಕತ್ತಿ, ಮಾರಕಾಸ್ತ್ರ ನೀಡಿ ಅವರನ್ನು ಭ್ರಮಾಲೋಕಕ್ಕೆ ಕೆಡವಿದೆ. ಬಿಜೆಪಿ ಆಡಳಿತದಲ್ಲಿ ಜನ ದಿಕ್ಕು ಕಾಣದಂತೆ ಆಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಾಯಿ ಗಾಂವ್ಕರ, ನರೇಂದ್ರ ಮೋದಿ ಕಾಂಗ್ರೆಸ್ ಹಠಾವೋ ಎಂದಿದ್ದರು. ಆದರೆ ಹತ್ತು ಮೋದಿ ಬಂದರು ಕಾಂಗ್ರೆಸ್‌ಗೆ ಏನು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಬೇರುಗಳು ದೇಶಾದ್ಯಂತ ನೆಲೆಯೂರಿದೆ ಎಂದರು.ರಾಜೀವ ಗಾಂಧಿ ಪಂಚಾಯತ್‌ ರಾಜ್‍ ಕರಾವಳಿ ಉಸ್ತುವಾರಿ ಅರ್ಜುನ್ ರಾಧಾಕೃಷ್ಣನ್, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತಾ ಗಾಂವ್ಕರ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲಾ ಸಂಘಟಕ ವಿನೋದ ನಾಯ್ಕ ಕರ್ಕಿ, ಕುಮಟಾ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಕೆಪಿಸಿಸಿ ಸದಸ್ಯ ಎಂ.ಎನ್. ಸುಬ್ರಹ್ಮಣ್ಯ, ಸಂಘಟನೆ ಮೈಸೂರು ಉಸ್ತುವಾರಿ ರೋಸ್ನಿ ಒಲಿವರ್, ಸಚಿನ್ ನಾಯ್ಕ ಕುಮಟಾ, ರವಿ ಶೆಟ್ಟಿ ಕವಲಕ್ಕಿ ಇದ್ದರು.