ಕಂದಮ್ಮಗಳೇ ಇಲ್ಲದ ನರೇಗಾ ಕೂಸಿನ ಮನೆ!

| Published : Oct 16 2024, 12:46 AM IST

ಸಾರಾಂಶ

ಸರ್ಕಾರದ ನಿಯಮದಂತೆ ಈ ಕೇಂದ್ರದಲ್ಲಿ ಮಕ್ಕಳ ಮನಸೆಳೆಯುವ ಆಟಿಕೆಗಳು, ತೂಗುವ ತೊಟ್ಟಿಲು, ಬಿಸ್ಕತ್, ಬಾಳೆಹಣ್ಣು ಹಾಗೂ ಮಕ್ಕಳನ್ನು ಸಂಬಾಳಿಸುವ ಕೆಲವು ಸಿಬ್ಬಂದಿ ಇರಬೇಕು. ಆದರೆ, ಮುಖ್ಯವಾಗಿ ಚೇಳೂರು ತಾಲೂಕು ಕೇಂದ್ರದಲ್ಲಿ ಇದ್ಯಾವುದೂ ಇಲ್ಲದೆ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.

ಕನ್ನಡಪ್ರಭ ವಾರ್ತೆ ಚೇಳೂರುಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕಾರ್ಯನಿರ್ವಹಿಸುವ ತಾಯಂದಿರ ಪುಟ್ಟ ಕೂಸುಗಳ ಆರೈಕೆಗೆಂದು ತೆರೆಯಲಾದ ಕೂಸಿನ ಮನೆಗಳು ಆರಂಭವಾಗಿ ಆರು ತಿಂಗಳಾದರೂ ಬೀಗ ಜಡಿದುಕೊಂಡು ತೆಪ್ಪಗೆ ನಿಂತಿವೆ.

ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಮಹಿಳೆಯರ ೬ ತಿಂಗಳಿಂದ ೩ ವರ್ಷದೊಳಗಿನ ಕಂದಮ್ಮಗಳ ಆರೈಕೆಗೆ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆ ಕೂಸಿನ ಮನೆ.

ನೋಡಲ್‌ ಅಧಿಕಾರಿ ನೇಮಕ

‘ನಿಮ್ಮ ಮಕ್ಕಳನ್ನು ಇಲ್ಲಿ ಆರೈಕೆ ಮಾಡಲಾಗುವುದು, ನೀವು ನಿಶ್ಚಿಂತೆಯಿಂದ ಕೆಲಸ ಮಾಡಿ'''' ಎಂದು ತಾಯಂದಿರಲ್ಲಿ ಜಾಗೃತಿ ಮೂಡಿಸಿ ಮಕ್ಕಳನ್ನು ಕರೆತಂದು ಇಲ್ಲಿ ಸಂಬಾಳಿಸುವುದು ಯೋಜನೆ ಮುಖ್ಯ ಉದ್ದೇಶ. ಗ್ರಾಮ ಪಂಚಾಯಿತಿ ಉಸ್ತುವಾರಿಯಲ್ಲಿ ನಡೆಯುವ ಈ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಒಬ್ಬ ನೋಡಲ್ ಅಧಿಕಾರಿಯೂ ಇರುತ್ತಾರೆ.

ತಾಲೂಕಿನ ಸೋಮನಾಥಪುರ ಗ್ರಾಂ ಪಂಚಾಯತಿ ಗ್ರಾಮದಲ್ಲಿ ಆರಂಭವಾದ ಕೂಸಿನ ಮನೆಗೆ ಬೀಗ ಜಡಿದು ಅದೆಷ್ಟೋ ದಿನಗಳಾಗಿವೆ. ಕೇಂದ್ರದ ಒಳಗೆ ಯಾವ ವಸ್ತುಗಳೂ ಇಲ್ಲ. ಇಂಥ ಕೇಂದ್ರಕ್ಕೆ ಮಕ್ಕಳನ್ನು ಹೇಗೆ ಕಳುಹಿಸುವುದು ಎಂಬುದು ತಾಯಂದಿರ ಪ್ರಶ್ನೆ. ಇದಕ್ಕೆ ಯಾವು ಉತ್ತರಿಸಬೇಕು ಎಂಬುದು ಮತ್ತೊಂದು ಯಕ್ಷಪ್ರಶ್ನೆಯಾಗಿದೆ.

ತಾಲೂಕಿನ ೧೨ ಕೇಂದ್ರಗಳು ಸ್ಥಗಿತ ಸರ್ಕಾರದ ನಿಯಮದಂತೆ ಈ ಕೇಂದ್ರದಲ್ಲಿ ಮಕ್ಕಳ ಮನಸೆಳೆಯುವ ಆಟಿಕೆಗಳು, ತೂಗುವ ತೊಟ್ಟಿಲು, ಬಿಸ್ಕತ್, ಬಾಳೆಹಣ್ಣು ಹಾಗೂ ಮಕ್ಕಳನ್ನು ಸಂಬಾಳಿಸುವ ಕೆಲವು ಸಿಬ್ಬಂದಿ ಇರಬೇಕು. ಆದರೆ, ಮುಖ್ಯವಾಗಿ ಚೇಳೂರು ತಾಲೂಕು ಕೇಂದ್ರದಲ್ಲಿ ಇದ್ಯಾವುದೂ ಇಲ್ಲದೆ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.ಸೋಮನಾಥಪುರ ಅಷ್ಟೇ ಅಲ್ಲ ಚೇಳೂರು ತಾಲೂಕಿನಲ್ಲಿ ಇಂಥ ೧೨ ಕೇಂದ್ರಗಳಿವೆ. ಅವುಗಳಲ್ಲಿ ಹೆಚ್ಚು ಕಡಿಮೆ ೧೨ ಕೇಂದ್ರಗಳಿಗೂ ಬೀಗ ಜಡಿಯಲಾಗಿದೆ. ಕೂಸಿನ ಮನೆ ಯಾವ ಕೇಂದ್ರಕ್ಕೂ ಮಕ್ಕಳು ಬರುತ್ತಿಲ್ಲ. ಯೋಜನೆ ಆರಂಭವಾಗಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಇನ್ನು ಸಂಪೂರ್ಣ ಅರಿವು ಮೂಡಿಲ್ಲ. ಇದರಿಂದ ಪಾಲಕರು ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸುತ್ತಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ. ಜಾಗೃತಿ ಕೊರತೆಯಿಂದ ಕೂಸಿನ ಮನೆಗಳೂ ಬಡವಾಗಿರುವುದು ನೋವಿನ ಸಂಗತಿ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಈ ಯೋಜನೆಯನ್ನು ಅರ್ಹರಿಗೆ ತಲುಪಿಸಲು ಶ್ರಮಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.ಕೋಟ್ ......................................ಕೂಸಿನ ಮನೆಗಳ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ಕೇಂದ್ರಗಳನ್ನು ತೆರೆದು ಇನ್ನಷ್ಟು ಸುಸಜ್ಜಿತಗೊಳಿಸಿ ಸದುಪಯೋಗ ಆಗುವಂತೆ ಶ್ರಮಿಸಲಾಗುವುದು. - ರಮೇಶ್ ರೆಡ್ಡಿ , ತಾಪಂ ಇಒ ಬಾಗೇಪಲ್ಲಿ