ಸಾರಾಂಶ
ನರೇಗಾ ಯೋಜನೆಯಡಿ ಕೂಲಿ ಮಾಡದಿದ್ದರೂ ಕೂಲಿಯ ಹಣವನ್ನು ದೊಡ್ಡಿಂದುವಾಡಿ ಗ್ರಾಪಂ ಖಾತೆದಾರರೊಬ್ಬರಿಗೆ 3476 ರು. ಹಣ ಹಾಕುವ ಮೂಲಕ ವಿವಾದಕ್ಕಿಡಾಗಿದೆ. ತಾಲೂಕಿನ ದೊಡ್ಡಿಂದುವಾಡಿ ಗ್ರಾಪಂಯಲ್ಲಿನ ನಿವಾಸಿ ಪ್ರಸಾದ್ ಎಂಬುವರು ಉದ್ಯೋಗಖಾತ್ರಿ ಯೋಜನೆಯಡಿ ಒಂದು ದಿನವೂ ಕೂಲಿ ಕೆಲಸಕ್ಕೆ ತೆರಳಿಲ್ಲ, ಅರ್ಜಿಯನ್ನು ಸಹಾ ಹಾಕಿಲ್ಲ, ಆದರೂ ಸಹಾ ಇವರ ಭಾರತೀಯ ಸ್ಟೇಟ್ ಬ್ಯಾಂಕ್, ದೊಡ್ಡಿಂದುವಾಡಿ ಗ್ರಾಮ ಶಾಖೆಯಲ್ಲಿ 64142948060 ಈ ಖಾತೆಗೆ ದಿನಾಂಕ 10-11-2023 ರಲ್ಲಿ 2 ಬಾರಿ ಕ್ರಮವಾಗಿ 1580 ರು., 1896 ರು. ಗಳನ್ನು ಹಾಕುವ ಮೂಲಕ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಒಟ್ಟಾರೆ ಪ್ರಸಾದ್ ಅವರ ಖಾತೆಗೆ 3476 ಜಮಾ ಮಾಡಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಜಿ ಹಾಕದಿದ್ದರೂ ಖಾತೆಗೆ 3476 ರು. ಜಮಾ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನರೇಗಾ ಯೋಜನೆಯಡಿ ಕೂಲಿ ಮಾಡದಿದ್ದರೂ ಕೂಲಿಯ ಹಣವನ್ನು ದೊಡ್ಡಿಂದುವಾಡಿ ಗ್ರಾಪಂ ಖಾತೆದಾರರೊಬ್ಬರಿಗೆ 3476 ರು. ಹಣ ಹಾಕುವ ಮೂಲಕ ವಿವಾದಕ್ಕಿಡಾಗಿದೆ. ತಾಲೂಕಿನ ದೊಡ್ಡಿಂದುವಾಡಿ ಗ್ರಾಪಂಯಲ್ಲಿನ ನಿವಾಸಿ ಪ್ರಸಾದ್ ಎಂಬುವರು ಉದ್ಯೋಗಖಾತ್ರಿ ಯೋಜನೆಯಡಿ ಒಂದು ದಿನವೂ ಕೂಲಿ ಕೆಲಸಕ್ಕೆ ತೆರಳಿಲ್ಲ, ಅರ್ಜಿಯನ್ನು ಸಹಾ ಹಾಕಿಲ್ಲ, ಆದರೂ ಸಹಾ ಇವರ ಭಾರತೀಯ ಸ್ಟೇಟ್ ಬ್ಯಾಂಕ್, ದೊಡ್ಡಿಂದುವಾಡಿ ಗ್ರಾಮ ಶಾಖೆಯಲ್ಲಿ 64142948060 ಈ ಖಾತೆಗೆ ದಿನಾಂಕ 10-11-2023 ರಲ್ಲಿ 2 ಬಾರಿ ಕ್ರಮವಾಗಿ 1580 ರು., 1896 ರು. ಗಳನ್ನು ಹಾಕುವ ಮೂಲಕ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಒಟ್ಟಾರೆ ಪ್ರಸಾದ್ ಅವರ ಖಾತೆಗೆ 3476 ಜಮಾ ಮಾಡಿದೆ. ಇದೇ ರೀತಿ ಕೂಲಿಗೆ ತೆರಳದ ಹಲವರ ಖಾತೆಗೂ ಸಹಾ ಹಣ ಬಂದಿದ್ದು ಶೇ. 10ರಷ್ಟು ಕಮಿಷನ್ ಪಡೆದುಕೊಂಡು ಖಾತೆಗೆ ಬಂದ ಹಣ ವಾಪಸ್ಸು ನೀಡುವಂತೆ ಕೆಲ ಗ್ರಾಪಂ ಸದಸ್ಯರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದ್ದು ಇದಕ್ಕೆ ಗ್ರಾಪಂ ಅಧಿಕಾರಿಗಳ ಸಹಕಾರವೂ ಇದೆ ಎನ್ನಲಾಗುತ್ತಿದೆ.ಜಿಪಂ ಅಧಿಕಾರಿಗಳಿಗೆ ಪತ್ರ ಬರೆದ ಪ್ರಸಾದ್:
ನನ್ನ ಖಾತೆಗೆ 10-11-2023ರಲ್ಲಿ ಎರಡು ಬಾರಿ ಒಟ್ಟು 3476 ರು.ಗಳು ಬಂದಿದ್ದು ನಾನು ನರೇಗಾದಡಿ ಕೆಲಸ ನಿರ್ವಹಿಸಿಲ್ಲ, ಆದರೂ ನನ್ನ ಖಾತೆಗೆ ಹಣ ಬಂದಿದ್ದು ಇದು ಗ್ರಾಪಂ ಅಧಿಕಾರಿಗಳ ಕರ್ತವ್ಯಲೋಪವಾಗಿದೆ. ಹಾಗಾಗಿ ಈ ಹಣ ನನಗೆ ಬೇಡ, ಜಿಪಂ ಅಧಿಕಾರಿಗಳು ದೂರವಾಣಿ ಮೂಲಕ ಸಂಪರ್ಕಿಸಿದರೆ ಹಣ ಹಿಂತಿರುಗಿಸುವೆ. ಈ ರೀತಿ ಲೋಪಕ್ಕೆ ಕಾರಣಿಕರ್ತರಾದವರ ವಿರುದ್ಧ ಜಿಪಂ ಅಧಿಕಾರಿಗಳು ಕ್ರಮವಹಿಸಬೇಕು ಎಂದಿದ್ದಾರೆ.