ದೊಮ್ಮನಗದ್ದೆಯ ಗ್ರಾಮ ಸಭೆಯಲ್ಲಿ ‘ನರೇಗಾ ಯೋಜನೆ’ ಗದ್ದಲ

| Published : Dec 02 2024, 01:16 AM IST

ಸಾರಾಂಶ

ಹನೂರಿನ ಅಜ್ಜಿಪುರ ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮಸಭೆ ನರೇಗಾ ಕಾಮಗಾರಿಗೆ ಸಂಬಂಧಿಸಿದ ಗ್ರಾಮಸ್ಥರ ಗದ್ದಲ ನಡುವೆ ಜರುಗಿತು. ದೊಮ್ಮನಗದ್ದೆಯಲ್ಲಿ‌ ನಡೆದಿರುವ ನರೇಗಾ ಕಾಮಗಾರಿ ಕಳೆಪೆಯಿಂದ ಕೂಡಿದೆ ಎಂದು ಗ್ರಾಪಂ ಸದಸ್ಯ ಮಾದಪ್ಪ ಆರೋಪಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಸಭೆ । ಕಾಮಗಾರಿ ಕಳಪೆ ಆರೋಪ

ಕನ್ನಡಪ್ರಭ ವಾರ್ತೆ ಹನೂರು

ಅಜ್ಜಿಪುರ ಗ್ರಾಮ ಪಂಚಾಯಿತಿಯಲ್ಲಿ ಜರುಗಿದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮಸಭೆ ನರೇಗಾ ಕಾಮಗಾರಿಗೆ ಸಂಬಂಧಿಸಿದ ಗ್ರಾಮಸ್ಥರ ಗದ್ದಲ ನಡುವೆ ಜರುಗಿತು. ದೊಮ್ಮನಗದ್ದೆಯಲ್ಲಿ‌ ನಡೆದಿರುವ ನರೇಗಾ ಕಾಮಗಾರಿ ಕಳೆಪೆಯಿಂದ ಕೂಡಿದೆ ಎಂದು ಗ್ರಾಪಂ ಸದಸ್ಯ ಮಾದಪ್ಪ ಆರೋಪಿಸಿದರು.

ಸಭೆ ಪ್ರಾರಂಭದಲ್ಲಿ ನರೇಗಾ ಸಂಯೋಜಕ ನಾರಾಯಣ್ ಮಾತನಾಡಿ, ಅಜ್ಜಿಪುರ ಗ್ರಾಪಂ ವ್ಯಾಪ್ತಿಯಲ್ಲಿ ವೈಯಕ್ತಿಕ ಹಾಗೂ ಸಾಮಾಜಿಕವಾಗಿ ಒಟ್ಟು 178 ಕಾಮಗಾರಿಗಳಿಂದ ಒಟ್ಟು 2 ಕೋಟಿ 97 ಲಕ್ಷ ರು. ಖರ್ಚು ಆಗಿದ್ದು ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬಹುದು ಎಂದರು.

‌‌ಬಳಿಕ ಗ್ರಾಪಂ ಸದಸ್ಯ ಮಾದಪ್ಪ ಮಾತನಾಡಿ, ದೊಮ್ಮನಗದ್ದೆ ಗ್ರಾಮದ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಕೈಗೊಳ್ಳಲಾಗಿರುವ ಅನೇಕ ಕಾಮಗಾರಿಗಳ ನಿರ್ವಹಣೆಯೂ ಕಳೆಪೆಯಿಂದ‌ ಕೂಡಿರುವ ಜತೆಗೆ ನಿಯಮವನ್ನು ಉಲ್ಲಂಘಿಸಿ‌ ನಿರ್ವಹಿಸಲಾಗಿದೆ. ಇದ್ದಕ್ಕೆ ಪಿಡಿಇ ಬೇಜವ್ದಾರಿತನವೇ ಕಾರಣ. ಕೂಡಲೇ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಕೆಲ ಯುವಕರು, ಗ್ರಾಮ ಪಂಚಾಯಿತಿ ಸದಸ್ಯರ ನಡುವೆ ಕೆಲ ಕಾಲ ವಾಕ್ಸಮರ ನಡೆಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ಸಭೆಯಲ್ಲಿ ನೂಡಲ್ ಅಧಿಕಾರಿ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರನಾಯ್ಕ, ಉಪಾಧ್ಯಕ್ಷ ಪ್ರಭುಸ್ವಾಮಿ, ಸದಸ್ಯರಾದ ರಾಜೇಂದ್ರ, ಕೊಳಂದೈಯಮ್ಮ, ಪಿಡಿಒ ನಂದೀಶ್, ಕಾರ್ಯದರ್ಶಿ ಶ್ರೀನಿವಾಸ್, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.