ಭವಿಷ್ಯದ ಭಾರತಕ್ಕೆ ಮೋದಿ ಮತ್ತೊಮ್ಮೆ ಅವಶ್ಯಕ: ಚಕ್ರವರ್ತಿ ಸೂಲಿಬೆಲೆ

| Published : Mar 01 2024, 02:16 AM IST

ಭವಿಷ್ಯದ ಭಾರತಕ್ಕೆ ಮೋದಿ ಮತ್ತೊಮ್ಮೆ ಅವಶ್ಯಕ: ಚಕ್ರವರ್ತಿ ಸೂಲಿಬೆಲೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿಯ ಚನ್ನಬಸವಾಶ್ರಮ ಪರಿಸರದ ಹರ್ಡೆಕರ ಮಂಜಪ್ಪ ವೇದಿಕೆಯಲ್ಲಿ ಬುಧವಾರ ಸಂಜೆ ನಮೋ ಬ್ರಿಗೇಡ್‌ ವತಿಯಿಂದ ಆಯೋಜಿಸಿದ್ದ ಚಿಂತನಾ ಸಭೆ ಉದ್ದೇಶಿಸಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಹಿಂದುಳಿದ ದೇಶವೆಂದು ಹಿಯ್ಯಾಳಿಸುತ್ತಿರುವ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಗುರುವಾಗಿ ಹೊರ ಹೊಮ್ಮುತ್ತಿರುವ ಭಾರತದ ಭವ್ಯ ಭವಿಷ್ಯಕ್ಕೆ ಮತ್ತೆ ಮೋದಿ ಅವಶ್ಯಕವಾಗಿದ್ದಾರೆ ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದ ಹರ್ಡೆಕರ ಮಂಜಪ್ಪ ವೇದಿಕೆಯಲ್ಲಿ ಬುಧವಾರ ಸಂಜೆ ನಮೋ ಬ್ರಿಗೇಡ್‌ ವತಿಯಿಂದ ಆಯೋಜಿಸಿದ್ದ ಚಿಂತನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಎಲ್ಲಾ ಶ್ರೀಮಂತ ರಾಷ್ಟ್ರಗಳಿಗೆ ಕೊರೋನಾ ಲಸಿಕೆ ನೀಡಿ ಅವರ ಪ್ರಾಣ ಉಳಿಸಿದ ಹೆಮ್ಮೆ ಭಾರತಕ್ಕೆ ತಂದು ಕೊಟ್ಟಿದ್ದು ಮೋದಿ. ಕೆಲವರು ಭಾರತೀಯರಿಗೆ ಪುಕ್ಕಟೆ ಲಸಿಕೆ ನೀಡುತ್ತಿರುವುದು ಸಹಿಸದೆ ವಿದೇಶಿ ಲಸಿಕೆಯೇ ಸುರಕ್ಷಿತ ಎಂದು ಪ್ರಚಾರ ಮಾಡಿದರು. ಆದರೆ ಇದೀಗ ವಿದೇಶಿ ಲಸಿಕೆಯ ಆವಾಂತರ ತಿಳಿದು ಬಂದಿದೆ ಎಂದರು.

ನರೇಂದ್ರ ಮೋದಿ ಭಾರತವನ್ನು ದಕ್ಷೀಣಾರ್ಧ ಗೋಳದ ನಾಯಕನನ್ನಾಗಿ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ ಬಂದ ಎಲ್ಲಾ ಸರ್ಕಾರಗಳು ಮಾಡದ ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಮಾಡಿ ದೇಶವನ್ನು ಜಗತ್ತಿಗೆ ಗುರುತಿಸುವಂತೆ ಮಾಡಿರುವ ಶ್ರೇಯ ಅವರಿಗೆ ಸಲ್ಲುತ್ತದೆ. ಹೀಗಾಗಿ ಭವ್ಯ ಭಾರತದ ಭವಿಷ್ಯಕ್ಕೆ ಮತ್ತೆ ನರೇಂದ್ರ ಮೋದಿ ಅತ್ಯವಶ್ಯಕವಾಗಿದ್ದಾರೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ದೇಶ ಸುಭದ್ರವಾಗಿರಬೇಕಾದರೆ ಮೋದಿ ಮತ್ತೆ ಗೆಲ್ಲಬೇಕು. ಕಳೆದ ಹಲವಾರು ವರ್ಷಗಳಲ್ಲಿ ಸಾಕಷ್ಟು ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದವು. ಆದರೆ ನರೇಂದ್ರ ಮೋದಿ ಕಾಲಾವಧಿಯಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.

ಮೆಹಕರ, ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಮುಖರಾದ ಶಿವು ಲೋಖಂಡೆ, ನಮೋ ಬ್ರಿಗೇಡ್‌ ತಾಲೂಕು ಸಂಚಾಲಕ ಮಹಾಲಿಂಗ ಖಂಡ್ರೆ, ಪದಾಧಿಕಾರಿಗಳಾದ ಆಶಿಶ್ ಕುಲಕರ್ಣಿ, ಸಂಗಮೇಶ ಟೆಂಕಾಳೆ, ಪ್ರಶಾಂತ ಕಾಕನಾಳೆ, ಜಗದೀಶ ಪಾಟೀಲ್‌, ವೀರಭದ್ರ ಹಲಬುರಗೆ, ಆಕಾಶ ಪಾಟೀಲ್‌ ಹಾಗೂ ರಾಜೋಳೆ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರಕ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ದೀಪಕ ಥಮಕೆ ನಿರೂಪಿಸಿದರೆ, ಮಹಾಲಿಂಗ ಖಂಡ್ರೆ ವಂದಿಸಿದರು.