ಕುರುಗೋಡು: ನಾರಿ ಶಕ್ತಿ ಎಂದರೆ ದೇಶದ ಶಕ್ತಿ. ಲೋಕಸಭೆ, ರಾಜ್ಯ ಶಾಸಕಾಂಗ ಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೊಳಿಸುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಹಂಪಿ ರಮಣ ಹೇಳಿದರು.

ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆರಂಭವಾದ ಜಾಥಾ ಮೆರವಣಿಗೆಯು ಮಹಿಳಾ ಮೋರ್ಚಾದಿಂದ ಗುರುವಾರ ಆಯೋಜಿಸಿದ್ದ ನಾರಿ ಶಕ್ತಿ ವಂದನಾ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಕುಟುಂಬದ ಬೆನ್ನೆಲುಬು ಮಾತ್ರವಲ್ಲ, ಸಮಾಜದ ಅಭಿವೃದ್ಧಿಗೆ ದಿಕ್ಕು ತೋರಿಸುವ ಶಕ್ತಿಯಾಗಿದ್ದಾರೆ. ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ವಿಜ್ಞಾನ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ರಾಜ್ಯ ಕಾರ್ಯಕಾರಣಿ ಸದಸ್ಯೆ ಡಾ ಅರುಣಾ, ಮಾತನಾಡಿ, ವಿಕಸಿತ ಭಾರತದಲ್ಲಿ ಮಹಿಳೆಯರ ಸಬಲೀಕರಣದ ಜೊತೆಗೆ ದೇಶದ ಅಭಿವೃದ್ಧಿಯಲ್ಲೂ ಮಹಿಳೆಯರ ನಾಯಕತ್ವ ವಹಿಸಬೇಕು ಎಂಬ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುತ್ತಿದೆ ಎಂದರು.

ಸಮಾಜದಲ್ಲಿ ಮಹಿಳೆಯರ ಗೌರವ, ಶಕ್ತಿ ಮತ್ತು ಸಾಧನೆ ಸ್ಮರಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಇಂತಹ ಜಾಥಾಗಳು ಮಹಿಳೆಯರ ಹಕ್ಕು, ಸಮಾನತೆ ಮತ್ತು ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುತ್ತವೆ. ನಾವು ಎಲ್ಲರೂ ಮಹಿಳೆಯರನ್ನು ಗೌರವಿಸಿ, ಅವರಿಗೆ ಸಮಾನ ಅವಕಾಶ ಕಲ್ಪಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಸಿರುಗುಪ್ಪ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಹಾಲಕ್ಷ್ಮಿ, ಕುರುಗೋಡು ಪುರಸಭೆ ಸದಸ್ಯೆ ಲಲಿತಾ ತಿಪ್ಪನಗೌಡ, ಪುರಸಭೆ ಮಾಜಿ ಉಪಾಧ್ಯಕ್ಷೆ ಪೂರ್ಣಿಮಾ, ಕುರುಗೋಡು ಮಹಿಳಾ ಮೋರ್ಚಾ ಅಧ್ಯಕ್ಷೆ ಲತಾ, ಕುರುಗೋಡು ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಿ. ವೀರಭದ್ರಗೌಡ, ಹಾಗಲೂರು ಸುರೇಶ್ ಬಾಬು, ಯುವ ಮೋರ್ಚಾ ಅಧ್ಯಕ್ಷ ಮೇಲಗಿರಿ ಬಸವರಾಜ ಇದ್ದರು.


ಕುರುಗೋಡು ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆರಂಭವಾದ ಜಾಥಾ ಮೆರವಣಿಗೆಯು ಮಹಿಳಾ ಮೋರ್ಚಾದಿಂದ ಗುರುವಾರ ನಾರಿ ಶಕ್ತಿ ವಂದನಾ ಜಾಥಾ ನಡೆಯಿತು.