ಬೇಲೂರಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಾರಿಶಕ್ತಿ ವಂದನೆ

| Published : Mar 07 2024, 01:48 AM IST

ಸಾರಾಂಶ

ಬೇಲೂರಿನ ಕೋಟೆ ಬಯಲು ರಂಗಮಂದಿರದಲ್ಲಿ ಅಂತಾರಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಪ್ರಯುಕ್ತ ನಾರಿಶಕ್ತಿ ವಂದನಾ ಕಾರ್ಯಕ್ರಮವನ್ನು ಏಪಡಿಸಲಾಗಿತ್ತು.

ವಿಡಿಯೋ ಸಂವಾದ । ಬಿಜೆಪಿ ತಾ. ಅಧ್ಯಕ್ಷ ಆನಂದ್ ಚಾಲನೆಬೇಲೂರು: ಕೋಟೆ ಬಯಲು ರಂಗಮಂದಿರದಲ್ಲಿ ಅಂತಾರಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಪ್ರಯುಕ್ತ ನಾರಿಶಕ್ತಿ ವಂದನಾ ಕಾರ್ಯಕ್ರಮವನ್ನು ಏಪಡಿಸಲಾಗಿತ್ತು

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಮಹಿಳೆಯರಿಗೆ ನೀಡಿದ ಮೀಸಲಾತಿ ಬಗ್ಗೆ ಹಾಗೂ ಕೇಂದ್ರದಿಂದ ಮಹಿಳೆಯರಿಗೆ ನೀಡಿದ ಅನುದಾನದ ಬಗ್ಗೆ ತಾಲೂಕು ಬಿಜೆಪಿ ಘಟಕ ಮೋದಿ ಅವರ ವಿಡಿಯೋ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

ಕಾರ್ಯಕ್ರಮದಲ್ಲಿ ವಿಡಿಯೋ ಸಂವಾದಕ್ಕೆ ಚಾಲನೆ ನೀಡಿದ ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ದೇಶದಲ್ಲಿ ಮಹಿಳೆಯರ ಸಬಲೀಕರಣ ಆಗಬೇಕು, ಮತದಾನ ಮಾಡಲು ಎಲ್ಲರೂ ಜಾಗೃತರಾಗಬೇಕು. ಸುಭದ್ರ ಸರ್ಕಾರ ಬರಬೇಕು. ವಿಶ್ವವೇ ಮೆಚ್ಚುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ, ವಿಶ್ವದ ಭೂಪಟದಲ್ಲಿ ಭಾರತವು ಆಗ್ರ ಸ್ಥಾನಕ್ಕೆ ಬರಲು ಮೋದಿ ಕಾರಣ, ಎಲ್ಲಾ ಸಮುದಾಯವನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ಕೆಲಸವನ್ನು ಮಾಡಿದ ಮೊದಲ ಪ್ರಧಾನಿ ಮೋದಿ, ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಮತ್ತೊಮ್ಮೆ ದೇಶಕ್ಕೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ದೇಶದ ನಾರಿ ಶಕ್ತಿಮಣಿಗಳು ಹೋರಾಡಬೇಕು ಎಂದರು.

ಬೇಲೂರು ಹಳೇಬೀಡಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಟೆ ಶ್ರೀನಿವಾಸ್ ಮಾತನಾಡಿ, ದೇಶದ ಮಹಿಳೆಯರು ಸಬಲೀಕರಣವಾಗಲು, ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ಸಮಾನರಂತೆ ಬದುಕಲು ಉಜ್ವಲ ಯೋಜನೆ, ಮಹಿಳಾ ಸ್ವಸಹಾಯ ಸಂಘಕ್ಕೆ ನೆರವು, ಹೊಸದಾಗಿ ಆರಂಭವಾಗಿರುವ ವಿಶ್ವಕರ್ಮ ಪ್ರಧಾನಿ ಯೋಜನೆ ಅಡಿಯಲ್ಲಿ ಬೃಹತ್ ಮೊತ್ತದ ಸಾಲ ವಿತರಣೆ, ಆರೋಗ್ಯ ಕಾರ್ಡ್, ಗೃಹ ಯೋಜನೆ ಇನ್ನೂ ಮುಂತಾದ ಸವಲತ್ತುಗಳನ್ನು ಜಾರಿಗೆ ತಂದು ಮಹಿಳೆಯರು ಸಮಾಜದಲ್ಲಿ ಬದುಕುವ ದಾರಿ ತೋರಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಆದ್ದರಿಂದ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮಹಿಳಾ ಶಕ್ತಿಗಳು ಶ್ರಮಿಸಬೇಕು ಎಂದರು.

ಸಮಾಜ ಸೇವೆ ಮಾಡಿದ ಮಹಿಳಾ ಸದಸ್ಯರಾದ ಇಂದಿರಮ್ಮ, ಭಾರತೀಗೌಡ ಅವರನ್ನು ಗೌರವಿಸಲಾಯಿತು. ಮಂಡಲ ಮಹಿಳಾ ಅಧ್ಯಕ್ಷೆ ಶೋಭಾ ಗಣೇಶ್, ತಾಲೂಕು ಮಹಿಳಾ ಮೋರ್ಚಾ ಸದಸ್ಯರು ಇದ್ದರು.ಅಂತಾರಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಹಿಳೆಯರನ್ನು ಬೇಲೂರಲ್ಲಿ ತಾಲೂಕು ಬಿಜೆಪಿ ಘಟಕದಿಂದ ಸನ್ಮಾನಿಸಲಾಯಿತು.