ಸಾರಾಂಶ
ಮೂಡಲಗಿ: ಶಾಲಾ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗುವಂತ ಕಾರ್ಯ ಚಟುವಟಿಕೆಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಶಾಲಾ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗುವಂತ ಕಾರ್ಯ ಚಟುವಟಿಕೆಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹೇಳಿದರು.ತಾಲೂಕಿನ ವಡೇರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂನಿಂದ ಎರಡು ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಡಾ.ಎ.ಪಿ.ಜೆ. ಅಬ್ದುಲ್‌ಕಲಾಂ ವಿಜ್ಞಾನ ಪ್ರಯೋಗಾಲಯ ಮತ್ತು ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದರು.
ವಡೇರಹಟ್ಟಿ ಗ್ರಾಪಂನವರು ₹ 2 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಪ್ರಯೋಗಾಲಯ ನಿರ್ಮಿಸಿದ್ದು ಶ್ಲಾಘನೀಯ. ಇದು ಇತರೆ ಗ್ರಾಮ ಪಂಚಾಯ್ತಿಗಳಿಗೆ ಮಾದರಿಯಾಗಿದೆ ಎಂದರು.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮ್ ಲೋಕನ್ನವರ ಮಾತನಾಡಿ, ಸಿ.ವಿ.ರಾಮನ್ ಅವರು ಭಾರತ ಕಂಡ ಶ್ರೇಷ್ಠ ವಿಜ್ಞಾನಿ. ಅವರ ಸಂಶೋಧನೆಯ ನೆನಪಿಗಾಗಿ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಅತಿಥಿ ಬಾಲಶೇಖರ ಬಂದಿ ಹಾಗೂ ವಡೇರಹಟ್ಟಿ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಆನಂದ ಹಮ್ಮನವರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅಕ್ಕವ್ವ ಮಳಿವಡೇರ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಲಕ್ಕವ್ವ ಸಾರಾಪೂರ, ಸದಸ್ಯರಾದ ಲಕ್ಷ್ಮೀ ನಂದಿ, ಪ್ರವೀಣ ಈರಗಾರ, ಲಕ್ಷ್ಮೀಬಾಯಿ ಹೊಳ್ಕರ, ರುಕ್ಮವ್ವ ಡೂಗನ್ನವರ, ವಿದ್ಯಾಶ್ರೀ ಜೋಕಾನಟ್ಟಿ, ಮಾರುತಿ ಡೊಣವಾಡ, ಸ್ವಾಗತಿ ಭಜಂತ್ರಿ, ಸಿದ್ದಯ್ಯ ಪೂಜೇರಿ, ಅಶೋಕ ಅರಸಪ್ಪಗೋಳ, ಲಕ್ಕವ್ವ ಹಾದಿಮನಿ, ಯಮನವ್ವ ತಳವಾರ, ಪಿಡಿಒ ಶಿವಾನಂದ ಗುಡಸಿ, ಮುಖ್ಯ ಶಿಕ್ಷಕ ಎಲ್.ವಿ. ಕೊರಕೊಪ್ಪ, ಎಂ.ಕೆ.ಶಿರಗೂರ, ಬಿ.ಡಿ.ರಡ್ಡಿ, ಎಸ್.ಎಂ.ನಾಯಿಕ, ಎಂ.ಎಂ.ನದಾಫ, ಬಿ.ಎಲ್. ನಾಯಿಕ, ಎಸ್.ಐ. ಈರೇಶನವರ, ಜಿ.ಆರ್.ಬಡಿಗೇರ ಭಾಗವಹಿಸಿದ್ದರು.