ಸಾರಾಂಶ
ರಬಕವಿಯ ಭಾರತ ಗ್ಯಾಸ್ ಸಿಬ್ಬಂದಿ, ಟೀಂ ಗೋವು ಸೇವಾ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸೇವಾ ಸಂಘ ಹಾಗೂ ವಿವಿಧ ಸಮಾಜಗಳ ಕಾರ್ಯಕರ್ತರಿಂದ ರಬಕವಿಯ ಹಿಂದು ರುದ್ರಭೂಮಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿಯ ಭಾರತ ಗ್ಯಾಸ್ ಸಿಬ್ಬಂದಿ, ಟೀಂ ಗೋವು ಸೇವಾ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸೇವಾ ಸಂಘ ಹಾಗೂ ವಿವಿಧ ಸಮಾಜಗಳ ಕಾರ್ಯಕರ್ತರಿಂದ ರಬಕವಿಯ ಹಿಂದು ರುದ್ರಭೂಮಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ರುದ್ರಭೂಮಿಯಲ್ಲಿ ಸೂಕ್ತ ನಿರ್ವಹಣೆಯಿಲ್ಲದೆ ಗಿಡಗಂಟಿಗಳು ಬೆಳೆದಿದ್ದರಿಂದ ಶವ ಸಂಸ್ಕಾರ ಕಾರ್ಯ ನಡೆಸಲು ಕಷ್ಟಕರವಾಗುತ್ತಿತ್ತು. ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳು, ಕಸದ ರಾಶಿಗಳ ಸರಿಯಾದ ರೀತಿಯಲ್ಲಿ ವಿಲೇವಾರಿಯಾಗದೆ ರುದ್ರಭೂಮಿಯ ಪರಿಸರ ಗಬ್ಬು ನಾರುತ್ತಿದ್ದುದನ್ನು ಗಮನಿಸಿದ ಭಾರತ ಗ್ಯಾಸ್ ಸಿಬ್ಬಂದಿ, ಧರ್ಮಸ್ಥಳ ಸೇವಾ ಸಂಘದ ಸಿಬ್ಬಂದಿ, ಟೀಂ ಗೋ ಸೇವಾ ಸದಸ್ಯರು ಹಾಗೂ ವಿವಿಧ ಸಮಾಜಗಳ ಸದಸ್ಯರು ಬುಧವಾರ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ರುದ್ರಭೂಮಿಯಲ್ಲಿರುವ ತುಕ್ಕು ಹಿಡಿಯುವ ಸ್ಥಿತಿಯಲ್ಲಿದ್ದ ಶವ ದಹನ ಚೇಂಬರ್ ಕೂಡ ಅದನ್ನೂ ಸಹ ಸ್ವಚ್ಛಗೊಳಿಸಲಾಯಿತು. ಸ್ವಚ್ಛತಾ ಕಾರ್ಯದ ಬಳಿಕ ಸಂಗ್ರಹಿಸಲಾದ ಕಸವನ್ನು ನಗರಸಭೆ ವಾಹನದಲ್ಲಿ ತುಂಬಿಸಿ ವಿಲೇವಾರಿ ಮಾಡಲಾಯಿತು.
ಚಿದಾನಂದ ಸೊಲ್ಲಾಪೂರ, ಸೋಮಶೇಖರ ಕೊಟ್ರಶೆಟ್ಟಿ, ವೀರಣ್ಣ ಗುಣಕಿ. ಈಶ್ವರ ನಾಗರಾಳ, ಪ್ರಕಾಶ ಬೀಳಗಿ. ಮಹೇಶ ಬಿಲವಡಿ ಇತರರು ಇದ್ದರು.