ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತದ ಸಂಕಲ್ಪದ ಶೇ. 33ರಷ್ಟು ಮಹಿಳಾ ಮೀಸಲಾತಿ ನಾರಿಶಕ್ತಿ ವಂದನ ಅಧಿನಿಯಮ 2026 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಬೈಕ್ ರ್ಯಾ ಲಿ ನಡೆಸಲಾಯಿತು.
ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತದ ಸಂಕಲ್ಪದ ಶೇ. 33ರಷ್ಟು ಮಹಿಳಾ ಮೀಸಲಾತಿ ನಾರಿಶಕ್ತಿ ವಂದನ ಅಧಿನಿಯಮ 2026 ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ ಹಾಗೂ ಮಾಜಿ ಶಾಸಕಿ ಸೀಮಾ ಮಸೂತಿ ಚಾಲನೆ ನೀಡಿದರು.ರ‍್ಯಾಲಿಯು ನಗರದ ಟೆಂಡರ್ ರಸ್ತೆ ಸಿರೂರ್ ಪಾರ್ಕ್ ಹಳೆ ಆದಾಯ ತೆರಿಗೆ ಕಚೇರಿ ಕೆಎಂಸಿಆರ್‌ಐ ಹಿಂಭಾಗ, ದೇಶಪಾಂಡೆ ನಗರ, ಶ್ರೀ ಸಾಯಿಬಾಬಾ ಮಂದಿರ, ಕೊಪ್ಪಿಕರ್ ರಸ್ತೆ ಮೂಲಕ ಮೂರು ಸಾವಿರ ಮಠದ ಮೈದನಕ್ಕೆ ಬಂದು ಸೇರಿತು.
ಈ ವೇಳೆ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷ ಸೀಮಾ ಲದ್ವಾ, ಮಹಿಳೆಯರಿಗೆ ರಾಜಕೀಯವಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಯೋಜನೆಯ ಲಾಭ ಪ್ರತಿಯೊಬ್ಬರಿಗೂ ತಿಳಿಯಲಿ ಎನ್ನುವ ಉದ್ದೇಶದಿಂದ ಈ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.ಈ ವೇಳೆ ಅಕ್ಕಮಹಾದೇವಿ ಹೆಗಡೆ, ಪುಷ್ಪಾ ನವಲಗುಂದ, ಸಂಗೀತಾ ಬದ್ದಿ, ಮಹಾನಗರ ಪಾಲಿಕೆಯ ಸದಸ್ಯೆ ವೀಣಾ ಭರದ್ವಾಡ, ಚಂದ್ರಿಕಾ ಮೇಸ್ತ್ರಿ, ಗಂಗಾ ಅಂಗಡಿ, ಶೀಲಾ ಕಾಟಕರ್, ದುರ್ಗಮ್ಮ ಬಿಜವಾಡ, ಶಾಂತಾ ಹಿರೇಮಠ, ಉಮೇಶ ಕೌಜಗೇರಿ,
ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ಮಂಜುನಾಥ ಕಾಟಕರ, ರಾಜು ಕೋರ್ಯಾಣಮಠ, ಅಮೃತ ಕಲ್ಪವೃಕ್ಷ, ಮಂಜುನಾಥ ಹೆಬಸೂರ, ಸುಮಾ ಶಿವನಗೌಡರ್, ವಿಜಯಾ ಗುಡಗೇರಿ, ಲಕ್ಷ್ಮಿ ದೊಡ್ಡಮನಿ, ಗೀತಾ ದೆಸಳ್ಳಿ, ಅನ್ನಪೂರ್ಣ ಪಾಟೀಲ, ಸರೋಜ ಛಬ್ಬಿ, ಮೇಘನಾ ಶಿಂಧೆ, ಮಧು ಏನಗಿಮಠ, ವಿಜಯಲಕ್ಷ್ಮಿ ತಿಮ್ಮೋಳಿ ಸೇರಿ ಹಲವರಿದ್ದರು.