ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ತುಂಬಾಡಿ ಗ್ರಾಪಂ ನೂತನ ಅಧ್ಯಕ್ಷರಾಗಿ ಟಿ.ನಟರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ಘೋಷಣೆ ಮಾಡಿದರು.ತುಂಬಾಡಿ ಗ್ರಾಪಂಯಲ್ಲಿ ಒಟ್ಟು ೧೬ ಸದಸ್ಯರ ಸಂಖ್ಯಾಬಲದ ಹೊಂದಿದ್ದು, ಅಧ್ಯಕ್ಷ ಸ್ಥಾನವು ಪರಿಶಿಷ್ಠ ಜಾತಿಗೆ ಮೀಸಲಿದ್ದು ಅಧ್ಯಕ್ಷ ಸ್ಥಾನಕ್ಕೆ ತುಂಬಾಡಿ ಗ್ರಾಮದ ಎರಡನೇ ವಾರ್ಡ್‌ನ ಸದಸ್ಯ ಟಿ.ನಟರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಸೆ.೧೩ ರಂದು ಗ್ರಾಪಂ ಸಭಾಗಂಣದಲ್ಲಿ ನಡೆದ ಅಧ್ಯಕ್ಷ ಚುನಾವಣಾ ಪಕ್ರಿಯೆಯಲ್ಲಿ ತಹಶೀಲ್ದಾರ್ ಮಂಜುನಾಥ್ ಚುನಾವಣಾ ಅಧಿಕಾರಿ ಕಾರ್ಯನಿರ್ವಹಿಸಿ ನಟರಾಜುರವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದರು. ಉಪಾಧ್ಯಕ್ಷರಾಗಿ ಎಲ್.ಲತಾ ಅವರು ಮುಂದುವರೆದಿದ್ದಾರೆ ಎಂದು ತಿಳಿಸಿದರು.ನೂತನ ಅಧ್ಯಕ್ಷ ನಟರಾಜು ಮಾತನಾಡಿ ಗ್ರಾಪಂ ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಒಟ್ಟಾಗಿ ಪಕ್ಷಾತೀತವಾಗಿ ನನ್ನನ್ನು ಬೆಂಬಲಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ, ಇವರೊಂದಿಗೆ ಗ್ರಾಮದ ಹಲವು ಮುಖಂಡರುಗಳು ಸಹ ನನ್ನ ಆಯ್ಕೆಗೆ ಸಹಕರಿಸಿದ್ದಾರೆ. ಗ್ರಾಮಗಳ ಮೂಲಭೂತ ಸೌಕರ್ಯಗಳು, ಬಡವರಿಗೆ ಆಶ್ರಯ ಮನೆಗಳು, ನಿವೇಶನಗಳು, ಸ್ವಚ್ಚತೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆಂದರು.
ಈ ಸಂದರ್ಭದಲ್ಲಿ ಪಿಡಿಓ ಪ್ರದೀಪ್‌ಕುಮಾರ್ ಸದಸ್ಯರಾದ ಹರೀಶ್‌ಬಾಬು, ಉಪಾಧ್ಯಕ್ಷೆ ಲತಾ, ಸದಸ್ಯರುಗಳಾದ ಸದಸ್ಯೆ ಪಾರ್ವತಮ್ಮ, ಟಿ.ಸಿ.ಪ್ರಸನ್ನಕುಮಾರ್, ತಿಮ್ಮಾಜಮ್ಮ, ಹೇಮಂತ ಕುಮಾರ್, ಪುಟ್ಟಮ್ಮ, ನಾಗರತ್ನಮ್ಮ, ರಮೇಶ್, ಕುಮಾರಿ, ಚಂದ್ರಶೇಖರ್, ಜಿ.ಎಂ.ಪ್ರಸನ್ನಕುಮಾರ್, ಲಕ್ಷ್ಮೀ, ರಮೇಶ್, ಶಾರದಮ್ಮ, ಮುಖಂಡರುಗಳಾದ ಮಹಾಲಿಂಗಪ್ಪ, ತಿಮ್ಮಜ್ಜ, ಸಾಕರಾಜು, ನರಸಿಂಹರಾಜು, ಸೋಮಶೇಖರ್, ವಿನಯ್‌ಬಾಬು ಮುಖಂಡ ಲಕ್ಷ್ಮೀಶ್ ಇತರರಿದ್ದರು.