ಮನೆಗಳ ಮೇಲೆ ರಾಷ್ಟಧ್ವಜ ಹಾರಿಸಿ ರಾಷ್ಟ ಪ್ರೇಮ ಮೆರೆಯಿರಿ

| Published : Aug 14 2024, 12:48 AM IST

ಮನೆಗಳ ಮೇಲೆ ರಾಷ್ಟಧ್ವಜ ಹಾರಿಸಿ ರಾಷ್ಟ ಪ್ರೇಮ ಮೆರೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಲು ತಮ್ಮ ಪ್ರಾಣ ಪಣಕ್ಕಿಟ್ಟು ಹುತಾತ್ಮರಾದ ಸೈನಿಕರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ಎಲ್ಲಾ ಮನೆಗಳ ಮೇಲೆ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಸಾರ್ವಜನಿಕರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಲು ತಮ್ಮ ಪ್ರಾಣ ಪಣಕ್ಕಿಟ್ಟು ಹುತಾತ್ಮರಾದ ಸೈನಿಕರಿಗೆ ಗೌರವ ಸಮರ್ಪಣೆ ಮಾಡುವ ಸಲುವಾಗಿ ಎಲ್ಲಾ ಮನೆಗಳ ಮೇಲೆ ಆಗಸ್ಟ್ 15 ರಂದು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಾಚರಣೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಸಾರ್ವಜನಿಕರಿಗೆ ಕರೆ ನೀಡಿದರು.

ಹೊಸದುರ್ಗ ಪುರಸಭಾ ವ್ಯಾಪ್ತಿಯಲ್ಲಿ 78ನೇ ಭಾರತ ಸ್ವಾತಂತ್ರೋತ್ಸವದ ಅಂಗವಾಗಿ ಎಲ್ಲಾ ಮನೆಗಳ ಮೇಲೆ ರಾಷ್ಟಧ್ವಜ ಹಾರಿಸಿ ರಾಷ್ಟ ಪ್ರೇಮ ಮೆರೆಯಲು ಹರ್ ಘರ್ ತಿರಂಗ ಅಭಿಯಾನವನ್ನು ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ತಿಮ್ಮರಾಜು ಇಂದು ತಾಲೂಕು ಆಡಳಿತ, ಪುರಸಭೆ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಂಘ- ಸಂಸ್ಥೆ ಗಳ ಸಂಯುಕ್ತ ಆಶ್ರಯದಲ್ಲಿ ತ್ರಿವರ್ಣ ಧ್ವಜ ಹಿಡಿದು ಮುಖ್ಯ ರಸ್ತೆಗಳಲ್ಲಿ ಸಾಗಿದ ಜಾಥ ಕಾರ್ಯಕ್ರಮದಲ್ಲಿ ಮಾತನಾಡಿದರು. ಆ. 15ರಂದು ಪಟ್ಟಣದ ಎಲ್ಲಾ ಅಂಗಡಿಗಳನ್ನು ತಳಿರು ತೋರಣಗಳಿಂದ ಸುಸಜ್ಜಿತಗೊಳಿಸುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಬೇಕು ಹಾಗೂ ನಿ಼ಷೇಧಿತ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಧ್ವಜಗಳನ್ನು ಬಳಸದಂತೆ, ಮಾರಾಟ ಮಾಡದಂತೆ ನಿ಼ಷೇಧ ಹೇರಲಾಗಿದ್ದು, ಬಟ್ಟೆಯಿಂದ ಅಥವಾ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಲಾದ ಬಾವುಟಗಳನ್ನು ಮಾತ್ರ ಹಾರಿಸಲು ಮನವಿ ಮಾಡಿದರು.

ಮನೆಯ ಮೇಲೆ ಹಾರಿಸಿದ ಬಾವುಟಗಳನ್ನು ಸೆಲ್ಫಿ, ಫೋಟೋ ತೆಗೆದು ಹರ್ ಘರ್ ತಿರಂಗ ವೆಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ಸರ್ಟಿಫಿಕೇಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರು.

ಸರ್ಕಾರದಿಂದ ದರ ನಿಗಧಿ ಮಾಡಿ ಅಂಚೆ ಕಛೇರಿಯಲ್ಲಿ ಬಾವುಟಗಳನ್ನು ಪಡೆಯಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಇ.ಓ ಸುನೀಲ್‌ರವರು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ತಿರುಪತಿ ಪಾಟೀಲ್, ಬಿಇ ಓ ಮೋಸಿನ್, ಆರೋಗ್ಯ ನಿರೀಕ್ಷಕರಾದ ಕಲ್ಪನಾ, ಬಸವರಾಜ ಎಂ, ಮಲ್ಲಿಕಾರ್ಜುನ್ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.