ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅಲೋಶಿಯಸ್ ವಿವಿಯ ಕಲಾ ಮತ್ತು ಮಾನವಿಕ ಶಾಲೆಯ ಇತಿಹಾಸ ವಿಭಾಗವು ಪಿಯು ಮತ್ತು ಪದವಿವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಮಟ್ಟದ ಬೌದ್ಧಿಕ ಮತ್ತು ಸಾಂಸ್ಕೃತಿಕ ಉತ್ಸವ ನೆಕ್ಸಸ್ 2025 ಅನ್ನು ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಆಯೋಜಿಸಿತು.ಇತಿಹಾಸಕಾರ ಮತ್ತು ಲೇಖಕ ಪ್ರೊ. ರಾಹುಲ್ ರಾಮಗುಂಡಂ ಅವರು ಮುಖ್ಯ ಅತಿಥಿಯಾಗಿದ್ದರು. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ. ಡೆನಿಸ್ ಫರ್ನಾಂಡಿಸ್ ಗೌರವ ಅತಿಥಿಯಾಗಿದ್ದರು. ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ವಿಶೇಷ ಅತಿಥಿಯಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ. ಫಾ.ಮೆಲ್ವಿನ್ ಪಿಂಟೊ ಎಸ್‌ಜೆ ವಹಿಸಿದ್ದರು.ಸ್ವಾಯತ್ತ ಕಾಲೇಜಿನ ರಿಜಿಸ್ಟ್ರಾರ್ ಡಾ. ಅಲ್ವಿನ್ ಡೇಸಾ, ಆಡಳಿತ ವಿಭಾಗದ ನಿರ್ದೇಶಕ ಡಾ. ಚಾರ್ಲ್ಸ್ ವಿ. ಫುರ್ಟಾದೋ, ಕಲಾ ಮತ್ತು ಮಾನವಿಕ ಶಾಲೆಯ ಡೀನ್ ಡಾ. ರೋಸ್ ವೀರಾ ಡಿಸೋಜಾ, ಇತಿಹಾಸ ವಿಭಾಗದ ಮುಖ್ಯಸ್ಥೆ ಮತ್ತು ನೆಕ್ಸಸ್ 2025 ರ ಸಂಯೋಜಕಿ ಡಾ. ಮೋನಾ ಮೆಂಡೋನ್ಸಾ, ಇತಿಹಾಸ ಉಪನ್ಯಾಸಕರಾದ ಕಿಶೋರ್ ಚಂದ್ರ ಮತ್ತು ಶಿಲ್ಪಲತಾ, ನೆಕ್ಸಸ್ 2025 ರ ವಿದ್ಯಾರ್ಥಿ ಸಂಯೋಜಕರಾದ ಅಮಿತ್ ಕುಮಾರ್ ಚೌಧರಿ ಮತ್ತು ಎಲ್ವಿಸ್ ಫ್ರಾಂಕ್ಲಿನ್ ಲೋಬೊ ಇದ್ದರು. ರಿಯಾ ಕಾರ್ಯಕ್ರಮ ನಿರೂಪಿಸಿದರು. ಎಲ್ವಿಸ್ ಫ್ರಾಂಕ್ಲಿನ್ ಲೋಬೊ ಸ್ವಾಗತಿಸಿದರು.ಸುಮಾರು 10 ಕಾಲೇಜುಗಳಿಂದ 135 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.ಸಮಾರೋಪ ಸಮಾರಂಭದಲ್ಲಿ ಎಂಆರ್‌ಪಿಎಲ್‌ನ ಕಾರ್ಪೊರೇಟ್ ಕಮ್ಯುನಿಕೇಷನ್ಸ್‌ನ ಜಿಎಂ ಡಾ. ರುಡಾಲ್ಫ್ ನೊರೊನ್ಹಾ ಭಾಗವಹಿಸಿದ್ದರು. ಎನ್‌ಐಟಿಕೆ ಸುರತ್ಕಲ್‌ನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅರುಣ್ ಇಸ್ಲೂರ್ ಆಗಮಿಸಿದ್ದರು. ಡಾ. ಅರುಣ್ ಇಸ್ಲೂರ್ ರವರ ತಂದೆ ಮತ್ತು ಚಿಕ್ಕಪ್ಪನ ಸಂಗ್ರಹಗಳಿಂದ 2,732 ಪುಸ್ತಕಗಳನ್ನು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ದಾನ ಮಾಡಿದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು.ಸಮಗ್ರ ಚಾಂಪಿಯನ್‌ಶಿಪ್ ಅನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜು ಮತ್ತು ಉಡುಪಿಯ ಪೂರ್ಣಪ್ರಜ್ಞಾಕಾಲೇಜು ಹಂಚಿಕೊಂಡವು. ವಿದ್ಯಾರ್ಥಿ ಸಂಯೋಜಕಿ ಎಲ್ವಿಸ್ ಫ್ರಾಂಕ್ಲಿನ್ ಲೋಬೊ ವಂದಿಸಿದರು.
--------------