ಈಚೆಗೆ ಉಡುಪಿಯಲ್ಲಿ ನಡೆದ ಕೇನ್-ಇ-ಮಾಬೂನಿ ಶಿತೋ-ರ್ಯೂ ಕಂಪೀಟ್ 5.0 ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಾರವಾರದ ಬಾಲಮಂದಿರ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ
ಈಚೆಗೆ ಉಡುಪಿಯಲ್ಲಿ ನಡೆದ ಕೇನ್-ಇ-ಮಾಬೂನಿ ಶಿತೋ-ರ್ಯೂ ಕಂಪೀಟ್ 5.0 ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕಾರವಾರದ ಬಾಲಮಂದಿರ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ಕಾರವಾರಕ್ಕೆ ಕೀರ್ತಿ ತಂದಿದ್ದಾರೆ.ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಪ್ರೀತಮ್ ತೊಗುನಾಸಿ ಕುಮಿಟೆಯಲ್ಲಿ ಚಿನ್ನ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗೆದ್ದರು. ಪ್ರೀತಮ್ ಪಟಗಾರ ಕುಮಿಟೆಯಲ್ಲಿ ಚಿನ್ನದ ಪದಕ ಪಡೆದರೆ, ರಿಷಿಕಾ ಗೌಡ ಕುಮಿಟೆ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗಳಿಸಿದರು. ಓಂಕಾರ ಜುಗದರ್ ಕುಮಿಟೆ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಪಡೆದರು. ಲೋಹಿತ್ ಮಡಿವಾಳ ಕುಮಿಟೆಯಲ್ಲಿ ಕಂಚು ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗಳಿಸಿದರು. ಹರ್ಷ ಲಮಾಣಿ ಹಾಗೂ ಆಯುಷ್ ನಾಯಕ ಕುಮಿಟೆ ಮತ್ತು ಕಟಾ ವಿಭಾಗಗಳಲ್ಲಿ ಕಂಚಿನ ಪದಕ ಪಡೆದರು.
ಬ್ರೌನ್ ಬೆಲ್ಟ್ ವಿಭಾಗದಲ್ಲಿ ಪ್ರಥಮ್ ರಾವ್ ಹಾಗೂ ಮಹೇಶ್ ಭೋವಿ ಕುಮಿಟೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.ಕಲರ್ ಬೆಲ್ಟ್ ವಿಭಾಗದಲ್ಲಿಯೂ ಕಾರವಾರದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಆರಾಧ್ಯಾ ಮಾಲ್ಸೆಕರ್ ಕುಮಿಟೆಯಲ್ಲಿ ಚಿನ್ನದ ಪದಕ ಪಡೆದರೆ, ಶರ್ಮಿಷ್ಠಾ ತಳೇಕರ್ ಕುಮಿಟೆಯಲ್ಲಿ ಬೆಳ್ಳಿ ಹಾಗೂ ಕಟಾದಲ್ಲಿ ಚಿನ್ನದ ಪದಕ ಗೆದ್ದರು. ಆದಿಶ್ ಬಾಂದೇಕರ್ ಕುಮಿಟೆ ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗಳಿಸಿದರು. ವಿಭಾ ಎ., ಪ್ರಣವ್ ನಾಯ್ಕ ಹಾಗೂ ಅಂಶ್ ನಾರ್ವೇಕರ್ ಕುಮಿಟೆಯಲ್ಲಿ ಬೆಳ್ಳಿ ಪದಕ ಪಡೆದರು.
ಇದೇ ವಿಭಾಗದಲ್ಲಿ ಆರ್ಯಾಹಿ ಬಾಂದೇಕರ್ ಕುಮಿಟೆಯಲ್ಲಿ ಕಂಚು ಹಾಗೂ ಕಟಾದಲ್ಲಿ ಬೆಳ್ಳಿ ಪದಕ ಗೆದ್ದರು. ಆದಿತ್ಯ ಚಿಪ್ಕರ್, ಧ್ರುವ ನಾಯ್ಕ, ನಿರ್ಮಯ್ ಕಿತ್ತೂರು ಹಾಗೂ ಅದ್ರುತಿ ಥೋಳಾರ್ ಕುಮಿಟೆಯಲ್ಲಿ ಕಂಚಿನ ಪದಕ ಗಳಿಸಿದರು. ಸೋಹಂ ಬಾಂದೇಕರ್ ಕುಮಿಟೆ ಹಾಗೂ ಕಟಾದಲ್ಲಿ ಕಂಚಿನ ಪದಕ ಪಡೆದರೆ, ನಂದನ್ ಚೌಗುಲೆ ಕೂಡ ಕುಮಿಟೆ ಹಾಗೂ ಕಟಾ ವಿಭಾಗಗಳಲ್ಲಿ ಕಂಚಿನ ಪದಕ ಗೆದ್ದರು.