ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (KAHER) ನ ಅಂಗಸಂಸ್ಥೆಯಾದ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯವು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (KAHER) ನ ಅಂಗಸಂಸ್ಥೆಯಾದ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯವು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.ವಿಶ್ವವಿದ್ಯಾಲಯದ ಆರೋಗ್ಯ ವೃತ್ತಿಪರರಿಗಾಗಿ ಶಿಕ್ಷಣ ವಿಭಾಗದ (UDEHP) ದೂರದೃಷ್ಟಿ ಕುರಿತು ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಅನೇಕರು ಉತ್ಕೃಷ್ಟಮಟ್ಟದ ವೈದ್ಯಕೀಯ ಚಿಂತನೆಗಳು, ಅನುಭವಗಳನ್ನು ಹಂಚಿಕೊಂಡರು. ಆಧುನಿಕ ವೈದ್ಯಕೀಯ ಬೋಧನಾ ಪದ್ಧತಿಯಲ್ಲಿನ ಸವಾಲುಗಳು, ಭವಿಷ್ಯದ ವೈದ್ಯ ಪದ್ಧತಿಯ ಕುರಿತು ವಿಶ್ಲೇಷಣಾತ್ಮಕ ಮಾತುಗಳು ಕೂಡ ವೈದ್ಯರಿಂದ ಕೇಳಿಬಂದವು. ಕಾರ್ಯಕ್ರಮದಲ್ಲಿ ವಿವಿಧ ಆಯುರ್ವೇದ ಕಾಲೇಜುಗಳಿಂದ ಒಟ್ಟು 180 ಪ್ರತಿನಿಧಿಗಳು ಪಾಲ್ಗೊಂಡಿದ್ದರು.ನವದೆಹಲಿಯ ಎನ್‌ಸಿಐಎಸ್‌ಎಂ ಅಧ್ಯಕ್ಷ ಪ್ರೊ.ಡಾ.ಮನೀಷಾ ಯು.ಕೋಥೇಕರ್ ಅವರು ನಿಯಂತ್ರಣಾತ್ಮಕ ವಿಷಯಗಳ ಕುರಿತು ಅಮೂಲ್ಯವಾದ ಒಳನೋಟಗಳ ಕುರಿತು ಮಾತನಾಡಿದ್ದು, ಮನಮುಟ್ಟುವಂತಿತ್ತು. ನವದೆಹಲಿ ಎಂಎಆರ್‌ಬಿಐಎಸ್‌ಎಂ, ಎನ್‌ಸಿಐಎಸ್‌ಎಂ ಅಧ್ಯಕ್ಷ ಪ್ರೊ.ಡಾ.ಮುಕುಲ್ ಪಟೇಲ್ ಹಾಜರಿದ್ದರು. ಅತಿಥಿಗಳಾಗಿ ಕಾಹೆರ್ ಕುಲಸಚಿವ ಪ್ರೊ.ಡಾ.ವಿಶ್ವನಾಥ್ ಎಂ.ಪಟ್ಟಣಶೆಟ್ಟಿ ಮತ್ತು ಕಾಹೆರ್‌ನ ಇಂಟಿಗ್ರೇಟಿವ್ ಮೆಡಿಸಿನ್, ಕ್ಲಿನಿಕಲ್ ಸರ್ವಿಸಸ್ ಮತ್ತು ಸಂಶೋಧನೆಯ ನಿರ್ದೇಶಕ ಪ್ರೊ.ಡಾ.ಬಿ.ಎಸ್.ಪ್ರಸಾದ್ ಭಾಗವಹಿಸಿದ್ದರು. ಕಾಹೆರ್‌ನ ಕುಲಪತಿ ಪ್ರೊ.ಡಾ.ಸಂದೀಪ್ ಶ್ರೀವಾಸ್ತವ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ಯಶಸ್ಸಿಗೆ ಕೆಎಲ್‌ಇ ಸಂಸ್ಥೆಯ ಶ್ರೀ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ವೈದ್ಯಕೀಯ ನಿರ್ದೇಶಕ ಪ್ರೊ.ಡಾ.ಸುಹಾಸ್ ಕುಮಾರ್ ಶೆಟ್ಟಿ, ನಿರ್ದೇಶಕ ಯುಡಿಇಎಚ್‌ಪಿ ಡಾ.ಸುನೀತಾ ವೈ.ಪಾಟೀಲ ಮತ್ತು ಯುಡಿಇಎಚ್‌ಪಿ ಸಮನ್ವಯಾಧಿಕಾರಿ ಡಾ.ಮಂಜುಳಾ ಕಿವಡಸನ್ನವರ್ ಮುಂದಾಳತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.