ರಾಷ್ಟ್ರಮಟ್ಟದ ಶೂಟಿಂಗ್‌: ರಾಕೇಶ್, ಜ್ಯೋತಿಗೆ ಬೆಳ್ಳಿ, ಸಚಿನ್‌ಗೆ ಕಂಚು

| Published : Jan 02 2025, 12:31 AM IST

ಸಾರಾಂಶ

ದೆಹಲಿಯ ಡಾ. ಕರುಣಿಸಿಂಗ್‌ ಶೂಟಿಂಗ್‌ ರೇಜ್‌ನಲ್ಲಿ ಹಾಗೂ ಮಧ್ಯ ಪ್ರದೇಶದ ಭೋಪಾಲನಲ್ಲಿ ರೈಫಲ್‌ ವಿಭಾಗ 67ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶೂಟಿಂಗ್‌ ಅಕಾಡೆಮಿಯ ಶೂಟರ್ಸ್‌ ಉತ್ತಮ ಪ್ರದರ್ಶನ ತೋರಿದ್ದಾರೆ.

ಹುಬ್ಬಳ್ಳಿ: ಕಳೆದ ಡಿ. 15ರಿಂದ 31ರ ವರೆಗೆ ನ್ಯಾಷನಲ್ ರೈಫಲ್ ಅಸೋಸಿಯೇಷನ್ ವತಿಯಿಂದ ದೆಹಲಿಯ ಡಾ. ಕರುಣಿಸಿಂಗ್‌ ಶೂಟಿಂಗ್‌ ರೇಜ್‌ನಲ್ಲಿ ಹಾಗೂ ಮಧ್ಯ ಪ್ರದೇಶದ ಭೋಪಾಲನಲ್ಲಿ ರೈಫಲ್‌ ವಿಭಾಗ 67ನೇ ನ್ಯಾಷನಲ್ ಶೂಟಿಂಗ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶೂಟಿಂಗ್‌ ಅಕಾಡೆಮಿಯ ಶೂಟರ್ಸ್‌ ಉತ್ತಮ ಪ್ರದರ್ಶನ ತೋರಿದ್ದಾರೆ.

ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ 4 ಪ್ಯಾರಾ ಶೂಟರ್ ಮತ್ತು 30 ಜನ ಸಾಮಾನ್ಯ ಶೂಟರ್ಸ್ ಭಾಗವಹಿಸಿದ್ದರು. ಶೂಟರ್ಸ್‌ಗಳಾದ ರಾಕೇಶ್ ನಿಡಗುಂದಿ 50.3 ಮೀಟರ್‌ ವಿಭಾಗದಲ್ಲಿ ಒಂದು ಬೆಳ್ಳಿ ಪದಕ ಹಾಗೂ 10 ಮೀಟರ್‌ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. 50.3 ಮೀಟರ್‌ ಪೊಸಿಶನ್‌ ರೈಫಲ್‌ ವಿಭಾಗದಲ್ಲಿ ಜ್ಯೋತಿ ಸಣ್ಣಕ್ಕಿ ಬೆಳ್ಳಿ ಪದಕ ಪಡೆದರು. ಸಚಿನ್ ಸಿದ್ದಣ್ಣವರ 50 ಮೀಟರ್‌ ರೈಫಲ್‌ ಮಿಕ್ಸಡ್‌ ಪ್ರೋನ್ ವಿಭಾಗದಲ್ಲಿ ಕಂಚಿನ ಪದಕ ಪಡೆದರು.

ದೆಹಲಿಯಲ್ಲಿ ನಡೆದ ಪಿಸ್ತೂಲ್ ವಿಭಾಗದಲ್ಲಿ 50 ಮೀಟರ್ ಮತ್ತು 10 ಮೀಟರ್‌ನಲ್ಲಿ ಸಿದ್ದಾರ್ಥ್ ದಿವಟೆ ಮತ್ತು ಐಶ್ವರ್ಯ ಬಾಲೆಹೊಸೂರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರಲ್ಲದೆ ಹುಬ್ಬಳ್ಳಿಯ ಶೂಟರ್ಸ್ ಶ್ರೇಯಾ ದೇಶಪಾಂಡೆ, ಬೃಂದಾ ಮರೋಳ, ಮೇಘಾ ಕದಮ, ಹರ್ಷಾ ಭದ್ರಾಪುರ, ಶ್ರೀಕರ್ ಸಬನಿಸ್, ಆದರ್ಶ ನಿಕಮ್, ವರುಣ ಅಗಸಿಮನಿ, ಇವರೆಲ್ಲರೂ ಇಂಡಿಯನ್ ಶೂಟಿಂಗ್ ಸೆಲೆಕ್ಷನ್ ಟ್ರಾಯಲ್ಸ್ ಗೆ ಆಯ್ಕೆಯಾಗಿದ್ದಾರೆ.

ಮೊದಲ ಬಾರಿಗೆ ಹುಬ್ಬಳ್ಳಿ ಶೂಟರ್ಸ್‌ ರಾಷ್ಟ್ರಮಟ್ಟದ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಶೂಟಿಂಗ್ ಸ್ಪರ್ಧೆಯಲ್ಲಿ 2 ಬೆಳ್ಳಿ, 2 ಕಂಚಿನ ಪದಕ ಮತ್ತು ಇಷ್ಟೊಂದು ಜನ ಇಂಡಿಯನ್ ಶೂಟಿಂಗ್ ಟಿಮ್ ಸೆಲೆಕ್ಷನ್ ಟ್ರಾಯಲ್ಸ್ ಗೆ ಆಯ್ಕೆಯಾಗಿರುವುದು ಧಾರವಾಡ ಜಿಲ್ಲೆಗೆ ಹೆಮ್ಮೆಯ ವಿಷಯ. ಇವರೆಲ್ಲರೂ ಮಾಜಿ ಸೈನಿಕರಾದ ರವಿಚಂದ್ರ ಬಾಲೆಹೊಸೂರ ಅವರ ಹತ್ತಿರ ತರಬೇತಿ ಪಡೆಯುತ್ತಿದ್ದಾರೆ.