ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ವಚನಗಳು, ಸೂಫಿವಾದ ಹಾಗೂ ಝೆನ್ ಬೌದ್ಧಧರ್ಮ ಎಂಬ ಶೀರ್ಷಿಕೆಯಡಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಬುಕ್ ಬ್ರಹ್ಮ ಸಹಯೋಗದೊಂದಿಗೆ ಸೆ.12ಶುಕ್ರವಾರ ತಿಪಟೂರಿನ ಕಲ್ಪತರು ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ ಎಂದು ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜಿ.ಪಿ.ದೀಪಕ್ ತಿಳಿಸಿದರು.ನಗರದ ಕಲ್ಪತರು ವಿಜ್ಞಾನ ಕಾಲೇಜಿನ ಆಡಳಿತ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 62 ವರ್ಷದ ಹಿಂದೆ ತಿಪಟೂರಿನಲ್ಲಿ ಪ್ರಾರಂಭವಾದ ಕಲ್ಪತರು ಕಾಲೇಜಿಗೆ ಸುದೀರ್ಘ ಇತಿಹಾಸವಿದೆ. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದ್ದು ಡಾ.ರಾಜೇದ್ರ ಚೆನ್ನಿ, ಡಾ. ನಟರಾಜ್ ಭೂದಾಳ್, ಡಾ. ಸುಕನ್ಯ ಕನರಳ್ಳಿ ಹಾಗೂ ಡಾ. ವಿ.ಎಸ್.ಶ್ರೀಧರ ಸೇರಿದಂತೆ ಅನೇಕರು ಆಗಮಿಸಿ ಪ್ರಬಂಧ ಮಂಡಿಸಲಿದ್ದಾರೆ ಎಂದು ತಿಳಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಆರ್.ಸಂಗಮೇಶ್ ಮಾತನಾಡಿ, ಶಾಂತಿ ಎಂದರೆ ಭಾರತ ಎಂದು ಹೆಸರು ಪಡೆದಿರುವ ಈ ದೇಶದಲ್ಲಿ ಹಿಂದೂ, ಬೌದ್ಧ, ಜೈನ ಧರ್ಮ ಹುಟ್ಟಿದೆ. ದಾರ್ಶನಿಕರು ರಚಿಸಿದ ವಷನಗಳಲ್ಲಿ ನಮ್ಮ ಸಂಸ್ಕೃತಿ ಅಡಗಿದೆ. ಇಂತಹ ವಿಷಯಗಳ ಬಗ್ಗೆ ಒಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ನಮ್ಮ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದು ಎಲ್ಲ ಕಾಲೇಜುಗಳ ಪದವಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿಗಳಾದ ಹೆಚ್.ಜಿ.ಸುಧಾಕರ್, ಟಿ.ಯು ಜಗದೀಶಮೂರ್ತಿ, ಕಲ್ಪತರು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎನ್.ಉಮೇಶ್, ಪಲ್ಲಾಗಟ್ಟಿ ಕಾಲೇಜಿನ ಡಾ.ವಿಜಯಕುಮಾರಿ, ಸಂಚಾಲಕರಾದ ಬಿ.ಸಿ.ವಿನುತಾ, ಎಂ.ಎಸ್.ಲೋಕೇಶ್ವರಯ್ಯ ಉಪಸ್ಥಿತರಿದ್ದರು.