ಸಾರಾಂಶ
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆ.೧೩ ರಿಂದ ೧೬ ರವರೆಗೆ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಮಟ್ಟದ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ವಾಲಿಬಾಲ್ ಚಾಂಪಿಯನ್‌ಶಿಪ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಎಂ. ನಿಜಗುಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಫೆ.೧೩ ರಿಂದ ೧೬ ರವರೆಗೆ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಮಟ್ಟದ ಆಹ್ವಾನಿತ ಪುರುಷ ಹಾಗೂ ಮಹಿಳೆಯರ ವಾಲಿಬಾಲ್ ಚಾಂಪಿಯನ್‌ಶಿಪ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಎಂ. ನಿಜಗುಣ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟೂರ್ನಮೆಂಟ್ ಹಿನ್ನೆಲೆ ತಾಲೂಕಿನ ಶಾಲಾ ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಕೆ.ಷಡಕ್ಷರಿ, ರಾಷ್ಟ್ರೀಯ ಖೋಖೋ ಸಂಸ್ಥೆ ಉಪಾಧ್ಯಕ್ಷ ಲೋಕೇಶ್ವರ, ಕ್ರೀಡಾ ಮತ್ತು ಸಾಂಸ್ಕೃತಿಕ ಇಲಾಖೆ ಆಯುಕ್ತ ಚೇತನ್, ಮಾಜಿ ಸಚಿವ ಬಿ.ಸಿ ನಾಗೇಶ್, ಮಾಜಿ ಶಾಸಕ ಬಿ.ನಂಜಾಮರಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಂಘದ ಸದಸ್ಯ ಕೆ.ಎಸ್. ನವೀನಕುಮಾರ್ ಮಾತನಾಡಿ, ಈ ಟೂರ್ನಮೆಂಟ್‌ಗೆ ಭಾರತೀಯ ವಾಯುಸೇನೆ, ಭಾರತೀಯ ಆರ್ಮಿ, ನೌಕಾದಳ, ಬಿಪಿಸಿಎಲ್, ಕೇರಳ ಪೊಲೀಸ್ ವಾಲಿಬಾಲ್ ತಂಡಗಳು ಭಾಗವಹಿಸಲಿವೆ ಎಂದರು,
ಸ್ಪಂದನಾ ಸಂಸ್ಥೆ ತೋಂಟಾರಾಧ್ಯ, ಕಾಸ್ಮೋ ಪಾಲಿಟನ್ ಕ್ಲಬ್ ಕಾರ್ಯದರ್ಶಿ ಎಂ.ಬಿ.ಸಿದ್ದರಾಮಯ್ಯ, ಜಿ. ಮನೋಜ್, ಅಭಿ, ನಗರಸಭಾ ಸದಸ್ಯ ಸಂಗಮೇಶ್, ಮಾರನಗೆರೆ ಚಂದ್ರು, ಪಂಚಣ್ಣ, ರೇಸಣು ಮಾದೀಹಳ್ಳಿ, ವಿಜಯ್ ಕುಮಾರ್, ಚಂದ್ರಶೇಖರ್, ನವೀನ್ ಮತ್ತಿತರರಿದ್ದರು.