ಜ. 27, 28ರಂದು ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ

| Published : Jan 15 2024, 01:48 AM IST

ಜ. 27, 28ರಂದು ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ರಾಜಕೀಯ ಪಕ್ಷಗಳು ವಿವಿಧ ರೀತಿಯ ಪ್ರಭಾವ, ಹಣದ ಹೊಳೆ ಹರಿಸಿ ಹಾಗೂ ಅನೇಕ ಆಮಿಷಗಳನ್ನು ತೋರಿಸಿ ಲಿಂಗಾಯತ ಸಮಾಜದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸವಿತಾ ನಡಕಟ್ಟಿ ಹೇಳಿದರು.

ಧಾರವಾಡ: ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಮಾಠಾಧೀಶರ ಒಕ್ಕೂಟ ಹಾಗೂ ಎಲ್ಲ ಬಸವ ಪರ ಸಂಘಟನೆಗಳ ಸಹಕಾರ ಮತ್ತು ಸಹ ಭಾಗಿತ್ವದೊಂದಿಗೆ ಜ.27 ಮತ್ತು 28ರಂದು ಎರಡು ದಿನಗಳ ರಾಷ್ಟ್ರೀಯ ಲಿಂಗಾಯತ ಮಹಿಳಾ ಸಮಾವೇಶ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಜಿಲ್ಲಾಧ್ಯಕ್ಷೆ ಸವಿತಾ ನಡಕಟ್ಟಿ ಹೇಳಿದರು.

ಬಸವ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಬಹುಸಂಖ್ಯಾತ ಲಿಂಗಾಯತ ಮತಗಳಿಗಾಗಿ ಎಲ್ಲ ರಾಜಕೀಯ ಪಕ್ಷಗಳು ವಿವಿಧ ರೀತಿಯ ಪ್ರಭಾವ, ಹಣದ ಹೊಳೆ ಹರಿಸಿ ಹಾಗೂ ಅನೇಕ ಆಮಿಷಗಳನ್ನು ತೋರಿಸಿ ಲಿಂಗಾಯತ ಸಮಾಜದ ಒಗ್ಗಟ್ಟನ್ನು ಒಡೆಯಲು ಪ್ರಯತ್ನಿಸಲಾಗುತ್ತಿದೆ. ಆದ್ದರಿಂದ ಈ ತರಹದ ರಾಜಕೀಯದಿಂದ ಲಿಂಗಾಯತರು ಎಚ್ಚರಗೊಳ್ಳಬೇಕಾಗಿದೆ. ಲಿಂಗಾಯತರಿಗೆ ತಮ್ಮ ಆಸ್ಮಿತೆ ಅವಶ್ಯ ಎಂದರು.

ಬಸವಧರ್ಮದ ತತ್ವಸಿದ್ಧಾಂತಗಳ ಪ್ರಚಾರ ಮತ್ತು ಅನುಷ್ಠಾನ ಮಹಿಳೆಯರ ಪಾತ್ರದ ಕುರಿತು ಚರ್ಚಿಸಲು ಬೆಳಗಾವಿ ಸಮಾವೇಶದಲ್ಲಿ ವಿಚಾರ ಗೋಷ್ಠಿ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯ, ಹೊರ ರಾಜ್ಯಗಳಿಂದ ಬಸವ ಭಕ್ತರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಸಮಾಜದ ಮಹಿಳೆಯರು ಸಮಾವೇಶ ಯಶಸ್ವಿ ಮಾಡಬೇಕೆಂದರು.

ಸಭೆಯಲ್ಲಿ ಉಮಾ ಅಗಡಿ, ಶಕುಂತಲಾ ಮನ್ನoಗಿ, ಶಿವಣ್ಣ ಶರನ್ನವರ್, ಎಂ.ವಿ. ಗೊಂಗಡಶೆಟ್ಟರ್, ಗೌರಮ್ಮಾ ಬಲೂಗಿ, ಲತಾ ಮಂಟಾ, ಸುಜಾತ ನಾಗನಗೌಡ್ರ್, ಜಿ.ಆರ್. ಜವಳಗಿ ಇದ್ದರು. ಬಸವoತ ತೋಟದ ನಿರೂಪಿಸಿದರು. ಶಿವರುದ್ರಗೌಡ ಪಾಟೀಲ್ ಸ್ವಾಗತಿಸಿದರು. ಅರುಣ ಮೂಡಿ ವಂದಿಸಿದರು.