ಸಾರಾಂಶ
ಪರಸ್ಪರ ರಾಜಿ–ಸಂಧಾನದ ಮೂಲಕ ದೀರ್ಘ ಕಾಲದಿಂದ ನ್ಯಾಯಾಲಯಗಳಲ್ಲಿ ಅವಲಂಬಿಸಿ ನಿಂತಿರುವ ಪ್ರಕರಣಗಳನ್ನು ಬಗೆಹರಿಸುವಲ್ಲಿ ಲೋಕ್ ಆದಾಲತ್ ಪ್ರಮುಖ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ನಾಗರಿಕರು ಪಡೆಯಲು ಕೋರಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ತಿಳಿಸಿದರು. ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಯ ಮತ್ತು ಹಣ ವ್ಯಯವಾಗುತ್ತಿದ್ದು, ಕಕ್ಷಿದಾರರು ಮಾನಸಿಕ ಒತ್ತಡ ಅನುಭವಿಸುವ ಪರಿಸ್ಥಿತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಲೋಕ್ ಆದಾಲತ್ ಕಲಾಪಗಳು ನ್ಯಾಯಾಂಗಕ್ಕೆ ಪರ್ಯಾಯ ಪರಿಹಾರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಅರಸೀಕೆರೆ: ಅರ್ಜಿದಾರರು ಮತ್ತು ಕಕ್ಷಿದಾರರು ತಮ್ಮ ಪ್ರಕರಣಗಳನ್ನು ವೇಗವಾಗಿ ಹಾಗೂ ಅಲ್ಪ ವೆಚ್ಚದಲ್ಲಿ ಪರಿಹರಿಸಿಕೊಳ್ಳುವ ಉತ್ತಮ ಅವಕಾಶವಾಗಿ ಡಿಸೆಂಬರ್ 13ರಂದು ರಾಷ್ಟ್ರೀಯ ಲೋಕ್ ಆದಾಲತ್ ಜರುಗಲಿದೆ.
ಪರಸ್ಪರ ರಾಜಿ–ಸಂಧಾನದ ಮೂಲಕ ದೀರ್ಘ ಕಾಲದಿಂದ ನ್ಯಾಯಾಲಯಗಳಲ್ಲಿ ಅವಲಂಬಿಸಿ ನಿಂತಿರುವ ಪ್ರಕರಣಗಳನ್ನು ಬಗೆಹರಿಸುವಲ್ಲಿ ಲೋಕ್ ಆದಾಲತ್ ಪ್ರಮುಖ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ನಾಗರಿಕರು ಪಡೆಯಲು ಕೋರಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ತಿಳಿಸಿದರು.ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಾತನಾಡಿದ ಅವರು, ನಗರ ಮತ್ತು ತಾಲೂಕಿನ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 11 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಯ ಮತ್ತು ಹಣ ವ್ಯಯವಾಗುತ್ತಿದ್ದು, ಕಕ್ಷಿದಾರರು ಮಾನಸಿಕ ಒತ್ತಡ ಅನುಭವಿಸುವ ಪರಿಸ್ಥಿತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಲೋಕ್ ಆದಾಲತ್ ಕಲಾಪಗಳು ನ್ಯಾಯಾಂಗಕ್ಕೆ ಪರ್ಯಾಯ ಪರಿಹಾರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.ಡಿಸೆಂಬರ್ 13ರಂದು ನಡೆಯುವ ಈ ಲೋಕ್ ಆದಾಲತ್‌ನಲ್ಲಿ ಜಮೀನು ವಿವಾದ, ಕುಟುಂಬ ಕಲಹ, ಪಾಲುದಾರಿಕೆ ವಿವಾದ, ಕ್ರಿಮಿನಲ್ ಚೆಕ್ ಬೌನ್ಸ್ ಕೇಸ್‌ಗಳು, ವಿವಾಹ ವಿಚ್ಛೇದನ, ಬ್ಯಾಂಕ್ ಸಾಲದ ವಸೂಲಿ ಪ್ರಕರಣಗಳು, ಜೀವನಾಂಶ ಪ್ರಕರಣಗಳು ಮುಂತಾದವುಗಳನ್ನು ವಕೀಲರು ಮತ್ತು ಕಕ್ಷಿದಾರರ ಪರಸ್ಪರ ಸಮಾಲೋಚನೆ ಮತ್ತು ಒಪ್ಪಂದದ ಮೂಲಕ ಇತ್ಯರ್ಥಗೊಳಿಸಲು ಅವಕಾಶ ಕಲ್ಪಿಸಲಾಗಿದೆ.;Resize=(128,128))
;Resize=(128,128))