ನ್ಯಾಷನಲ್‌ ರ್‍ಯಾಲಿ ಚಾಂಪಿಯನ್‌ಶಿಪ್‌: ಡೀನ್‌-ಗಗನ್ ಕರುಂಬಯ್ಯ ಚಾಂಪಿಯನ್ಸ್‌

| Published : Nov 21 2025, 02:45 AM IST

ನ್ಯಾಷನಲ್‌ ರ್‍ಯಾಲಿ ಚಾಂಪಿಯನ್‌ಶಿಪ್‌: ಡೀನ್‌-ಗಗನ್ ಕರುಂಬಯ್ಯ ಚಾಂಪಿಯನ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಮಟ್ಟದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್ (ಐಎನ್ ಆರ್‌ಸಿ) ಸ್ಥಾನವನ್ನು ಮಂಗಳೂರಿನ ಡೀನ್ ಮಸ್ಕರೇನ್ಹಸ್-ಕೊಡಗಿನ ಕೊಂಬಂಡ ಗಗನ್ ಕರುಂಬಯ್ಯ ಜೋಡಿ ಒಟ್ಟು 58 ಸ್ಪರ್ಧಿಗಳನ್ನು ಮಣಿಸಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಮಡಿಕೇರಿ: ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಆಫ್ ಇಂಡಿಯಾ, ಬ್ಲೂಬ್ಯಾಂಡ್ ಸ್ಪೋರ್ಟ್ಸ್,ಅಮ್ಮತ್ತಿ ರೋಬಸ್ಟಾ ಅಡ್ವೆಂಚರ್ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್ (ಐಎನ್ ಆರ್‌ಸಿ) ಸ್ಥಾನವನ್ನು ಮಂಗಳೂರಿನ ಡೀನ್ ಮಸ್ಕರೇನ್ಹಸ್-ಕೊಡಗಿನ ಕೊಂಬಂಡ ಗಗನ್ ಕರುಂಬಯ್ಯ ಜೋಡಿ ಒಟ್ಟು 58 ಸ್ಪರ್ಧಿಗಳನ್ನು ಮಣಿಸಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.ಶೇಷ್ಯಾಂಕ್ ಜಮ್ಹಾಲ್ - ಕೊಯಂಬತ್ತೂರಿನ ರಘುರಾಮ್ ಸಾಮಿನಾಥನ್ ದ್ವಿತೀಯ, ವಿಶಾಖ್ ಬಾಲಚಂದ್ರನ್-ಚಿರಂತ್ ಜೈನ್ ಮೂರನೇ ಸ್ಥಾನ ಪಡೆದುಕೊಂಡರು.

ಸಮಗ್ರ ಫಲಿತಾಂಶ:

ಡೀನ್ ಮಸ್ಕರೇನಸ್ ಕೊಂಜಂಡ ಗಗನ್ ಕರುಂಬಯ್ಯ ತಂಡ ಕ್ರಿಯಾತ್ಮಕವಾಗಿ ಅದ್ಭುತ ಪ್ರದರ್ಶನ ದೊಂದಿಗೆ ಸಾಧನೆ ಮಾಡಿದರು. ಕಠಿಣ ಮಾರ್ಗ ಸವಾಲಾಗಿ ಸ್ವೀಕರಿಸಿ ಮುನ್ನಡೆಸಿದರು. ವೇಗವನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು, ಆಕ್ರಮಣಶೀಲತೆಯಿಂದ 01:36:59.4 ಸಮಯದಲ್ಲಿ ಗೆಲುವು ಪಡೆದು ಕೊಂಡರು.ಚೆಟ್ಟಿನಾಡ್ ಸ್ಪೋರ್ಟಿಂಗ್ ಹಿಮಮಾಚಲ ಪ್ರದೇಶದ ಶೇಷ್ಯಾಂಕ್ ಜಮ್ಹಾಲ್ ಕೊಯಂಬ ತ್ತೂರಿನ ಸಹಚಾಲಕ ರಘುರಾಮ್ ಸಾಮಿ ನಾಥನ್ ಜೋಡಿ 01:43:51.9 ಸಮಯದಲ್ಲಿ ಕ್ರಮಿಸಿ ಎರಡನೇ ಸ್ಥಾನ ಪಡೆದರು.

ತಿರುವನಂತಪುರಂನ ವಿಶಾಖ್ ಚಂದ್ರನ್-ಕಾರ್ಕಳದ ನ್ಯಾವಿಗೇಟರ್ ಚಿರಂತ್ ಜೈನ್ 01:44:24.5 ಸಮಯದಲ್ಲಿ ಕ್ರಮಿಸಿ ಮೂರನೇ ಸ್ಥಾನ ಪಡೆದರು.ಫಲಿತಾಂಶ:

ಐಎನ್‌ಆರ್‌ಸಿ 1 ವಿಭಾಗದಲ್ಲಿ ಮಂಗಳೂರಿನ ಡೀನ್ ಮಸ್ಕರೇನ್ಹಸ್-ಕೊಡಗಿನ ಕೊಂಬಂಡ ಗಗನ್ ಕರುಂಬಯ್ಯ ಜೋಡಿ ಪ್ರಥಮ, ಹಿಮಾಚಲ ಪ್ರದೇಶದ ಆದಿತ್ಯ ಠಾಕೂರ್ ವೀರೇಂದ್ರ ಕಶ್ಯಪ್ ದ್ವಿತೀಯ, ಬೆಂಗಳೂರಿನ ಚೇತನ್ ಶಿವರಾಮ್-ತ್ರಿಶಾ ಜಗನ್ನಾಥ್ ತೃತೀಯ ಸ್ಥಾನ ಪಡೆದರು.

ಐಎನ್‌ಆರ್‌ಸಿ 2 ವಿಭಾಗದಲ್ಲಿ ದೆಹಲಿಯ ಫಿಲಿಪ್ಪೋಸ್ ಮಥಾಯ್ ಬೆಂಗಳೂರಿನ ಕೆ.ಎನ್.ಹರೀಶ್ ದ್ವಿತೀಯ, ಮೈಸೂರಿನ ಸೈಯದ್ ಸಲ್ಮಾನ್ ಅಹ್ಮದ್-ಮಂಗಳೂರಿನ ಬಿ. ಕೆ.ರಿಷಬ್‌ ತೃತೀಯ, ಐಎನ್‌ಆರ್‌ಸಿ 3 ವಿಭಾಗದಲ್ಲಿ ಹಮೀ ಪರದ ಶೇಶಾಂಕ್ ಜಮ್ಹಾಲ್-ಕೊಯಮತ್ತೂರಿನ ರಘುರಾಮ್ ಸ್ವಾಮಿನಾಥನ್ ಪ್ರಥಮ, ತಿರುವನಂತಪುರದ ವಿಶಾಖ್ ಬಾಲ ಚಂದ್ರನ್- ಕಾರ್ಕಳದ ಚಿರಂತ್ ಜೈನ್ ದ್ವಿತೀಯ. ಕೊಡಗಿನ ಅಭಿನ್ ರೈ-ಚಿಕ್ಕಮಗಳೂರಿನ ಕೆ.ಎಂ.ಮೊಯ್ದಿನ್ ಜಶೀರ್ ತೃತೀಯ ಸ್ಥಾನ ಪಡೆದುಕೊಂಡರು.

ಐಎನ್‌ಆರ್‌ಸಿ 3ಟಿ ವಿಭಾಗದಲ್ಲಿ ಹೈದರಬಾದ್‌ನ ನವೀನ್ ಪುಲಿಗಿಲ್ಲ-ಸಂತೋಷ್ ಥಾಮಸ್ ಪ್ರಥಮ, ದೆಹಲಿಯ ಬಲ್ಲಿಂದರ್ ಸಿಂಗ್ ಧಿಲ್ಲೋನ್ -ಚಿಕ್ಕಮಗಳೂರಿನ ಸಿ.ಪಿ.ಗೌತಮ್ ದ್ವಿತೀಯ, ಕೊಡಗಿನ ಕೊಂಗಡ ದರ್ಶನ್ ನಾಚಿಪ್ಪ-ಮಾದಪಂಡ ಕರಣ್ ಕುಶಾಲಪ್ಪ ಜೋಡಿ ತೃತೀಯ ಸ್ಥಾನ ಪಡೆದರು.

ಜೂನಿಯರ್ ಐಎನ್‌ಆರ್‌ಸಿ ವಿಭಾಗದಲ್ಲಿ ಕೊಡಗಿನ ಅಭಿನ್ ರೈ-ಚಿಕ್ಕಮಗಳೂರಿನ ಕೆ.ಎಂ.ಮೊಯ್ದಿನ್ ಜಶೀರ್ ಪ್ರಥಮ, ಚಿಕ್ಕಮಗಳೂರಿನ ತರುಷಿ ವಿಕ್ರಮ್-ಬೆಂಗಳೂರಿನ ವೈಭವ್ ಮುಕುಂದ್ ರಾವ್ ದ್ವಿತೀಯ, ಬೆಂಗಳೂರಿನ ಅರ್ಜುನ್ ವೈ ಮಾವಾಜಿ-ಎಂ.ಸಾಗರ್ ತೃತೀಯ ಸ್ಥಾನ ಪಡೆದುಕೊಂಡರು.

ಮಹಿಳಾ ವಿಭಾಗದಲ್ಲಿ ಕೇರಳದ ರಾಜ್ಯದ ಅತಿರಾ ಮುರಳಿ-ಅರುಣ್ ಪಂಕಜಾಕ್ಷನ್ ಜೋಡಿಗೆ ಪ್ರಥಮ ಸ್ಥಾನ, ಶಿಲ್ಲಾಂಗ್‌ನ ಪೋಟೆ ಡೇಲ್ ನಾಂಗ್ರಮ್-ಹೈದರಬಾದ್‌ನ ನ್ಯಾಶ್ ರಾಸ್ ದ್ವಿತೀಯ, ಚಿಕ್ಕಮಗಳೂರಿನ ತರುಷಿ ವಿಕ್ರಮ್-ಬೆಂಗಳೂರಿನ ವೈಭವ್ ಮುಕುಂದ್ ರಾವ್ ತೃತೀಯ ಸ್ಥಾನ ಸಿಕ್ಕಿತು.

ಎಫ್‌ಎಂಎಸ್‌ಸಿಐ ಕ್ಲಾಸಿಕ್ ಚಾಲೆಂಜ್ ವಿಭಾಗದಲ್ಲಿ ಬೆಂಗಳೂರಿನ ಸಿದ್ಧಾರ್ಥ ಸಂತೋಷ್ - ಚನ್ನಪಟ್ಟಣದ ಸಾವನ್ ಸತ್ಯ ನಾರಾಯಣ ಪ್ರಥಮ, ಬೆಂಗಳೂರಿನ ಪ್ರಮೋದ್ ರಾಮನ್ -ಸಿ.ಜಿ. ಸರವಣ ಕುಮಾರ್ ದ್ವಿತೀಯ, ಕೊಡಗಿನ ನೆಲ್ಲಮಕ್ಕಡ ಬೋಪಣ್ಣ-ಬೆಂಗಳೂರಿನ ಅರವಿಂದ್ ದೀರೇಂದ್ರ ತೃತೀಯ ಸ್ಥಾನ, ಎಫ್‌.ಎಂಎಸ್‌ಸಿಐ ಜಿಪ್ಸಿ ಚಾಲೆಂಜ್ ವಿಭಾಗದಲ್ಲಿ ತುರಾದ ಅನೀಶ್ ಸಂಗ್ಲಾ-ಕೊಯಮತ್ತೂರಿನ ಡಿಂಕಿ ವರ್ಗೀಸ್ ಪ್ರಥಮ, ಬೆಂಗಳೂರಿನ ಸಂಜಯ್ ಅಗರ್ವಾಲ್-ಧೀರಜ್ ಮಾನೆ ದ್ವಿತೀಯ, ಕೊಡಗಿನ ಕೊಂಬಂಡ ಕಾರ್ಯಪ್ಪ-ಮನೆಯಪಂಡ ಗೌರವ ಅಯ್ಯಪ್ಪ ತೃತೀಯ ಸ್ಥಾನ ಪಡೆದರು.

ಸಮಾರೋಪ: ಅತ್ತೂರು ಪಾಲ್ಟ್ ವ್ಯಾಲಿ ರೆಸಾರ್ಟ್‌ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಮೇಜರ್ ಜನರಲ್ ಕೆ. ಸಿ. ಕಾರ್ಯಪ್ಪ, ಹಿರಿಯರಾದ ಕುಟ್ಟಂಡ ಪೂಣಚ್ಚ ಉದ್ದಪಂಡ ಅಪ್ಪಣ್ಣ, ಬ್ಲೂಬ್ಯಾಂಡ್ ಪ್ರವರ್ತಕ ಪ್ರೇಮ್ ನಾಥ್, ರೋಬಸ್ಟಾ ಅಡ್ಡೆಂಚರ್ ಮತ್ತು ಸ್ಪೋರ್ಟ್ಸ್ ಅಕಾಡೆಮಿ ಪ್ರಮುಖರಾದ ಕುಂಞಂಯಂಡ ಮಾಚಯ್ಯ ಅಪ್ಪಯ್ಯ, ಉದ್ದಪಂಡ ತಿಮ್ಮಣ್ಣ, ಜಮ್ಮಡ ಸೋಮಣ್ಣ ಬಹುಮಾನ ವಿತರಿಸಿದರು.

ಮುಂದಿನ ರ್‍ಯಾಲಿ: ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್‌ಶಿಪ್‌ನ ಮೊದಲ 3 ಹಂತದ ರ್‍ಯಾಲಿ ಸಂಪನ್ನಗೊಂಡಿದ್ದು, ಐಎನ್‌ಆರ್‌ಸಿ 4ನೇ ಹಂತದ ಕೆ.1000 ಬೆಂಗಳೂರು ಆಯೋಜಿಸಲಿದ್ದು, ತುಮಕೂರಿನಲ್ಲಿ ನಡೆಯಲಿದೆ . ಐಎನ್‌ಆರ್‌ಸಿ ಹಂತದ ರ್‍ಯಾಲಿ ಮಹಾರಾಷ್ಟ್ರ ದಲ್ಲಿ ನಡೆಯಲಿದೆ. ಐಎನ್‌ಆರ್‌ಸಿ-6 ಹಂತದ ಹೈದರಬಾದ್‌ನಲ್ಲಿ ನಡೆಯುವ ಸಾಧ್ಯತೆ ಇದೆ.ಕಾಫಿ ತೋಟದಲ್ಲಿ ಧೂಳೆಬ್ಬಿಸಿದ ರ್‍ಯಾಲಿ: ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನ ಅತ್ತೂರು, ಪಾಲಿಬೆಟ್ಟ ಸುತ್ತಲಿನ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ರ್‍ಯಾಲಿ ನಡೆಯಿತು. ಮಠಪರಂಬು, ತೋಟದಲ್ಲಿ ಪ್ರಾರಂಭಗೊಂಡು, 12.5 ಕಿ. ಮೀ. ಮಾರ್ಗದಲ್ಲಿ ರೋಚಕ ಅನುಭವ ನೀಡಿತು. ನಂತರ 10 ಕಿ. ಮೀ. ರ್‍ಯಾಲಿ ಎಮ್ಮೆಗುಂಡಿ ತೋಟ, ಬಳಿಕ ಮಾರ್ಗೊಲ್ಲಿ ತೋಟದಲ್ಲಿ 8. ಕಿ.ಮೀ. ಮಾರ್ಗದಲ್ಲಿ ಸಾಗಿತು. ಹೊಸಳ್ಳಿ ತೋಟದಲ್ಲಿ 8.5 ಕಿ.ಮೀ. ಮಾರ್ಗದಲ್ಲಿ ಮೂರು ಸುತ್ತು ಸಂಚರಿಸುವ ಮೂಲಕ ರ್‍ಯಾಲಿಗೆ ತೆರೆ ಎಳೆಯಲಾಯಿತು. ಜಿಲ್ಲೆಯ ರ್‍ಯಾಲಿ ಪಟುಗಳು ಭಾಗಿ:

ವಿಜೇತರು ಸೇರಿದಂತೆ ಜಿಲ್ಲೆಯ ನೆಲ್ಲಮಕ್ಕಡ ಸಚಿನ್ ಬೋಪಣ್ಣ, ಅಮ್ಮಣಕುಟ್ಟಂಡ ಅವಿನ್ ನಂಜಪ್ಪ, ಮೇಕೇರಿರ ಕಾರ್ಯಪ್ಪ, ಮೇಕೇರಿರ ಅಭಿನ್ ಗಣಪತಿ, ಉದ್ದಪಂಡ ಚೇತನ್ ಚಂಗಪ್ಪ, ಮುಕ್ಕಾಟೀರ ಪೊನ್ನಪ್ಪ, ಮುಕ್ಕಾಟೀರ ಲಾವನ ಪೂಣಚ್ಚ, ಅಜ್ಜಿನಿಕಂಡ ಆನಂದ್ ಸೋಮಯ್ಯ, ಸಮ್ರದ್ ನಂಜಪ್ಪ, ಅಕ್ಷಯ್ ಕಾರ್ಯಪ್ಪ ಭಾಗವಹಿಸಿದರು. ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಮೇಘಾಲಯ, ಬಂಗಾಳ, ನವದೆಹಲಿ ಭಾಗಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು. 7 ವಿಭಾಗಗಳಲ್ಲಿ ನಡೆದ ರ್‍ಯಾಲಿಯಲ್ಲಿ 58 ಸ್ಪರ್ಧಿಗಳು ವಾಹನಗಳ ಮೂಲಕ ಚಾಕಚಕ್ಯತೆ ತೋರಿದರು.