ಸಾರಾಂಶ
ಕೊಲ್ಹಾರ: ತಾಲೂಕಿನ ಕುಪಕಡ್ಡಿ ಸರ್ಕಾರಿ ಆರ್.ಎಂಎಸ್ಎ ಪ್ರೌಢಶಾಲೆಯಲ್ಲಿ ಆಸ್ಟ್ರೇಲಿಯಾದ ಅತಿಥಿಗಳೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಸ್ಟ್ರೇಲಿಯಾದ ಪರ್ಥನ್ ಪಿಒನಾ ಸ್ಟೇನ್ಲಿ ಹಾಸ್ಪಿಟಲ್ ನ ಕನ್ಸಲ್ಟಂಟ್ ನೆಪ್ರೋಲಾಜಿಸ್ಟ್ ಕ್ಲಿನಿಕಲ್ ಅಸೋಸಿಯೆಟ್ ಪ್ರೊಪೆಸರ್ ಡಾ.ಜಗದೀಶ ಎಸ್.ಜಾಂಬೋಟಿ, ಆರ್ಮಡಲ್ ಹಾಸ್ಪಿಟಲ್ ಕನ್ಸಲ್ಟಂಟ್ ನ ಡಾ.ಸರೋಜನಿ ಜಗದೀಶ ಹಾಗೂ ಮೆಲ್ಬೋರ್ನ್ ಮೊನಸಾ ಮೆಡಿಕಲ್ ಸೆಂಟರ್ ಟ್ರೇನಿಂಗ್ ಇನ್ ಅಪ್ತಾಲಾಜಿ ಡಾ.ಪ್ರಜ್ಞಾ ಜಗದೀಶ ಆಗಮಿಸಿದ್ದರು. ಅತಿಥಿಗಳು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಉಪನ್ಯಾಸ ನೀಡಿದರು. ವಿದೇಶದಿಂದ ಆಕಸ್ಮಿಕವಾಗಿ ಶಾಲೆಗೆ ಆಗಮಿಸಿದ್ದ ವಿದೇಶಿ ಅತಿಥಿಗಳು ಶಾಲಾ ಮಕ್ಕಳೊಂದಿಗೆ ಬೆರೆಯುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ವಿದೇಶಿ ಅತಿಥಿಗಳನ್ನು ಗ್ರಾಮದ ಗುರುಹಿರಿಯರು, ಗ್ರಾಪಂ ಉಪಾಧ್ಯಕ್ಷ ಮತ್ತು ಸದಸ್ಯರು ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಸನ್ಮಾನಿಸಿದರು. ಈ ವೇಳೆ ಶಾಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಇದ್ದರು.