ಹನುಮಸಾಗರದಲ್ಲಿ ಗಮನ ಸೆಳೆದ ರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನ

| Published : Mar 08 2024, 01:45 AM IST

ಹನುಮಸಾಗರದಲ್ಲಿ ಗಮನ ಸೆಳೆದ ರಾಷ್ಟ್ರೀಯ ವಿಜ್ಞಾನ ವಸ್ತು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ವಿಜ್ಞಾನ ಜನಸಾಮಾನ್ಯರಿಗೂ ತಲುಪಿ ಅವರ ಜೀವನ ಸುಖಮಯವಾಗಿ ಬದುಕು ಹಸನವಾಗಿಸುವುದೇ ವಿಜ್ಞಾನದ ಉದ್ದೇಶ. ದೇಶ ಪ್ರಗತಿ ಹೊಂದಿ ಶಾಂತಿಯಿಂದಿರಲು ಸಾಧ್ಯ.

ಹನುಮಸಾಗರ: ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳೆಸುವ ಅವಶ್ಯಕತೆ ಇದೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಶರಣಪ್ಪ ಮದ್ಲೂರ ಹೇಳಿದರು.

ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಮಿಯಾಪುರ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಪ್ರಶಸ್ತಿ ಪುರಸ್ಕೃತ ಬಸವರಾಜ ವಾಲಿಕಾರ ಮಾತನಾಡಿ, ಇಂದು ವಿಜ್ಞಾನ ಜನಸಾಮಾನ್ಯರಿಗೂ ತಲುಪಿ ಅವರ ಜೀವನ ಸುಖಮಯವಾಗಿ ಬದುಕು ಹಸನವಾಗಿಸುವುದೇ ವಿಜ್ಞಾನದ ಉದ್ದೇಶ. ದೇಶ ಪ್ರಗತಿ ಹೊಂದಿ ಶಾಂತಿಯಿಂದಿರಲು ಸಾಧ್ಯ ಎಂದರು.ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕಲು ಮತ್ತು ಅವರಿಗೆ ಸಮರ್ಥವಾಗಿ ಬೆಳೆಸುವ ಉದ್ದೇಶವಿದೆ. ತಾಂತ್ರಿಕವಾಗಿ ಬೆಳೆಯುತ್ತಿರುವ ಯುಗದಲ್ಲಿ ಮಕ್ಕಳು ಆಸಕ್ತಿ ವಹಿಸಿ ಕಲಿಯಬೇಕು ಎಂದರು.ವಿಜ್ಞಾನ ಶಿಕ್ಷಕ ಪರಶುರಾಮ ನಾಗಣ್ಣವರ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿರುವ ವೈಜ್ಞಾನಿಕ ಪ್ರತಿಭೆಯನ್ನು ಪ್ರಯೋಗಗಳ ಮೂಲಕ ಹೊರಹಾಕಲು ಇದು ಒಂದು ಸೂಕ್ತ ಸಂದರ್ಭ ಜನರಲ್ಲಿರುವ ಮೌಢ್ಯತೆ ಹೋಗಲಾಡಿಸಲು ವೈಜ್ಞಾನಿಕ ಮನೋಭಾವನೆ ಬೆಳೆಸಲು ಇಂತಹ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಬೇಕು ಎಂದರು.ಇದೇ ಸಂದರ್ಬದಲ್ಲಿ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗವಿಸಿದ್ದಪ್ಪ ಕುದುರಿ, ಶರಣಗೌಡ ಮ್ಯಾಗೇರಿ, ದುರಗೇಶ, ಟಾಟಾ ಟ್ರಸ್ಟ್ ನ ನೋಡಲ್ ಅಧಿಕಾರಿ ರಾಜಕುಮಾರ, ನಾಗರಾಜ ಪೊಲೀಸಪಾಟೀಲ, ನಿಂಗನಗೌಡ ಹೊಸೂರ, ಶರಣಪ್ಪ ರಾಮವಾಡಗಿ, ಗೋವಿಂದಪ್ಪ, ಭೀಮಣ್ಣ ಹೊಸಮನಿ, ಕನಕರಾಯ ಉಪ್ಪೇರಿ, ಪರಶುರಾಮ ಪೂಜಾರಿ, ಶಿಕ್ಷಕರಾದ ಸದಾಶಿವಯ್ಯ ಶಿರೂರ, ನಾಗನಗೌಡ ಪೊಲೀಸ ಪಾಟೀಲ, ಶಾಂತಾಬಾಯಿ ಪಟ್ಟಣಶೆಟ್ಟಿ, ಪರಶುರಾಮ ನಾಗಣ್ಣವರ, ಜಯಶ್ರೀ ಮದ್ಲೂರ, ಲಕ್ಷ್ಮಿ ವಾಲಿಕಾರ, ಸುಮಂಗಲಾ ಕುದುರಿ ಇದ್ದರು.