ಹಾವೇರಿಯಲ್ಲಿ ‘ಕನಕ ಚಿಂತನೆ’ ರಾಷ್ಟ್ರೀಯ ವಿಚಾರಸಂಕಿರಣ ಸಂಪನ್ನ

| Published : Jul 15 2024, 01:57 AM IST

ಹಾವೇರಿಯಲ್ಲಿ ‘ಕನಕ ಚಿಂತನೆ’ ರಾಷ್ಟ್ರೀಯ ವಿಚಾರಸಂಕಿರಣ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿಯ ಗುಡ್ಲೆಪ್ಪ ಹಳ್ಳಿಕೇರಿಯ ಗುಡ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಆಶ್ರಯದಲ್ಲಿ ‘ಕನಕ ಚಿಂತನೆ: ಇಹಪರ ಸಮನ್ವಯತೆಯ ಸೊಬಗು’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಹಾವೇರಿಯ ಗುಡ್ಲೆಪ್ಪ ಹಳ್ಳಿಕೇರಿಯ ಗುಡ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಆಶ್ರಯದಲ್ಲಿ ನಡೆದ ‘ಕನಕ ಚಿಂತನೆ: ಇಹಪರ ಸಮನ್ವಯತೆಯ ಸೊಬಗು’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾನಿಲಯದ ಡೀನ್ ಡಾ. ಎಂ. ಎನ್. ವೆಂಕಟೇಶ್ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎ.ಇ. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಎಂ.ಸಿ. ಕೊಳ್ಳಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ವಚನದರ್ಶನ’ ಎಂಬ ಕೃತಿಯನ್ನು ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ ಬಿಡುಗಡೆಗೊಳಿಸಿದರು.

ಜಿ.ಎಚ್. ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೆಹೊಸೂರ, ಬ್ಯಾಡಗಿಯ ಬಿಎಸ್‌ಎಂ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಜಿ. ವೈದ್ಯ, ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಹಸಂಶೋಧಕ ಡಾ. ಅರುಣ್ ಕುಮಾರ್ ಎಸ್.ಆರ್., ಕನಕದಾಸ ಅಧ್ಯಯನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ, ಜಿ.ಎಚ್.ಕಾಲೇಜಿನ ಪ್ರಾಚಾರ್ಯ ಡಾ. ಸಂಧ್ಯಾ ಆರ್. ಕುಲಕರ್ಣಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಎಫ್. ಹೊಸಮನಿ ಹಾಗೂ ಸಂಯೋಜಕ ಪ್ರೊ. ಶಮಂತ್ ಕುಮಾರ್ ಉಪಸ್ಥಿತರಿದ್ದರು.

ಮೊದಲ ಗೋಷ್ಠಿಯಲ್ಲಿ ಪ್ರೊ. ಎಂ.ಎನ್. ವೆಂಕಟೇಶ್ ಅವರು ‘ಕನಕದಾಸರ ಕಾವ್ಯಗಳಲ್ಲಿ ಜೀವನಮೌಲ್ಯ’ ಎಂಬ ಕುರಿತು ಉಪನ್ಯಾಸವಿತ್ತರು. ಎರಡನೇ ಗೋಷ್ಠಿಯಲ್ಲಿ ಡಾ. ಪಾದೇಕಲ್ಲು ವಿಷ್ಣುಭಟ್ ಅವರು ‘ಕನಕದಾಸರಲ್ಲಿ ಸಂತನ ಸಹಜ ನಿರ್ಭೀತಿ’ ಎಂಬ ವಿಷಯದ ಕುರಿತು ಮಾತನಾಡಿದರು.

ಅನಂತರ ಅಧ್ಯಾಪಕರಿಂದ ಹಾಗೂ ವಿದ್ಯಾರ್ಥಿಗಳಿಂದ ಕನಕ ಚಿಂತನೆಗಳ ಬಗ್ಗೆ ಪ್ರಬಂಧಗಳ ಮಂಡನೆಯಾಯಿತು. ಗೋಷ್ಠಿಯ ಅಧ್ಯಕ್ಷತೆನ್ನು ಡಾ. ಅರುಣ್ ಕುಮಾರ್ ಎಸ್.ಆರ್., ಸಮನ್ವಯಕಾರರಾಗಿ ಡಾ. ಎಸ್.ಜಿ. ವೈದ್ಯ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಸಮಾರೋಪದ ಮಾತುಗಳನ್ನಾಡಿದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಎಲ್ಲ ಪ್ರತಿನಿಧಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.