ವಿನಾಯಕ ಎಜುಕೇಷನ್‌ ಸೊಸೈಟಿಯ ನ್ಯಾಷನಲ್ ಪದವಿಪೂವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ. 95ರಷ್ಟು ಲಭಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ.

ಹೊಸಪೇಟೆ: ಇಲ್ಲಿನ ವಿನಾಯಕ ಎಜುಕೇಷನ್‌ ಸೊಸೈಟಿಯ ನ್ಯಾಷನಲ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ. 95ರಷ್ಟು ಲಭಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ.

ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಬಿ. ಮಾನಸ 600ಕ್ಕೆ 591 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 8ನೇ ಸ್ಥಾನ ಗಳಿಸಿರುತ್ತಾರೆ. ವಿಜಯನಗರ ಜಿಲ್ಲೆಗೆ ದ್ವೀತಿಯ ಟಾಪರ್‌ ಆಗಿದ್ದಾರೆ. ಹೊಸಪೇಟೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಒಟ್ಟು ವಿದ್ಯಾರ್ಥಿಗಳು 191ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದು, ಇವರಲ್ಲಿ 68 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. 103 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ. 97ರಷ್ಟು ಫಲಿತಾಂಶ ದಾಖಲಾಗಿದೆ.

ವಾಣಿಜ್ಯ ವಿಭಾಗದಲ್ಲಿ ಜಿ.ಎಸ್. ಶ್ರಾವಣಿ 600ಕ್ಕೆ 583 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ವಾಣಿಜ್ಯ ವಿಭಾಗ ಶೇ. 91ರಷ್ಟು ಫಲಿತಾಂಶ ಬಂದಿದ್ದು, 88 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದು, ಇವರಲ್ಲಿ 34 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 36 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.

ಕಾಲೇಜಿನ 278 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿಯಾಗಿದ್ದು, ಇವರಲ್ಲಿ 264 ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವ ಮೂಲಕ ಕಾಲೇಜು ಶೇ. 95 ರಷ್ಟು ಫಲಿತಾಂಶವನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಿದೆ.

ಪಿಯುಸಿ ದ್ವಿತೀಯ ಪರೀಕ್ಷೆ, ಸನ್ನಿಧಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕೊಟ್ಟೂರು:ಪಟ್ಟಣದಲ್ಲಿನ ಶ್ರೀ ಸನ್ನಿಧಿ ಕಾಲೇಜಿನ ದ್ವಿತೀಯ ಪಿಯುಸಿ ಈ ಸಾಲಿನ ಫಲಿತಾಂಶದಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಗಮನ ಸೆಳೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಜಿ.ಎನ್. ಗಣೇಶ ೫೮೭ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಕೆ.ಜಿ. ಸಿಂಚನ ೫೮೬ ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಮತ್ತು ಎಚ್.ಕೆ. ಯಶೋದಾ ೫೮೪ ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಗಳಿಸಿರುತ್ತಾರೆ.ವಾಣಿಜ್ಯ ವಿಭಾಗದಲ್ಲಿ ಕೆ.ಬಿ. ಸಿಂಚನಾ ೫೮೨ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಎಸ್.ಎಂ. ಅನಿಕೇತ್ ೫೭೮ ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ, ಗಣೇಶ ೫೭೭ ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಕಲಾ ವಿಭಾಗದಲ್ಲಿ ಸುಜಾತಾ ೫೮೮ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಸಿಂಧು ಕೆ. ೫೮೭ ಅಂಕಗಳನ್ನು ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಮತ್ತು ರೇವತಿ ೫೮೬ ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.ಕಾಲೇಜಿನಿಂದ ಈ ಬಾರಿಯ ಪರೀಕ್ಷೆಗೆ ಹಾಜರಾದ ೩೮೯ ವಿದ್ಯಾರ್ಥಿಗಳ ಪೈಕಿ ೩೭೯ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೫೦೦ಕ್ಕಿಂತ ಹೆಚ್ಚು ಅಂಕಗಳು ೧೯೫ ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯನ್ನು ೧೭೧ ವಿದ್ಯಾರ್ಥಿಗಳು ಮತ್ತು ದ್ವಿತೀಯ ಶ್ರೇಣಿ ೧೨ ವಿದ್ಯಾರ್ಥಿಗಳು ಪಡೆದುಕೊಂಡಿರುತ್ತಾರೆ. ಕಾಲೇಜು ಶೇಕಡವಾರು ಫಲಿತಾಂಶ ೯೭.೬ ಆಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸಂತೋಷ ಪಿ.ಟಿ. ಹೇಳಿದರು. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಕಾರ್ಯದರ್ಶಿ ಎಂ. ನಾಗಭಾಸ್ಕರ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಅಧ್ಯಕ್ಷ ಜಾಲಿ ಬಸವರಾಜ್, ಕಾರ್ಯದರ್ಶಿ ಕಾಕುಬಾಳು ರಾಜೇಂದ್ರ, ಖಜಾಂಚಿ ಆಶಾ ಹಾರೂನ್, ವಿನಾಯಕ ಎಜುಕೇಶನ್‌ ಸೊಸೈಟಿ, ಕಾಲೇಜಿನ ಪ್ರಾಂಶುಪಾಲರಾದ ಶಶಿಧರ್ ಆರ್. ತಿಪ್ಪೇಸ್ವಾಮಿ, ಜೆ.ಎಸ್., ರವಿ ಗೌಡ ಮತ್ತು ರಾಜಶೇಖರ್ ಎಸ್. ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.