ಸಾರಾಂಶ
ಮಂಗಳೂರು, ಪುತ್ತೂರು, ಉಡುಪಿ ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯನ್ನೊಳಗೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಮೂರು ದಿನಗಳ ಅಭ್ಯಾಸ ವರ್ಗ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ವಿದ್ಯಾರ್ಥಿ ಶಕ್ತಿ ವಿಶ್ವದಲ್ಲೇ ಅತೀ ದೊಡ್ಡ ಶಕ್ತಿಯಾಗಿದ್ದು, ವಿದ್ಯಾರ್ಥಿ ಶಕ್ತಿಗೆ ರಾಷ್ಟ್ರೀಯತೆಯ ಚಿಂತನೆಯ ಸ್ಪರ್ಶ ನೀಡಿದಾಗ ಅದ್ಭುತ ಶಕ್ತಿಯ ಜನ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಚಿಂತನೆಯನ್ನು ಮೂಡಿಸಿದಾಗ ದೇಶ ವಿಶ್ವದಲ್ಲೇ ಶಕ್ತಿಶಾಲಿ ದೇಶವಾಗಿ ಹೊರ ಹೊಮ್ಮಲು ಸಾಧ್ಯವಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ನಗರದ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಲಾಗಿದ್ದ ಮಂಗಳೂರು, ಪುತ್ತೂರು, ಉಡುಪಿ ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯನ್ನೊಳಗೊಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ವಿಭಾಗದ ಮೂರು ದಿನಗಳ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ, ಮಂಗಳೂರು ವಿಭಾಗ ಪ್ರಮುಖ ಕೇಶವ ಬಂಗೇರ, ಪುತ್ತೂರು ಜಿಲ್ಲಾ ಪ್ರಮುಖ ಡಾ. ಸುಬ್ರಹ್ಮಣ್ಯ, ಸಂಚಾಲಕ ಕಾರ್ತಿಕ್ ಉಪಸ್ಥಿತರಿದ್ದರು. ಪುತ್ತೂರು ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಮಂದಾರ ಸ್ವಾಗತಿಸಿದರು. ಅಮೃತಾಂಬ ವಂದಿಸಿದರು.