ಗ್ರಾಹಕರಿಗಾಗಿ ಖಾಸಗಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸಿ

| Published : Nov 12 2025, 01:15 AM IST

ಗ್ರಾಹಕರಿಗಾಗಿ ಖಾಸಗಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಹಣಕ್ಕೆ ಭದ್ರತೆ ನೀಡಲು ದೇಶದ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಬೇಕು, ಬ್ಯಾಂಕ್‌ಗಳಿಗೆ ಅಗತ್ಯ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಹಳೇ ಪಿ.ಬಿ. ರಸ್ತೆಯ ಕರ್ಣಾಟಕ ಬ್ಯಾಂಕ್‌ ಮುಂಭಾಗದಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ- ಎಐಬಿಇಎ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಕರೆ ಮೇರೆಗೆ ಬ್ಯಾಂಕ್‌ ನೌಕರರು ಪ್ರತಿಭಟನಾ ಮತ ಪ್ರದರ್ಶನ ನಡೆಸಿದ್ದಾರೆ.

- ಅಗತ್ಯ ಸಿಬ್ಬಂದಿ ನೇಮಿಸಿ ಖಾಸಗಿ ಬ್ಯಾಂಕ್‌ಗಳ ಕಿರುಕುಳ ತಡೆಗೆ ರಾಘವೇಂದ್ರ ನಾಯರಿ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಸಾರ್ವಜನಿಕರ ಹಣಕ್ಕೆ ಭದ್ರತೆ ನೀಡಲು ದೇಶದ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಬೇಕು, ಬ್ಯಾಂಕ್‌ಗಳಿಗೆ ಅಗತ್ಯ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದ ಹಳೇ ಪಿ.ಬಿ. ರಸ್ತೆಯ ಕರ್ಣಾಟಕ ಬ್ಯಾಂಕ್‌ ಮುಂಭಾಗದಲ್ಲಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ- ಎಐಬಿಇಎ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಕರೆ ಮೇರೆಗೆ ಬ್ಯಾಂಕ್‌ ನೌಕರರು ಪ್ರತಿಭಟನಾ ಮತ ಪ್ರದರ್ಶನ ನಡೆಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ನೇತೃತ್ವದಲ್ಲಿ ಘೋಷಣೆ ಕೂಗಲಾಯಿತು. ದೇಶದ ಹಳೆಯ, ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಆ ಮೂಲಕ ಸಾರ್ವಜನಿಕರ ಹಣಕ್ಕೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೆ.ರಾಘವೇಂದ್ರ ನಾಯರಿ ಮಾತನಾಡಿ, ಬ್ಯಾಂಕ್‌ಗಳಿಗೆ ಅಗತ್ಯ ಪ್ರಮಾಣದ ನೇಮಕಾತಿ ಮಾಡಬೇಕು. ಫೆಡರಲ್ ಬ್ಯಾಂಕಿನ ನೌಕರರ ಶೋಷಣೆ ನಿಲ್ಲಿಸಬೇಕು. ಕೆಥೋಲಿಕ್ ಸಿರಿಯನ್ ಬ್ಯಾಂಕ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ಖಾಸಗಿ ಬ್ಯಾಂಕ್‌ಗಳ ನಿವೃತ್ತ ನೌಕರರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು. ನೈನಿತಾಲ್ ಬ್ಯಾಂಕ್‌ ಮಾರಾಟ ಮಾಡಬಾರದು. ತಮಿಳುನಾಡು ಮರ್ಕಂಟೈಲ್ ಬ್ಯಾಂಕಿನ ನೌಕರರ ನಿವೃತ್ತಿ ವಯಸ್ಸನ್ನು 60ಕ್ಕೆ ಹೆಚ್ಚಿಸಬೇಕು. ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಖಾಸಗಿ ಬ್ಯಾಂಕುಗಳ ನಿವೃತ್ತ ನೌಕರರಿಗೆ ಸೌಲಭ್ಯಗಳನ್ನು ವಿಸ್ತರಿಸಬೇಕು. ಬ್ಯಾಂಕ್‌ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಎಐಬಿಇಎ ಸಂಯೋಜಿತ ಖಾಸಗಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಬೇಡಿಕೆಗಳು, ರಾಷ್ಟ್ರೀಕೃತ ಬ್ಯಾಂಕ್‌ ನೌಕರರ ವಿವಿಧ ಬೇಡಿಕೆಗಳನ್ನು ಭಾರತ ಸರ್ಕಾರವು ಪ್ರಥಮಾದ್ಯತೆ ಮೇಲೆ ಈಡೇರಿಸಲೆಂದು ಒತ್ತಾಯಿಸಿ, ರಾಷ್ಟ್ರವ್ಯಾಪಿ ಪ್ರತಿಭಟನಾ ಮತ ಪ್ರದರ್ಶನ ನಡೆಸುತ್ತಿದ್ದು, ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆ ಎದುರು ನಮ್ಮ ಹೋರಾಟ ನಡೆದಿದೆ. ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಪ್ರಥಮಾದ್ಯತೆ ಮೇಲೆ ಈಡೇರಿಸಲಿ ಎಂದು ಮನವಿ ಮಾಡಿದರು.

ಜಿಲ್ಲಾ ಖಜಾಂಚಿ ಕೆ.ವಿಶ್ವನಾಥ ಬಿಲ್ಲವ, ಕಾರ್ಯದರ್ಶಿ ಎಚ್.ಎನ್‌. ತಿಪ್ಪೇಸ್ವಾಮಿ, ಆರ್.ಆಂಜನೇಯ, ಸುಮಂತ ಭಟ್, ಸಿ.ಪರಶುರಾಮ, ಶ್ರೀನಿವಾಸ ನಾಡಿಗ್‌, ಎಂ.ಡಿ. ವಿದ್ಯಾಸಾಗರ, ಕೆ.ಎಂ.ರಾಜಶೇಖರ, ಆರ್.ಮಂಜಪ್ಪ, ಎಚ್.ಜೆ.ಆಶಾ, ಗಂಗು ಸತ್ಯಾನಂದ, ನಿವೃತ್ತ ಬ್ಯಾಂಕ್ ನೌಕರರ ಸಂಘದ ಅಜಿತಕುಮಾರ ನ್ಯಾಮತಿ, ಎಚ್.ಸುಗುರಪ್ಪ, ಆರ್.ಸತೀಶ, ಮಹೇಶ್ವರಪ್ಪ ಇತರರು ಇದ್ದರು.

- - -

-11ಕೆಡಿವಿಜಿ5.ಜೆಪಿಜಿ:

ದಾವಣಗೆರೆ ಹಳೆಯ ಪಿ.ಬಿ. ರಸ್ತೆಯ ಕರ್ಣಾಟಕ ಬ್ಯಾಂಕ್ ಎದುರು ಬ್ಯಾಂಕ್ ನೌಕರರ ಸಂಘಟನೆ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಕೆ.ರಾಘವೇಂದ್ರ ನಾಯರಿ ಇತರರ ನೇತೃತ್ವದಲ್ಲಿ ಮಂಗಳವಾರ ಸಂಜೆ ಪ್ರತಿಭಟಿಸಲಾಯಿತು.