ನಮ್ಮ ದೇಶವು ಆದಿ ಹಾಗೂ ಅಂತ್ಯವಿಲ್ಲದ ಸನಾತನ ಧರ್ಮವನ್ನು ಹೊಂದಿದ್ದು, ಪ್ರಪಂಚಕ್ಕೆ ಯೋಗವಿದ್ಯೆಯನ್ನು ಪರಿಚಯಿಸಿದೆ. ಸನಾತನ ಧರ್ಮವನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಜಾಗೃತಗೊಳ್ಳಬೇಕು, ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಭಜನೆಯಿಂದ ದೇವರನ್ನು ನಮ್ಮಲ್ಲಿ ನೆಲೆಯಾಗಿಸಬಹುದು. ಭಜನೆ ಹಾಗೂ ಶ್ಲೋಕಗಳು ಹಿರಿಯರು ನಮಗೆ ಕಲಿಸಿಕೊಟ್ಟಂತಹ ಒಂದು ಅದ್ಭುತ ಶಕ್ತಿಯಾಗಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಪುತ್ತೂರು: ನಮ್ಮ ದೇಶವು ಆದಿ ಹಾಗೂ ಅಂತ್ಯವಿಲ್ಲದ ಸನಾತನ ಧರ್ಮವನ್ನು ಹೊಂದಿದ್ದು, ಪ್ರಪಂಚಕ್ಕೆ ಯೋಗವಿದ್ಯೆಯನ್ನು ಪರಿಚಯಿಸಿದೆ. ಸನಾತನ ಧರ್ಮವನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಜಾಗೃತಗೊಳ್ಳಬೇಕು, ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಭಜನೆಯಿಂದ ದೇವರನ್ನು ನಮ್ಮಲ್ಲಿ ನೆಲೆಯಾಗಿಸಬಹುದು. ಭಜನೆ ಹಾಗೂ ಶ್ಲೋಕಗಳು ಹಿರಿಯರು ನಮಗೆ ಕಲಿಸಿಕೊಟ್ಟಂತಹ ಒಂದು ಅದ್ಭುತ ಶಕ್ತಿಯಾಗಿದೆ ಎಂದು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.ಅವರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಪುತ್ತೂರಿನ ಧರ್ಮಾಭ್ಯುದಯ - ಧರ್ಮ ಶಿಕ್ಷಣ ಸಮಿತಿಯ ವತಿಯಿಯಂದ ವಿವಿಧ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಶ್ರೀ ಗಣೇಶ ಚೌತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.
ಧರ್ಮ ಶಿಕ್ಷಣ ಪಡೆಯುತ್ತಿರುವ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಭಜನೆ, ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರ ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಮತ್ತು ಈಶ್ವರಮಂಗಲ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.ಫಲಿತಾಂಶ: ಭಜನಾ ಸ್ಪರ್ಧೆಯಲ್ಲಿ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರ ಈಶ್ವರ ಮಂಗಲದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು, ಶ್ರೀ ಶಕ್ತಿ ಜಟಾಧರಿ ಭಜನಾ ಮಂದಿರ ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಮತ್ತು ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದರು.
ಹಿರಿಯ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿ ಭುವನ್ ಎ ಪ್ರಥಮ ಸ್ಥಾನವನ್ನು, ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಯಶ್ವಿನ್ ರೈ ದ್ವಿತೀಯ ಸ್ಥಾನವನ್ನು ಗಳಿಸಿದರು. ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಧರ್ಮಶಿಕ್ಷಣ ಕೇಂದ್ರ ಬೆಳ್ಳಿಪ್ಪಾಡಿಯ ವಿದ್ಯಾರ್ಥಿನಿಯರಾದ ಹೃತಿಕಾ ಕೆ ಪ್ರಥಮ ಸ್ಥಾನವನ್ನು ಮತ್ತು ಶ್ರಾವ್ಯ ದ್ವಿತೀಯ ಸ್ಥಾನವನ್ನು ಗಳಿಸಿದರು. ಹಿರಿಯ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಬಿಂದುಶ್ರೀ ಪ್ರಥಮ ಸ್ಥಾನವನ್ನು ಗಳಿಸಿದರು.ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಖುಷಿ ಪ್ರಥಮ ಸ್ಥಾನವನ್ನು ಮತ್ತು ಸೋಕ್ಷಾ ತೃತೀಯ ಸ್ಥಾನವನ್ನು ಗಳಿಸಿದರು. ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರ ಈಶ್ವರ ಮಂಗಲದ ವಿದ್ಯಾರ್ಥಿನಿ ಮಾನಸ ದ್ವಿತೀಯ ಸ್ಥಾನವನ್ನು ಗಳಿಸಿದರು. ಕಿರಿಯ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿ ರಿತ್ವಿನ್ ರೈ ಕೆ ಪ್ರಥಮ ಸ್ಥಾನವನ್ನು ಪಡೆದರು.
ಹಿರಿಯ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಗ್ರೀಷ್ಮಾ ಪ್ರಥಮ ಸ್ಥಾನವನ್ನು, ಈಶ್ವರ ಮಂಗಲ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಪೂರ್ತಿ ಕೆ ದ್ವಿತೀಯಸ್ಥಾನವನ್ನು, ಅಜ್ಜಿ ಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಧನ್ವಿತ್ ತೃತೀಯ ಸ್ಥಾನವನ್ನು ಗಳಿಸಿದರು. ಪ್ರೌಢಶಾಲಾ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ ಈಶ್ವರ ಮಂಗಲ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಎನ್ ಕೆ ಜೀವಜ್ ಪ್ರಥಮ ಸ್ಥಾನವನ್ನು, ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಸೋನಾಲಿ ಕೆ ಎಸ್ ದ್ವಿತೀಯ ಸ್ಥಾನವನ್ನು, ಅಜ್ಜಿಕಲ್ಲು ಧರ್ಮ ಶಿಕ್ಷಣಕೇಂದ್ರದ ವಿದ್ಯಾರ್ಥಿ ಮನ್ವಿತ್ ತೃತೀಯ ಸ್ಥಾನವನ್ನು ಗಳಿಸಿದರು. ಕಿರಿಯ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಈಶ್ವರ ಮಂಗಲ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿ ಸಮರ್ಥ್ ಪ್ರಥಮ ಸ್ಥಾನವನ್ನು, ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ನಿಶ್ವಿ ದ್ವಿತೀಯ ಸ್ಥಾನವನ್ನು ಗಳಿಸಿದರು. ಹಿರಿಯ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಈಶ್ವರ ಮಂಗಲ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಸಮೃದ್ಧಿ ಪ್ರಥಮ ಸ್ಥಾನವನ್ನು, ಅಜ್ಜಿ ಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಮಾನ್ವಿ ದ್ವಿತೀಯ ಸ್ಥಾನವನ್ನು ಮತ್ತು ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ತಾನ್ಯ ತೃತೀಯ ಸ್ಥಾನವನ್ನು ಗಳಿಸಿದರು.ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಧರ್ಮಶಿಕ್ಷಣ ಸಂಸ್ಥೆಗಳ ಮಾತಾಜಿಯವರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಶೈಲಾಶ್ರೀರವರು ಸ್ವಾಗತಿಸಿ, ವಂದಿಸಿದರು., ಶಿಕ್ಷಕಿ ಪ್ರಿಯಾಶ್ರೀ ಕೆ ಎಸ್ ಬಹುಮಾನಿತರ ಪಟ್ಟಿ ವಾಚಿಸಿದರು.. ಶಿಕ್ಷಕ ಹೇಮಂತ್ ನಿರ್ವಹಿಸಿದರು.