ಉಡುಪಿ: ಇಂದ್ರಾಳಿಯ ಸುಬ್ರಹ್ಮಣ್ಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ವಿಪುಲ್ ವಹಿಸಿದ್ದರು.
ಕಸಾಪ ಉಡುಪಿ ತಾಲೂಕು ಘಟಕದ ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು ಪರಿಸರದ ಕುರಿತು ಮಾಹಿತಿ ನೀಡಿ ಪ್ರಕೃತಿಯು ಮಾನವನಿಂದ ಮಾತ್ರ ಹಾಳಾಗುತ್ತಿದೆ, ಹೊರತು ಬೇರೆ ಯಾವುದೇ ಪ್ರಾಣಿ ಪಕ್ಷಿಗಳಿಂದ ಅಲ್ಲ. ಹೀಗಾಗಿ ಇಂದು ನಾವೆಲ್ಲರೂ ವರ್ಷಕ್ಕೆ ಕನಿಷ್ಠ ಎರಡು ಗಿಡವನ್ನಾದರೂ ನೆಟ್ಟು ಬೆಳೆಸುವ ಕಾರ್ಯ ಮಾಡಿದ್ದಲ್ಲಿ ಪ್ರಕೃತಿಗೆ ನಾವು ಕೊಡುಗೆ ನೀಡಬಹುದು ಎಂದರು. ನಿವೃತ್ತ ಸಹಾಯಕ ಮಹಾಪ್ರಬಂಧಕ ಪುರಂದರ್ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ, ವಲಯ ಅಧಿಕಾರಿ ರಿತೇಶ್ ಸುವರ್ಣ, ಕಾರ್ಯಕ್ರಮ ನಿರ್ದೇಶಕ ಡಾ. ವಿಜಯ ನೆಗಳೂರು, ಕಾರ್ಯದರ್ಶಿ ಹರಿಪ್ರಸಾದ್, ಪೂವ೯ ಅಧ್ಯಕ್ಷ ಅಶೋಕ್ ಪೂಜಾರಿ, ಡಾ. ಚಿತ್ರಾ ನೆಗಳೂರು, ಮಮತಾ, ಜ್ಯೋತಿ ಪ್ರಶಾಂತ್, ಕೀತೆ೯ಶ್, ಉದಯ್ ಕೆ ಶೆಟ್ಟಿ, ರಾಧಾಕೃಷ್ಣ, ಸೌಂದಯ೯, ರಾಹುಲ್, ಕರಣ್ ತನಿಶಾ, ತನಯ್, ಮುಂತಾದವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಎಸ್ ಡಿಎಂಸಿ ಅಧ್ಯಕ್ಷರು ಉಪಸ್ಥಿತರಿದ್ದರು.ಮಾನವನಿಂದಲೇ ಪ್ರಕೃತಿ ಹಾಳಾಗುತ್ತಿದೆ: ರಾಘವೇಂದ್ರ ಕರ್ವಾಲು
ಇಂದ್ರಾಳಿಯ ಸುಬ್ರಹ್ಮಣ್ಯ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವನಮಹೋತ್ಸವ ಮತ್ತು ಗಿಡ ವಿತರಣಾ ಕಾರ್ಯಕ್ರಮ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಡುಪಿ ಇಂದ್ರಾಳಿ ಅಧ್ಯಕ್ಷ ವಿಪುಲ್ ವಹಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.