ಮಕ್ಕಳಿಂದ ಪ್ರಕೃತಿ ಪೋಷಣೆ, ವನ್ಯಜೀವಿಗಳ ಸಂಕ್ಷರಣೆ ಅರಿವು

| Published : Dec 02 2024, 01:17 AM IST

ಸಾರಾಂಶ

ಮಕ್ಕಳು ಮಾಡಿರುವ ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಎಲ್ಲಾ ಚಟುವಟಿಗಳು ನೋಡುಗರನ್ನು ಸೆಳೆಯುವ ಜೊತೆಗೆ ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವಂತೆ ಇದೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಅವರು ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ಮಕ್ಕಳು ಮಾಡಿರುವ ವನ್ಯಜೀವಿಗಳ ಸಂರಕ್ಷಣೆ ಸೇರಿದಂತೆ ಎಲ್ಲಾ ಚಟುವಟಿಗಳು ನೋಡುಗರನ್ನು ಸೆಳೆಯುವ ಜೊತೆಗೆ ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವಂತೆ ಇದೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಅವರು ಶ್ಲಾಘಿಸಿದರು.ಈಚೆಗೆ ಆನವಟ್ಟಿಯ ರುಕ್ಮಿಣಿ ಪುಸಲ್ಕರ್‌ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ, ವನ್ಯಜೀವಿಗಳ ಸಂರಕ್ಷಣೆ, ಪ್ರಕೃತಿ ಪೋಷಣೆ ಮತ್ತು ಭಾಷಾ ವೈವಿಧ್ಯಗಳ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಳುವಿನ ಅಂಚಿನಲ್ಲಿರುವ ವನ್ಯ ಜೀವಿಗಳ ಸಂರಕ್ಷಣೆ ಮಾಡಲು ರುಕ್ಮಿಣಿ ಪುಸಲ್ಕರ್‌ ವಿದ್ಯಾಲಯದ ಮಕ್ಕಳು ತಾವೇ ಶಾಲೆಯನ್ನು ಅರಣ್ಯವಾಗಿಸಿ, ಮಾದರಿಗಳನ್ನು ಸಿದ್ಧಪಡಿಸಿ, ಅತಿಥಿಗಳಿಗೆ, ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ವಿವರಣೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.ವನ್ಯಜೀವಗಳಲ್ಲಿ ಹುಲಿಯ ಸಂತತಿ ಕಡಿಮೆಯಾದರೆ, ಹುಲಿ ತಿನ್ನುತ್ತದ್ದ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆಗ ಪ್ರಕೃತಿಯ ಸಮತೋಲನ ತಪ್ಪುತ್ತದೆ. ಇದರಿಂದ ಮಾನವ ಕುಲ ಬದುಕಿ ಬಾಳುವುದಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ವನ್ಯಜೀವಿಗಳ ಸಂರಕ್ಷಣೆ ಬಹುಮುಖ್ಯವಾಗಿದೆ ಎಂದು ಹುಲಿ ವೇಷಧಾರಿ ಮಕ್ಕಳು ವಿವರಿಸಿದರು.ಮಕ್ಕಳೇ ಗಿಡ-ಗಂಟೆಗಳನ್ನು ತಂದು ತಾವೇ ಹುಲಿ, ಆನೆ ಮುತಾಂದ ಪ್ರಾಣಿಗಳ ವೇಷ ತೊಟ್ಟು ಕಾಡು ಪ್ರಾಣಿಗಳನ್ನೇ ನೋಡುತ್ತಿದ್ದೇವೆ ಎನ್ನುವಂತೆ ವಾತವರಣ ಸೃಷ್ಟಿಸಿದ್ದರು.ನಾವು ಮಾತನಾಡುವ ಮಾತೃ ಭಾಷೆಯನ್ನು ಕಲಿಯುವ ಜೊತೆಗೆ ಗೌರವಿಸಬೇಕು. ಹೆಚ್ಚಿನ ಜ್ಞಾನ ಹಾಗೂ ವ್ಯವಹಾರಕ್ಕಾಗಿ ಇಂಗ್ಲೀಷ್‌, ಹಿಂದಿ ಮುಂತಾದ ಭಾಷೆಯನ್ನು ಕಲಿಯುವುದು ತಪ್ಪಲ್ಲ. ಭಾಷಾ ವೈವಿಧ್ಯಗಳನ್ನು ನಾವು ಆಳವಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಸಾರುವ ಕೆಲವು ಚಾಟ್‌ಗಳ ಮಾದರಿಗಳನ್ನು ಮಾಡಿ ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಶಿಕ್ಷಕರಾದ ಅಕ್ಷಯ್‌, ಸಂತೋಷ್‌, ಮುಖ್ಯ ಶಿಕ್ಷಕಿ ಚೇತನ, ಶಿಕ್ಷಕ ವೃಂದದ ಅಧ್ಯಕ್ಷ ಸಂಜಯ್‌ ಡೊಂಗ್ರೆ, ಮುಖಂಡರಾದ ಶ್ರೀಧರಾಚಾರ್ಯ, ನಾಗರಾಜ್‌ ಮಿರಜ್ಕರ್‌, ಶಮಂತ್‌, ಓಂಕಾರ್‌ ನಾಡಿಗೇರ್‌, ಕೇದಾರ್‌ ಡೊಂಗ್ರೆ ಇದ್ದರು.