ರಾಮನಗರ: ಬಂಗಾರ ಬೆಳೆಯುವ ಹಾಗೂ ಅನ್ನ ಬೆಳೆಯುವ ಭೂಮಿಯನ್ನು ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ಕೊಳ್ಳೆ ಹೊಡೆಯಲು ಮುಂದಾಗಿರುವುದು ಸರಿಯಲ್ಲ. ಅವರ ಲಾಭಕ್ಕಾಗಿ ಒಳ್ಳೆಯ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವುದಕ್ಕೆ ಪ್ರಕೃತಿಯೂ ಕ್ಷಮಿಸುವುದಿಲ್ಲ ಎಂದು ಕೆಎಸ್‌ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು

ರಾಮನಗರ: ಬಂಗಾರ ಬೆಳೆಯುವ ಹಾಗೂ ಅನ್ನ ಬೆಳೆಯುವ ಭೂಮಿಯನ್ನು ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ಕೊಳ್ಳೆ ಹೊಡೆಯಲು ಮುಂದಾಗಿರುವುದು ಸರಿಯಲ್ಲ. ಅವರ ಲಾಭಕ್ಕಾಗಿ ಒಳ್ಳೆಯ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವುದಕ್ಕೆ ಪ್ರಕೃತಿಯೂ ಕ್ಷಮಿಸುವುದಿಲ್ಲ ಎಂದು ಕೆಎಸ್‌ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,

ರಾಜ್ಯ ಸರ್ಕಾರದಲ್ಲಿ ಭೂಮಿ ಕೊಳ್ಳೆ ಹೊಡೆಯಲು ಒಂದೇ ಬಣ ಮಾಡಿಕೊಂಡಿದೆ. ಎಲ್ಲರೂ ಒಂದಾಗಿ 8 ಸಾವಿರ ಎಕರೆ ಭೂಮಿಯನ್ನು ಕೊಳ್ಳೆ ಒಡೆಯಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಭೂಸ್ವಾಧೀನಕ್ಕೆ ಗುರುತಿಸಿರುವ ಪ್ರದೇಶಗಳಲ್ಲಿ ರೈತರು ಹೈನುಗಾರಿಕೆ, ರೇಷ್ಮೆ, ಮಾವು, ತೆಂಗು ಬೆಳೆಯುತ್ತಿದ್ದಾರೆ. ಇಂತಹ ಜಾಗದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಇಂತಹ ಸಮೃದ್ಧಿ ಪ್ರದೇಶವನ್ನು ಜೆಸಿಬಿ ಮುಖಾಂತರ ನೆಲಸಮ ಮಾಡಿ ಬಂಜರು ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ಹೊರಹಾಕಿದರು.

ತಾಪಂ ಮಾಜಿ ಸದಸ್ಯ ಪ್ರಕಾಶ್ ಮಾತನಾಡಿ, ದಲಿತ ಮುಖಂಡನಾಗಿ ದಲಿತರ ಆಸ್ತಿ ಹಾಗೂ ಭೂಮಿಯನ್ನು ಉಳಿಸಬೇಕಾಗಿರು ವುದು ನನ್ನ ಕರ್ತವ್ಯವಾಗಿದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿ ರುವ ದಲಿತರಿಗೆ ಸಾಮಾಜಿಕವಾಗಿ ಮುನ್ನಡೆಯುವ ಸಂಬಂಧ ಸರ್ಕಾರ ಭೂಮಿ ನೀಡಿದೆ. ಬೇರೆ ಜಮೀ ನಲ್ಲಿ ಜೀತ ಮಾಡುತ್ತಿರುವವರು ಬದುಕು ಕಟ್ಟಿಕೊ ಳ್ಳಲಿ ಎಂಬ ಕಾರಣಕ್ಕೆ ಸರ್ಕಾರ ಜಮೀನು ನೀಡಿದೆ. ಇಂತಹ ಜಮೀನನ್ನು ನಾನು ಮಾರಾಟ ಮಾಡಿಸಿ, ಮನೆ, ಕಾರು ಖರೀದಿಸುವ ದೌರ್ಭಾಗ್ಯ ನನಗೆ ಬಂದಿಲ್ಲ ಎಂದು ಯೋಜನೆ ಪರವಾಗಿರುವ ರೈತ ಮುಖಂಡರಿಗೆ ತಿರುಗೇಟು ನೀಡಿದರು.

ಭೂಸ್ವಾಧೀನ ಪ್ರಕ್ರಿಯೆ ಪರವಾಗಿ ಯಾರು ಇದ್ದಾರೋ ಅವರು, ಕಮಿಷನ್ ತೆಗೆದುಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಜಿಬಿಡಿಯಿಂದ ಕಮಿಷನ್ ಬರಲಿದೆ. ಹಾಗಾಗಿ ಅವರು ದಲಿತರ ಜಮೀನು ಮಾರಾಟ ಮಾಡಿಸಿ ಕೊಡಲು ನಿಂತಿದ್ದಾರೆ. ಆದರೆ, ನಾನು ದಲಿತರ ಜಮೀನು ಉಳಿದುಕೊಳ್ಳಬೇಕು. ಮುಂದಿನ ಪೀಳಿಗೆ ಅದನ್ನು ಅನುಭವಿಸಬೇಕೆಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರಾದ ಜೀವನ್, ರಾಮಕೃಷ್ಣಯ್ಯ, ಬೈರಮಂಗಲ, ಕಂಚುಗಾರನಹಳ್ಳಿ ರೈತರ ಭೂ ಹಿತರಕ್ಷಣಾ ಸಂಘದ ಅಧ್ಯಕ್ಷ ರಾಮಣ್ಣ, ಖಜಾಂಚಿ ನಾಗರಾಜು, ಮುಖಂಡರಾದ ರಾಧಾಕೃಷ್ಣ, ಅರಳಾಳುಸಂದ್ರ ಅಶ್ವಥ್, ಬೈರಮಂಗಲ ಹೇಮಂತ್, ಮಂಜು ನಾಥ್, ರೇವಣ್ಣ, ಜಯಮ್ಮ, ಭಾಗ್ಯ, ಚೈತ್ರ, ಅನಿತಾ, ಭವ್ಯ ಸೇರಿದಂತೆ ರೈತ ಹೋರಾಟಗಾರರು, ಮಹಿಳೆಯರು ಇದ್ದರು.

----------------------------

15ಕೆಆರ್ ಎಂಎನ್ 7.ಜೆಪಿಜಿ

ಕೆಎಸ್‌ಆರ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

----------------------------