ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಪನ್ನ

| Published : Oct 09 2025, 02:01 AM IST

ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಂಬಿಬಾಣೆಯ ಶ್ರೀ ರಾಮ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 70ನೇ ವರ್ಷದ ನವರಾತ್ರಿ ಮತ್ತು ವಿಜಯದಶಮಿ ಉತ್ಸವ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕಂಬಿಬಾಣೆಯ ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದಲ್ಲಿ 70 ನೇ ವರ್ಷದ ನವರಾತ್ರಿ ಮತ್ತು ವಿಜಯದಶಮಿ ಉತ್ಸವ ಅ. 2 ರ ಗುರುವಾರ ಸಂಪನ್ನಗೊಂಡಿತು.

ಸೆ.22ರಿಂದ ಆರಂಭಗೊಂಡ ನವರಾತ್ರಿ ಹಿನ್ನಲೆಯಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆ ಪ್ರತಿದಿನವೂ ನಡೆದವು. ವಿಜಯದಶಮಿ ದಿನದಂದು ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದೊಂದಿಗೆ ಓಲಗದೊಂದಿಗೆ ಭವ್ಯ ಶೋಭಯಾತ್ರೆ ನಡೆಯಿತು. ಈ ಮಧ್ಯೆ ಚಿಕ್ಲಿಹೊಳೆ ಜಲಾಶಯದ ಬಳಿಯ ಚಾಮುಂಡೇಶ್ವರಿ ದೇವಾಲಯದ ಅಲಂಕೃತ ಮಂಟಪ ಇದರೊಂದಿಗೆ ಸೇರಿಕೊಂಡು ಮೆರವಣಿಗೆಗೆ ಇನ್ನಷ್ಟು ಮೆರುಗು ನೀಡಿತು.ಕಂಬಿಬಾಣೆಯ ಎಲ್ಲ ಬೀದಿಗಳಲ್ಲಿ ಸಂಚರಿಸಿದ ಈ 2 ಮಂಟಪಗಳ ದೇವರಿಗೆ ಭಕ್ತರು ಪೂಜೆ, ಹಣ್ಣು ಕಾಯಿ ಮಾಡಿ ಸಂತೃಪ್ತರಾದರು.ಡಿಜೆಯ ಹಾಡಿಗೆ ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು. ಶುಕ್ರವಾರ ಮುಂಜಾನೆಯವರೆಗೆ ನಡೆದ ಮೆರವಣಿಗೆಯಲ್ಲಿ ಸುತ್ತಮುತ್ತಲಿನ ಗ್ರಾಮದ ನೂರಾರು ಜನ ಭಾಗವಹಿಸಿದ್ದರು.ದೇವಾಲಯದ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಶುಕ್ರವಾರ ಮುಂಜಾನೆ ರಾಮ ಮತ್ತು ಚಾಮುಂಡಿಗೆ ಮಹಾಪೂಜೆಯನ್ನು ಅರ್ಚಕ ಪ್ರಭಾಕರ್ ಕುದ್ಧಣ್ಣಯ್ಯ ಅವರು ನೆರವೇರಿಸುವುದರ ಮೂಲಕ 10 ದಿನಗಳ ನವರಾತ್ರಿ ಉತ್ಸವ ಸಂಪನ್ನಗೊಂಡಿತು.ದೇವಾಲಯದ ಡಾ.ಶಶಿಕಾಂತ್ ರೈ, ರವಿ, ಸಮಿತಿಯ ಸದಸ್ಯರು ಇದ್ದರು.