ಮಲ್ಪೆ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನವರಾತ್ರಿ ಸಂಪನ್ನ

| Published : Oct 13 2024, 01:10 AM IST

ಸಾರಾಂಶ

ಮಲ್ಪೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅತ್ಯಂತ ವೈಭವದಿಂದ ನಡೆಯಿತು. ಈ ಪರ್ವ ಕಾಲದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪ್ರತಿದಿನ ದೇವರಿಗೆ ವಿಶೇಷ ಅಲಂಕಾರ, ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ಶ್ರೀ ದೇವಿ ಪಾರಾಯಣ, ಹೂವಿನ ಪೂಜೆ ಹಾಗೂ ವಿವಿಧ ಧಾರ್ಮಿಕ, ಪೂಜಾ ವಿಧಾನಗಳನ್ನು ವೇದಮೂರ್ತಿ ಸಂದೇಶ್ ಭಟ್ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅತ್ಯಂತ ವೈಭವದಿಂದ ನಡೆಯಿತು. ಈ ಪರ್ವ ಕಾಲದಲ್ಲಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪ್ರತಿದಿನ ದೇವರಿಗೆ ವಿಶೇಷ ಅಲಂಕಾರ, ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ಶ್ರೀ ದೇವಿ ಪಾರಾಯಣ, ಹೂವಿನ ಪೂಜೆ ಹಾಗೂ ವಿವಿಧ ಧಾರ್ಮಿಕ, ಪೂಜಾ ವಿಧಾನಗಳನ್ನು ವೇದಮೂರ್ತಿ ಸಂದೇಶ್ ಭಟ್ ನೆರವೇರಿಸಿದರು.ನವರಾತ್ರಿಯ ಕೊನೆಯ ದಿನ ಶುಕ್ರವಾರ ದೇವಳದ ಸಭಾಂಗಣದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ದೇವಳದ ಅಭಿವೃದ್ಧಿಗೆ ಸಹಕರಿಸಿದ ದಾನಿಗಳಿಗೆ ಗೌರವಾರ್ಪಣೆ, ಹಲವು ವರ್ಷಗಳ ಸೇವೆಸಲ್ಲಿಸಿದ ಮಹಾನೀಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ದೇವಳದ ಪ್ರಧಾನ ಅರ್ಚಕ ಸಂದೇಶ್ ಭಟ್, ಆಡಳಿತ ಮೊಕ್ತೇಸರ ಎಮ್. ಶಾಂತಾರಾಮ್ ಪೈ, ರಾಮದಾಸ್ ಭಟ್ ಬನ್ನಂಜೆ, ಕಾರ್ಯದರ್ಶಿ ಉಮೇಶ್ ನಾಯಕ್, ಜಿ. ಎಸ್. ಬಿ. ಸೇವಾ ಸಮಾಜದ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.