ವಿಜೃಂಭಣೆಯಿಂದ ನಡೆದ ನವರಾತ್ರಿ ಪೂಜಾ ಮಹೋತ್ಸವ

| Published : Oct 14 2024, 01:18 AM IST

ಸಾರಾಂಶ

ಶ್ರೀಗಂಗಾಪರಮೇಶ್ವರಿ ಗಡಿಕುಲದ ಯಜಮಾನರು ಹಾಗೂ ಗಂಗಾಮತ ಸಮುದಾಯದ ಕುಲಬಾಂಧವರಿಂದ ಪುಂಡಲಿಕಾಕ್ಷ ಸ್ವಾಮೀಜಿ ಹಾಗೂ ಚಿದನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ಮಾತೆಗೆ ವಿಶೇಷವಾಗಿ ವಿವಿಧ ಹೂಗಳಿಂದ ಆಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಶ್ರೀರಾಮರೂಢಸ್ವಾಮಿ ಮಠದ ಆವರಣದಲ್ಲಿ ನವರಾತ್ರಿ ಪೂಜಾ ಮಹೋತ್ಸವವು ವಿಜೃಂಭಣೆಯಿಂದ ಭಕ್ತಿ ಪ್ರಧಾನವಾಗಿ ಜರುಗಿತು.

ಶ್ರೀಗಂಗಾಪರಮೇಶ್ವರಿ ಗಡಿಕುಲದ ಯಜಮಾನರು ಹಾಗೂ ಗಂಗಾಮತ ಸಮುದಾಯದ ಕುಲಬಾಂಧವರಿಂದ ಪುಂಡಲಿಕಾಕ್ಷ ಸ್ವಾಮೀಜಿ ಹಾಗೂ ಚಿದನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ಮಾತೆಗೆ ವಿಶೇಷವಾಗಿ ವಿವಿಧ ಹೂಗಳಿಂದ ಆಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಲಾಯಿತು. ನೆರೆದಿದ್ದ ಭಕ್ತರಿಗೆ ಸ್ವಾಮೀಜಿಗಳು ಅಶೀರ್ವಚನ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ನವರಾತ್ರಿ ಪೂಜಾ ಮಹೋತ್ಸವವು ಭಕ್ತರ ಸಹಕಾರದೊಂದಿಗೆ 9 ದಿನಗಳ ಕಾಲ ಜರುಗಿದೆ. ನಾಡಿಗೆ ಮಳೆ ಬೆಳೆ ಸಂಮೃದ್ಧಿಯಾಗಿ ಬರಲಿ ಎಂದು ಒಕ್ಕೊರಳಿನಿಂದ ಪ್ರಾರ್ಥಿಸಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಲಾಯಿತು ಎಂದರು.

11ನೇ ದಿನ ವಿಜಯದಶಮಿಯಂದು ಮುತ್ತೈದೆಯರಿಂದ ತಾಯಿ ಚಾಮುಂಡೇಶ್ವರಿಗೆ ಮಡಿಲು ತುಂಬುವ ಕಾರ್ಯಕ್ರಮ ಶಾಸ್ತ್ರೋಪ್ತವಾಗಿ ನಡೆಯಿತು. ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಶ್ರೀ ಗಂಗಾಕುಲದ ಯಜಮಾನರಾದ ಎಂ.ಎಸ್.ಮಂಜು, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಸದಸ್ಯರಾದ ನಾಗೇಶ್, ಜಯಮಾನ್ ಬಸವರಾಜು, ಹಿಮಂತ್‌ರಾಜು, ಜನಾರ್ಧನಸ್ವಾಮಿ, ಹರ‍್ಮೋನಿಯಮ್ ಮಾಸ್ಟರ್ ಶಿವಕುಮಾರ್, ಅರ್ಚಕ ಕೃಷ್ಣಪ್ಪ, ಸೇರಿದಂತೆ ಇತರರು ಇದ್ದರು.ನಾಮಪತ್ರ ಸಲ್ಲಿಕೆ ಆರಂಭ

ಮಳವಳ್ಳಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ನಿರ್ದೇಶಕರ ಸ್ಥಾನಗಳಿಗೆ ಅ.28ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ ಎಂದು ಚುನಾವಣಾಧಿಕಾರಿ, ನಿವೃತ್ತ ಪ್ರಾಂಶುಪಾಲ ಪುಟ್ಟಸ್ವಾಮಿ ತಿಳಿಸಿದ್ದಾರೆ. ಸಂಘದ ತಾಲೂಕು ಶಾಖೆ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಅ.18 ಕೊನೆ ದಿನ. ಅ.19 ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಅ.21ರಂದು ಕಡೆ ದಿನವಾಗಿದೆ. ಅ.28ರಂದು ಸಂಜೆ 4ವರೆಗೆ ಮತದಾನ ನಡೆಯಲಿದೆ. ನಂತರ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.