ಸಾರಾಂಶ
ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆಯಿತು. ದೇವಾಲಯದ ಪಕ್ಕದಲ್ಲಿರುವ ಪುರಾಣ ಪ್ರಸಿದ್ಧ ನವಿಲೆ ನಾಗೇಶ್ವರ ಸ್ವಾಮಿ ಕೆರೆಯಲ್ಲಿ ಶ್ರೀ ನಾಗೇಶ್ವರ ಸ್ವಾಮಿ ಅಮರಗಿರಿ ರಂಗನಾಥ ಸ್ವಾಮಿ ಹಾಗೂ ಕೆಂಪಮ್ಮ ದೇವಿಯವರ ವೈಭವದ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶಾಸಕ ಸಿ ಎನ್ ಬಾಲಕೃಷ್ಣ ನವಿಲೆ ನಾಗೇಶ್ವರ ಸ್ವಾಮಿ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ, ನಂತರ ವಿಶೇಷ ತೆಪ್ಪೋತ್ಸವದಲ್ಲಿ ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ಬಾಗೂರು
ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಹೋಬಳಿಯ ನವಿಲೆ ಗ್ರಾಮದ ಶ್ರೀ ನವಿಲೆ ನಾಗೇಶ್ವರ ಸ್ವಾಮಿ ಅವರ ವೈಭವದ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆಯಿತು. ದೇವಾಲಯದ ಪಕ್ಕದಲ್ಲಿರುವ ಪುರಾಣ ಪ್ರಸಿದ್ಧ ನವಿಲೆ ನಾಗೇಶ್ವರ ಸ್ವಾಮಿ ಕೆರೆಯಲ್ಲಿ ಶ್ರೀ ನಾಗೇಶ್ವರ ಸ್ವಾಮಿ ಅಮರಗಿರಿ ರಂಗನಾಥ ಸ್ವಾಮಿ ಹಾಗೂ ಕೆಂಪಮ್ಮ ದೇವಿಯವರ ವೈಭವದ ತೆಪ್ಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶಾಸಕ ಸಿ ಎನ್ ಬಾಲಕೃಷ್ಣ ನವಿಲೆ ನಾಗೇಶ್ವರ ಸ್ವಾಮಿ ಕೆರೆ ತುಂಬಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ, ನಂತರ ವಿಶೇಷ ತೆಪ್ಪೋತ್ಸವದಲ್ಲಿ ಪಾಲ್ಗೊಂಡರು. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಶ್ರೀ ನಾಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ನವಿಲೆ ನಾಗೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಅಭಿವೃದ್ಧಿಗೆ ತಾವು ಹೆಚ್ಚಿನ ಒತ್ತು ನೀಡಿರುವುದಾಗಿ ತಿಳಿಸಿದ ಅವರು, ತಮ್ಮ ಅವಧಿಯಲ್ಲಿ ಅನ್ನ ದಾಸೋಹ ಮಂಟಪ ಹಾಗೂ ವಾಣಿಜ್ಯ ಮಳಿಗೆಗಳ ನಿರ್ಮಾಣ ಜೊತೆಗೆ ಹೈಟೆಕ್ ಶೌಚಾಲಯಗಳ ನಿರ್ಮಾಣ ಭಕ್ತರ ಅನುಕೂಲಕ್ಕಾಗಿ ಚನ್ನರಾಯಪಟ್ಟಣ ಹಾಗೂ ತಿಪಟೂರು ಡಿಪೋ ಮೂಲಕ ಹೆಚ್ಚಿನ ಬಸ್ ಸೇವೆ ಒದಗಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ನವಿಲೆ ಏತ ನೀರಾವರಿ ಯೋಜನೆಯ ಮೂಲಕ ಈ ಭಾಗದ ಅನೇಕ ಕೆರೆಗಳನ್ನು ತುಂಬಿಸಲಾಗಿದೆ. ತಾಲೂಕಿನಲ್ಲಿ ಶೇಕಡ 80ರಷ್ಟು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಗಮನಹರಿಸಿರುವುದಾಗಿ ಹೇಳಿದರು. ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ನವಿಲೆ ನಾಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಎನ್ ಬಿ ನಾಗರಾಜ್, ಮುಖಂಡರುಗಳಾದ ಹೊಸೂರು ಚಂದ್ರಪ್ಪ, ಬಿಜೆಪಿ ಮುಖಂಡ ಅಣತಿ ಆನಂದ್, ಶ್ವೇತ ಆನಂದ್, ಎನ್‌ಸಿ ರವೀಶ್, ಎನ್ ನವೀನ್, ಎನ್ ಕೆ ನಾಗಪ್ಪ, ಸದಾಶಿವ ಎನ್ ಆರ್, ನಾಗೇಶ್, ಕುಮಾರಸ್ವಾಮಿ, ಜಯದೇವಪ್ಪ, ಕುಮಾರ್, ರಾಜು, ನವಿಲೆ ಅಣ್ಣಪ್ಪ, ವಸಂತ್ ಕುಮಾರ್, ಎನ್ ಎಲ್ ನಾಗರಾಜ್, ವಳಗೇರಹಳ್ಳಿ ಮಂಜಣ್ಣ, ಕೆಂಪೇಗೌಡ, ಕಾಂತರಾಜ್, ಹೊಸೂರು ಬಸವರಾಜ್ ಸೇರಿದಂತೆ ಹಾಜರಿದ್ದರು.