ನವಿಲೂರು ಗ್ರಾಪಂ ಅಧ್ಯಕ್ಷರಾಗಿ ಎಸ್. ಮಹದೇವು ಅವಿರೋಧ ಆಯ್ಕೆ

| Published : Dec 13 2024, 12:49 AM IST

ನವಿಲೂರು ಗ್ರಾಪಂ ಅಧ್ಯಕ್ಷರಾಗಿ ಎಸ್. ಮಹದೇವು ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಅಧ್ಯಕ್ಷರಾಗಿದ್ದ ರೇವಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು

ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ನವಿಲೂರು ಗ್ರಾಪಂ ಅಧ್ಯಕ್ಷರಾಗಿ ಎಸ್. ಮಹದೇವು ಅವಿರೋಧವಾಗಿ ಆಯ್ಕೆಯಾದರು.21 ಸದಸ್ಯರ ಬಲವನ್ನು ಹೊಂದಿರುವ ನವಿಲೂರು ಗ್ರಾಪಂ ಅಧ್ಯಕ್ಷ ಸ್ಥಾನ ಎಸ್ಸಿ ಸಮುದಾಯಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ಕಾಂಗ್ರೆಸ್ ಪಕ್ಷ 16 ಸ್ಥಾನ, ಬಿಜೆಪಿ ಪಕ್ಷ 5 ಸ್ಥಾನಗಳಲ್ಲಿ ಗೆದ್ದಿದ್ದರು.ಈ ಹಿಂದೆ ಅಧ್ಯಕ್ಷರಾಗಿದ್ದ ರೇವಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎಸ್. ಮಹದೇವು ಹೊರತುಪಡಿಸಿ ಯಾರು ಸಹ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾ ಅಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಎಇಇ ಸತ್ಯನಾರಾಯಣ ಅವಿರೋಧ ಆಯ್ಕೆ ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ 17 ಸದಸ್ಯರು ಹಾಜರಾಗಿದ್ದರು. ನಾಲ್ವರು ಸದಸ್ಯರು ಗೈರು ಹಾಜರಾಗಿದ್ದರು. ಗ್ರಾಪಂ ಉಪಾಧ್ಯಕ್ಷೆ ನಿರ್ಮಲ, ಸದಸ್ಯರಾದ ರೇವಣ್ಣ, ಕಾವ್ಯ ಲಕ್ಷ್ಮಣ, ಸಣ್ಣಮ್ಮ, ಸುಂದರಮ್ಮ, ತಾಯಮ್ಮಣ್ಣಿ ಹೊಣಕಾರ ನಾಯಕ, ನಾಗಮ್ಮ, ಜ್ಯೋತಿ, ಸುಧಾ, ಮಹದೇವ, ಚಂದ್ರು, ನಾರಾಯಣ, ಪ್ರಕಾಶ, ಮಾದೇಗೌಡ, ಕೆಂಪರಾಜು, ಮುಖಂಡರಾದ ನಾಯಕ, ಲಕ್ಷ್ಮಣ, ಕೂಸಪ್ಪ, ಪ್ರಕಾಶ, ಸುರೇಶ, ಪುಟ್ಟಣ್ಣ, ಮಹೇಶ, ಪಿಡಿಒ ಮಂಜುನಾಥ್ ಇದ್ದರು.