ಸಾರಾಂಶ
ನವಲಗುಂದ ಪಟ್ಟಣದಲ್ಲಿ ಬೆಳಗ್ಗೆ 6ರಿಂದ ಆರಂಭವಾದ ಪ್ರತಿಭಟನೆಯಲ್ಲಿ ಐತಿಹಾಸಿಕ ನೀಲಮ್ಮನ ಕೆರೆಯ ಮುಂಭಾಗದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಬಳಿಕ ತಾಲೂಕು ಪಂಚಾಯಿತಿ ಎದುರು ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿದವು.
ನವಲಗುಂದ:
ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ದಲಿತ ಸಂಘರ್ಷ ಸಮಿತಿ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಪಟ್ಟಣದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಅಂಗಡಿಗಳು ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದವು. ಪಟ್ಟಣದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವರು.
ಪಟ್ಟಣದಲ್ಲಿ ಬೆಳಗ್ಗೆ 6ರಿಂದ ಆರಂಭವಾದ ಪ್ರತಿಭಟನೆಯಲ್ಲಿ ಐತಿಹಾಸಿಕ ನೀಲಮ್ಮನ ಕೆರೆಯ ಮುಂಭಾಗದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಬಳಿಕ ತಾಲೂಕು ಪಂಚಾಯಿತಿ ಎದುರು ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಮೆರವಣಿಗೆ ನಡೆಸಿದವು.ನಂತರ ಲಿಂಗರಾಜ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಿ, ಅಮಿತ್ ಶಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಪ್ರಧಾನಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ವರ್ಧಮಾನಗೌಡ ಹಿರೇಗೌಡ್ರು, ಶಂಕರ ಅಂಬಲಿ, ಕಾಶಪ್ಪ ಕಾಳೆ, ಪುಂಡಲಿಕ್ ಚಲವಾದಿ, ಕುಮಾರ ಲಕ್ಕಣ್ಣವರ, ಮಂಜು ಜಾಧವ, ರವಿ ದೂಡ್ಡಮನಿ, ಮಹಾಂತೇಶ ಭೋವಿ, ಮೈಲಾರಿ ವೈದ್ಯ, ಮಾಲತೇಶ ಚಲವಾದಿ, ನಾಗರಾಜ ಕಾಳೆ, ಈರಣ್ಣ ಶಿಡಗಂಟಿ, ಬಸವರಾಜ ಮುಧೋಳ, ರಾಜು ನಡುವಿನಮನಿ, ಕರಿಯಪ್ಪ ಹರ್ಲಿ, ಮಹಾಂತೇಶ ಚಲವಾದಿ, ನಂದಿನಿ ಹಾದಿಮನಿ, ಈರಣ್ಣ ಶಿಡಗಂಟಿ, ಶಿವಾನಂದ ಚಲವಾದಿ, ಮಂಜುನಾಥ ಗಿರೇಣ್ಣವರ, ಸತೀಶ ಪೂಜಾರ, ವಿನಾಯಕ ದೊಡ್ಡಮನಿ, ರಾಜು ದೊಡ್ಡಮನಿ ಸೇರಿದಂತೆ ಡಿಎಸ್ಎಸ್ ಪದಾಧಿಕಾರಿಗಳು ಇದ್ದರು.