ಸಾರಾಂಶ
ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ತೆರೆ ಕಂಡಿತು. 10 ದಿನಗಳ ಶ್ರೀ ಪಾರ್ವತಿಗೆ ವಿಶೇಷ ಪೂಜೆ ನೆರವೇರಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಬ್ರಾಹ್ಮಣ ಸಮಾಜದ ವತಿಯಿಂದ ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ತೆರೆ ಕಂಡಿತು. 10 ದಿನಗಳ ಕಾಲ ಶ್ರೀಪಾರ್ವತಿಗೆ ವಿಶೇಷ ಪೂಜೆ ನೆರವೇರಿತು.ಗುರುವಾರ ಮಧ್ಯಾಹ್ನ ದೇವಿಯ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ, ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮಹಿಳೆಯರಾದಿಯಾಗಿ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಿಂಗಾರಿಮೇಳ, ಡೊಳ್ಳುಕುಣಿತ ಜನರನ್ನು ಆಕರ್ಷಿಸಿಸಿತು. ಸಂಜೆ ಆನೆಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು. ಪದಾಧಿಕಾರಿಗಳಾದ ನಂದ, ಎಸ್.ಆರ್. ಸೋಮೇಶ್, ಹಾಲೇರಿ ದಿನೇಶ್, ಜಗದೀಶ್, ಆಶಾ ಸತೀಶ್. ಎಲ್.ಎಂ. ಪ್ರೇಮಾ, ಆರ್ಚನಾ, ಲಕ್ಷ್ಮಿ ಮತ್ತಿತರರು ಇದ್ದರು.--------------------------------------
ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಸಂಪನ್ನಕನ್ನಡಪ್ರಭವಾರ್ತೆ ಸೋಮವಾರಪೇಟೆಸಮೀಪದ ಕಿಬ್ಬೆಟ್ಟ ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಪೂಜಿಸಿದ್ದ ಉತ್ಸವ ಮೂರ್ತಿಯನ್ನು ಹಾರಂಗಿ ನದಿಯಲ್ಲಿ ಗುರುವಾರ ವಿಸರ್ಜಿಸಲಾಯಿತು.
ಪ್ರಧಾನ ಅರ್ಚಕ ಮನೋಜ್ ಭಟ್ ಅವರ ಪೌರೋಹಿತ್ವದಲ್ಲಿ ನವದುರ್ಗಾ ಮಾತೆಗೆ 10 ದಿನಗಳ ಕಾಲ ವಿಶೇಷ ಪೂಜೆ, ಹೋಮ ನಡೆಯಿತು. ಪ್ರಮುಖರಾದ ಶಾಂಭವಿ, ಜಾನಕಿ, ರುಕ್ಮಿಣಿ, ದಿವ್ಯ, ಮಧು, ರವಿ, ಕುಶಾಲಪ್ಪ, ರಾಜಣ್ಣ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.