ಸಾರಾಂಶ
ದಾಬಸ್‌ಪೇಟೆ: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ನವರಾತ್ರಿ ಹಬ್ಬ ತನ್ನದೇ ಆದ ಸ್ಥಾನಮಾನ ಹೊಂದಿದೆ ಎಂದು ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ದಾಬಸ್‌ಪೇಟೆ: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ನವರಾತ್ರಿ ಹಬ್ಬ ತನ್ನದೇ ಆದ ಸ್ಥಾನಮಾನ ಹೊಂದಿದೆ ಎಂದು ಬಸವಣ್ಣ ದೇವರ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಸೋಂಪುರ ಹೋಬಳಿಯ ಕಂಬಾಳು ಮಠದಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಬನ್ನಿಪೂಜೆ ಹಾಗೂ ಮರುಳಸಿದ್ದೇಶ್ವರ ಸ್ವಾಮೀಜಿ ಅಕ್ಕಿಪೂಜೆಗೆ ಚಾಲನೆ ನೀಡಿ ಮಾತನಾಡಿದರು.ಹಿಂದೂಗಳ ಸಂಪ್ರದಾಯದಲ್ಲಿ ಇತರೆ ಹಬ್ಬಗಳಿಗಿಂತ ಭಿನ್ನವಾಗಿ ದುರ್ಗಾಮಾತೆಯನ್ನು 9 ದಿನಗಳ ಕಾಲ ಆರಾಧಿಸಲಾಗುತ್ತದೆ. ದಕ್ಷಿಣ ಭಾರತದ ಜೊತೆಗೆ ಉತ್ತರ ಭಾರತದಲ್ಲೂ ಸಾಕಷ್ಟು ವಿಶಿಷ್ಟವಾಗಿ ದುರ್ಗೆಯನ್ನು ಪೂಜಿಸುವುದು ವಾಡಿಕೆ. ಈ ಹಬ್ಬಕ್ಕೆ ಪರಸ್ಪರ ಶಕ್ತಿಗಳನ್ನು ಸಂಹಾರ ಮಾಡಿ, ಪ್ರಪಂಚದಲ್ಲಿ ಕುಟುಂಬಸ್ಥರು ಒಂದೆಡೆ ಸೇರಿ ಸಾಮರಸ್ಯದಿಂದ ಆಚರಿಸುವ ಪ್ರತೀತಿ ಇದ್ದು ದುರ್ಗಾಮಾತೆ ಜಗತ್ತಿಗೆ ಒಳಿತನ್ನು ಮಾಡಲಿ ಎಂದು ಹೇಳಿದರು.
ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ದೇವರನ್ನು ಅಕ್ಕಿ ಪೂಜೆಯೊಂದಿಗೆ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಅಕ್ಕಿಯನ್ನು ವಿವಿಧ ಬಣ್ಣಗಳಿಂದ ಬೆರೆಸಿ ತನ್ನದೇ ಆದ ಶೈಲಿಯನ್ನು ಅಕ್ಕಿಯನ್ನು ಅಲಂಕರಿಸಿ ದೇವರಿಗೆ ಪೂಜೆ ಸಲ್ಲಿಸುವುದು ಒಂದು ವಿಧಾನವಾಗಿದೆ ಎಂದರು.ದೊಡ್ಡಮಠದ ಶಿವಬಸವ ಸ್ವಾಮೀಜಿ, ಗುರುವಣ್ಣ ದೇವರ ಮಠದ ನಂಜುಂಡ ಸ್ವಾಮೀಜಿ, ಬಂಡೆಮಠದ ಬಸವಲಿಂಗ ಸ್ವಾಮೀಜಿ, ವಿವಿಧ ಮಠಾಧೀಶರು, ಸಾಹಿತಿ ಬಾಲಚಂದ್ರ, ಭಕ್ತಾದಿಗಳಾದ ನಿರಂಜನ್, ಹರಳೂರು ಪ್ರಭುದೇವ್, ಶಿವಣ್ಣ, ರುದ್ರೇಶ್, ಅರ್ಚಕರಾದ ನವೀನ್, ಚೇತನ್, ರುದ್ರೇಶ್ ಇದ್ದರು.
ಪೋಟೋ 6: ಸೋಂಪುರದ ಕಂಬಾಳು ಮಠದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿದ್ದರು.