ಕೋಟಿಲಿಂಗೇಶ್ವರದಲ್ಲಿ ನವರಾತ್ರಿ

| Published : Sep 29 2025, 01:03 AM IST

ಸಾರಾಂಶ

ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಇಲ್ಲಿನ ಭಕ್ತಿ ಮಂದಿರದಲ್ಲಿ ತಾಯಿ ಚಾಮುಂಡೇಶ್ವರಿ ಸಹಿತ ನೂರಾರು ವಿವಿಧ ರೀತಿಯ ನವರಾತ್ರಿ ಬೊಂಬೆಗಳನ್ನಿಟ್ಟು ನಿತ್ಯ ಅದ್ಧೂರಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಕೃಷ್ಣನ ಲೀಲೆಗಳನ್ನು ತೋರಿಸುವ ಬೊಂಬೆಗಳು, ವಿಷ್ಣುವಿನ ದಶಾವತಾರ ಬಿಂಬಿಸುವ ಬೊಂಬೆಗಳು ಪ್ರದರ್ಶನ ಇಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೋಟಿಲಿಂಗೇಶ್ವರದಲ್ಲಿ ೯ ದಿನಗಳ ಕಾಲ ನವರಾತ್ರಿ ಉತ್ಸವ ಆರಂಭಗೊಂಡಿದ್ದು, ಪ್ರವಾಸಿಗರು ಸೇರಿದಂತೆ ಪ್ರತಿದಿನವೂ ನೂರಾರು ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿನಿತ್ಯ ಚಾಮುಂಡೇಶ್ವರಿ ದೇವಿಯ ರಥೋತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತಿದೆ. ದಸರಾ ಅಂಗವಾಗಿ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ರಾಮಾಯಣ ಹಾಗೂ ಮಹಾಭಾರತದ ಬೊಂಬೆಗಳನ್ನು ಜೋಡಿಸಲಾಗಿದೆ. ಅಲ್ಲದೇ ಅನಂತಪದ್ಮನಾಭ ಸ್ವಾಮಿಯ ವೈಭವ ಹಾಗೂ ಮಹಾ ವಿಷ್ಣುವಿನ ದಶಾವತಾರ ಕೂಡ ನೋಡಬಹುದಾಗಿದೆ.ನೂರಾರು ಬೆಂಬೆಗಳ ಪ್ರದರ್ಶನಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಇಲ್ಲಿನ ಭಕ್ತಿ ಮಂದಿರದಲ್ಲಿ ತಾಯಿ ಚಾಮುಂಡೇಶ್ವರಿ ಸಹಿತ ನೂರಾರು ವಿವಿಧ ರೀತಿಯ ನವರಾತ್ರಿ ಬೊಂಬೆಗಳನ್ನಿಟ್ಟು ನಿತ್ಯ ಅದ್ಧೂರಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಕೃಷ್ಣನ ಲೀಲೆಗಳನ್ನು ತೋರಿಸುವ ಬೊಂಬೆಗಳು, ವಿಷ್ಣುವಿನ ದಶಾವತಾರ ಬಿಂಬಿಸುವ ಬೊಂಬೆಗಳು, ರಥೋತ್ಸವಗಳು, ಚಾಮುಂಡೇಶ್ವರಿ ದೇವಿಯ ವಿವಿಧ ಅವತಾರಗಳನ್ನು ಇಲ್ಲಿ ಕಾಣಬಹುದು.

ಕಾಲರಾತ್ರಿ ಪ್ರಯುಕ್ತ ಪೂಜೆ

ಕಾಲರಾತ್ರಿಯ ದೇಹವು ಕಪ್ಪು ಬಣ್ಣದಂತೆ, ಗಾಢಾಂಧಕಾರವನ್ನು ಹೋಲುತ್ತದೆ. ದೇವಿಯು ತಲೆಯ ಜಡೆಯನ್ನು ಕಟ್ಟದೆ ಹಾಗೆಯೇ ಬಿಟ್ಟಿದ್ದಾಳೆ. ಕುತ್ತಿಗೆಯಲ್ಲಿ ಹೊಳೆಯುವ ಮಾಲೆ ಇದೆ. ದೇವಿಗೆ ಮೂರು ಕಣ್ಣುಗಳಿದ್ದು, ಅವು ಗೋಲಾಕಾರದಂತೆ ಪ್ರಕಾಶಿಸುತ್ತವೆ. ಉಸಿರಾಡುವಾಗ ಬೆಂಕಿಯ ಜ್ವಾಲೆಗಳು ಹೊರಹೊಮ್ಮುತ್ತವೆ.ದುಷ್ಟ ಶಕ್ತಿಗಳ ಸಂಹಾರ

ನವರಾತ್ರಿ ಉತ್ವದಲ್ಲಿ ನಾವು ದುರ್ಗಾ ದೇವಿಯನ್ನು ಮತ್ತು ಶ್ರೀರಾಮನನ್ನು ನೆನೆಯುತ್ತೇವೆ. ದುಷ್ಟ ಶಕ್ತಿ ವಿರುದ್ಧ ಧರ್ಮ ವಿಜಯವನ್ನು ಹೇಗೆ ನವರಾತ್ರಿಯು ಸೂಚಿಸುತ್ತದೆಯೋ ಹಾಗೇ ನಮ್ಮ ಕೆಟ್ಟ ಆಲೋಚನೆ, ಅಹಿತಕರ ಘಟನೆಗಳು, ನಕಾರಾತ್ಮಕ ಶಕ್ತಿಗಳ ಆರ್ಭಟವನ್ನು ಸಂಹಾರ ಮಾಡಲು ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಕೋಟಿಲಿಂಗೇಶ್ವರ ದೇವಾಲಯದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ತಿಳಿಸಿದರು.