ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನವರಾತ್ರಿ ಉತ್ಸವ ಪ್ರಾರಂಭ
2 Min read
KannadaprabhaNewsNetwork
Published : Oct 14 2023, 01:02 AM IST
Share this Article
FB
TW
Linkdin
Whatsapp
ು್ಿ | Kannada Prabha
Image Credit: KP
ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನವರಾತ್ರಿ ಉತ್ಸವ ಪ್ರಾರಂಭ
,ಪ್ರತಿದಿನ ದೇವಿಗೆ ವಿಶೇಷ ಅಲಂಕಾರ,ಪೂಜೆ-ಧಾರ್ಮಿಕ ಕಾರ್ಯಕ್ರಮ,ಅ 25 ರವರೆಗೆ ಶಾರದೆ ಆರಾಧನೆ ಕನ್ನಡಪ್ರಭ ವಾರ್ತೆ, ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರದಿಂದ ಆರಂಭವಾಗಲಿರುವ ಶರನ್ನವರಾತ್ರಿ ಉತ್ಸವ 25 ರವರೆಗೆ ಕಾರ್ಯಕ್ರಮ ನಡೆಯಲಿದ್ದು ಪ್ರತಿ ದಿನ ಪೀಠದ ಅಧಿದೇವತೆ ಶಾರದಾಂಬೆಯ ಆರಾಧನೆ ವಿಶೇಷ ಅಲಂಕಾರ, ಪೂಜೆ ಸಹಿತ ಸಂಪನ್ನಗೊಳ್ಳಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು. ಸಂಜೆ ಶ್ರೀಮಠದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಬೀದಿ ಉತ್ಸವ, ನವರಾತ್ರಿಯ ಕೊನೆಯ ದಿನ ಶ್ರೀ ಶಾರದಾಂಬಾ ಮಹಾ ರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವಗಳು ನಡೆಯಲಿವೆ. ಶಾರದೆಗೆ ಮಹಾಭಿಷೇಕದ ನಂತರ ಮೂಲ ಬಿಂಬದ ಹರಿದರ್ಶನ ನಿರಾಂಜನ, ಮಹಾವ್ಯಾಸ ಪೂರ್ವಕ ಶತರುದ್ರಾಭಿಷೇಕ ನೆರವೇರಲಿದೆ. ವಿವಿಧ ರೀತಿಯ ಪಂಚಾಮೃತಗಳಿಂದ ಸಂಪ್ರೀತಗೊಳಿಸಲಾಗುತ್ತದೆ. 108 ಆವರ್ತಿ ಶ್ರೀ ಸೂಕ್ತ ಪಠಣದಿಂದ ಅಭಿಷೇಕ, ಮಹಾ ಮಂಗಳಾರತಿ ನೆರವೇರುತ್ತದೆ. ಸಂಜೆ ಶಕ್ತಿ ಗಣಪತಿ ಸನ್ನಿಧಿಯಲ್ಲಿ ಶಾರದಾಂಬೆಗೆ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ. ಶಾರದಾದೇವಿ ಮೂರ್ತಿ ಯನ್ನು ಸ್ವರ್ಣರಥದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನ ಪ್ರಾಂಗಣದಲ್ಲಿ ಪ್ರದಕ್ಷಿಣೆ ನೇರವೇರಿಸಲಾಗುವುದು. ಶರನ್ನವರಾತ್ರಿ ಪ್ರಯುಕ್ತ ಅಷ್ಟದ್ರವ್ಯ ಗಣಹೋಮ, ಸಪ್ತಶತಿ ಪಾರಾಯಣ, ಶತಚಂಡೀ ಮಹಾಯಾಗ, ಗಜಪೂಜೆ. ಅಶ್ವಪೂಜೆ, ಆಯುಧಪೂಜೆ, ಚತುರ್ವೇದ ಪಾರಾಯಣ ನೆರವೇರಲಿದೆ. ದೇಶಿ ಭಾಗವತ ಪಠಣ, ಹರಿವಂಶ,ಲಲಿತೋಪಾಖ್ಯಾನ, ಲಕ್ಷಿನಾರಾಯಣ ಹೃದಯ.ಸೂತಸಂಹಿತೆ ಮೊದಲಾದ ಗ್ರಂಥಗಳನ್ನು ಫಠಣ ಮಾಡಲಾಗುತ್ತದೆ. ಪ್ರತಿದಿನ ಸಂಜೆ ಶಾರದೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ನೆರವೇರುತ್ತದೆ. ಅ. 15 ರ ಭಾನುವಾರ ಶಾರದೆಗೆ ಹಂಸವಾಹನಾಲಂಕಾರ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಧುಷಿ ಮಾದುರಿ ಸಿತಾರಾಮನ್ ತಂಡದವರಿಂದ ಹಾಡುಗಾರಿಕೆ, ಬೀದಿ ಉತ್ಸವದಲ್ಲಿ ಅಡ್ಡಗೆದ್ದೆ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ 16 ರ ಸೋಮವಾರ ಶಾರದೆಗೆ ಬ್ರಾಹ್ಮಿ ಅಲಂಕಾರ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಧುಷಿ ಪ್ರಜ್ಞಾ ಅಡಿಗ ತಂಡದವರಿಂದ ಹಾಡು ಗಾರಿಕೆ ನಡೆಯಲಿದೆ. ಬೀದಿ ಉತ್ಸವದಲ್ಲಿ ಶೃಂಗೇರಿ ಪಟ್ಟಣ ವ್ಯಾಪ್ತಿಯ ನಾಗರಿಕರು ಪಾಲ್ಗೊಳ್ಳಲಿದ್ದಾರೆ. ಅ 17ರ ಮಂಗಳವಾರ ಶಾರದೆಗೆ ವೃಷಭವಾಹನಾಲಂಕಾರ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಅಭಿರಾಂ ಬೋಡೆ ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಬೀದಿ ಉತ್ಸವದಲ್ಲಿ ಕೂತ ಗೋಡು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ 18 ರ ಬುಧವಾರ ಶಾರದೆಗೆ ಮಯೂರ ವಾಹನಾಲಂಕಾರ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಧುಷಿ ವಿದ್ಯಾರಾಜ ತಂಡದವರಿಂದ ಹಾಡುಗಾರಿಕೆ, ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ 19 ರ ಗುರುವಾರ ಶಾರದೆಗೆ ಗರುಡ ವಾಹನಾಲಂಕಾರ,ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರು ವಿದ್ವಾನ್ ಸುಬ್ರಮಣ್ಯ ಕುಮಾರ್ ತಂಡದವರಿಂದ ತಾಳವಾದ್ಯ, ಬೀದಿ ಉತ್ಸವದಲ್ಲಿ ವಿದ್ಯಾರಣ್ಯಪುರ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಅ 20 ರ ಶುಕ್ರವಾರ ವೀಣಾ ಶಾರದಾಲಂಕಾರ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಬಾಲುಶಾಸ್ತ್ರಿ ತಂಡದವರಿಂದ ವೀಣಾವಾದನ ಬೀದಿ ಉತ್ಸವದಲ್ಲಿ ಧರೆಕೊಪ್ಪ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. 21 ರ ಶನಿವಾರ ಶಾರದೆಗೆ ಮೋಹಿನಿ ಅಲಂಕಾರ, ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ವಿಧುಷಿ ಸುನಿತಾ ತಂಡದವರಿಂದ ಭಕ್ತಿ ಸಾಗರ, ಬೀದಿ ಉತ್ಸವದಲ್ಲಿ ನೆಮ್ಮಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. 22 ರ ಭಾನುವಾರ ಶಾರದೆಗೆ ರಾಜರಾಜೇಶ್ವರಿ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ್ಞಾನೋದಯ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. 23 ರ ಸೋಮವಾರ ಶಾರದೆಗೆ ಚಾಮುಂಡಿ ಅಲಂಕಾರ ನಡೆಯಲಿದ್ದು, ವಿಜಯದಶಮಿ, ಶಮೀಪೂಜೆ, ವಿಜಯೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮರ್ಕಲ್ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. 24 ರಂದು ಶಾರದೆಗೆ ಗಜಲಕ್ಷ್ಮಿ ಅಲಂಕಾರ , ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ. -- ಬಾಕ್ಸ್-- ಮಹಾಲಯ ಅಮವಾಸ್ಯೆಗೆ ವಿಶೇಷ ಪೂಜೆ ಮಹಾಲಯ ಅಮವಾಸ್ಯೆ ದಿನವಾದ ಶನಿವಾರ ಶ್ರೀ ಶಾರದಾಂಬೆಗೆ ಮಹಾಭಿಷೇಕ ನಂತರ ಜಗತ್‌ಪ್ರಸೂತಿಕ ಅಲಂಕಾರದೊಂದಿಗೆ ವಿಶೇಷ ಪೂಜೆ ಮಾಡಲಾಗುವುದು. ನಂತರ ನವರಾತ್ರಿಯ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ವಿದ್ಯುಕ್ತವಾಗಿ ಪ್ರಾರಂಭಗೊಳ್ಳುತ್ತದೆ. 13 ಶ್ರೀ ಚಿತ್ರ 1-ಶ್ರೀ ಶಾರದಾಪೀಠ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.