ನಕ್ಸಲ್‌ ಶರಣಾಗತಿ ಒಂದು ನಾಟಕದಂತಿದೆ: ಸುನಿಲ್ ಕುಮಾರ್

| Published : Jan 12 2025, 01:15 AM IST

ನಕ್ಸಲ್‌ ಶರಣಾಗತಿ ಒಂದು ನಾಟಕದಂತಿದೆ: ಸುನಿಲ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ನಕ್ಸಲ್ ಶರಣಾಗತಿ ಪ್ರಕ್ರಿಯೆ ಪೂರ್ವಯೋಜಿತ ಅಲ್ಲದಿದ್ದಲ್ಲಿ ನಕ್ಸಲರು ಶರಣಾಗುವಂತೆ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ ಕೂಡಲೇ ನಕ್ಸಲರಿಗೆ ಆ ಟ್ವೀಟ್ ಹೇಗೆ ತಲುಪಿತು? ಒಟ್ಟಾರೆ ನಕ್ಸಲ್‌ ಶರಣಾಗತಿ ಒಂದು ನಾಟಕದಂತಿದೆ ಎಂದು ಸುನಿಲ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿನಕ್ಸಲರ ಶರಣಾಗತಿ ಬಗ್ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಶರಣಾಗತಿ ಪ್ರಕ್ರಿಯೆ ಬಗ್ಗೆ ಖುದ್ದು ಸಿಎಂ ಮತ್ತು ಗೃಹ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಸಲ್ ಶರಣಾಗತಿ ಪ್ರಕ್ರಿಯೆ ಪೂರ್ವಯೋಜಿತ ಅಲ್ಲದಿದ್ದಲ್ಲಿ ನಕ್ಸಲರು ಶರಣಾಗುವಂತೆ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ ಕೂಡಲೇ ನಕ್ಸಲರಿಗೆ ಆ ಟ್ವೀಟ್ ಹೇಗೆ ತಲುಪಿತು? ಒಟ್ಟಾರೆ ನಕ್ಸಲ್‌ ಶರಣಾಗತಿ ಒಂದು ನಾಟಕದಂತಿದೆ ಎಂದು ಹೇಳಿದರು.ನಕ್ಸಲ್ ಎನ್‌ಕೌಂಟರ್ ನಡೆದು 15 ದಿನಗಳ ಒಳಗೆ ಶರಣಾಗತಿ, ವೇದಿಕೆಯ ಮೇಲೆ ನಡೆದ ಒಂದು ನಾಟಕದಂತಿದೆ, ನಕ್ಸಲರು ಶರಣಾದಾಗ ಅವರ ಬಳಿ ಶಸ್ತ್ರಾಸ್ತ್ರ ಯಾಕೆ ಇರಲಿಲ್ಲ? ಯಾವ ನಗರ ನಕ್ಸಲರ ಮನೆಯಲ್ಲಿ ಶಾಸ್ತ್ರಾಸ್ತ್ರ ಬಚ್ಚಿಟ್ಟಿದ್ದಾರೆ? ವಿಕ್ರಂ ಗೌಡನ ಆಡಿಯೋ ಮಾಧ್ಯಮಗಳಲ್ಲಿ ಬಂದಿದೆ, ನಾನು ಶರಣಾಗೊದಿಲ್ಲ ಎಂದು ಹೇಳಿದ್ದಾನೆ. ಆದ್ದರಿಂದ ಆತನನ್ನು ಹತ್ಯೆ ಮಾಡಿ ಉಳಿದವರನ್ನು ಶರಣಾಗತಿ ಮಾಡಲಾಯಿತಾ? ರಾಜ್ಯ ನಕ್ಸಲ್ ಮುಕ್ತ ಆಗುತ್ತಿರುವುದು ಸ್ವಾಗತಾರ್ಹ, ಆದರೆ ಶರಣಾಗತಿ ವಿಧಾನವನ್ನು ಪೋಲಿಸ್ ಮಹಾ ನಿರ್ದೇಶಕರು ಒಪ್ಪಿಕೊಳ್ಳುತ್ತಾರಾ? ಎಂದವರು ಪ್ರಶ್ನಿಸಿದರು.ಅರಣ್ಯದಿಂದ ಹೊರಬಂದು ಪುನರ್ವಸತಿಗೋಸ್ಕರ ಅರ್ಜಿ ಹಾಕಿ ನೂರಾರು ಜನ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಕಾಯುತ್ತಿದ್ದಾರೆ. ಆದರೆ ಅವರಿಗ್ಯಾರಿಗೂ ಪುನರ್ವಸತಿ ಪ್ಯಾಕೇಜಿಗೆ ಹಣ ಬಿಡುಗಡೆ ಮಾಡಿಲ್ಲ, ಬಡವರಿಗೆ ಪುನರ್ವಸತಿಗೆ ಪ್ಯಾಕೇಜ್ ಕೊಡದವರು ನಕ್ಸಲರಿಗೆ ಪ್ಯಾಕೇಜ್ ಕೊಡಲು ಆತುರ ತೋರುತ್ತಿದ್ದಾರೆ. ಇದು ಕಾಡಿನ ನಕ್ಸಲರನ್ನು ನಾಡಿನ ನಕ್ಸಲರನ್ನಾಗಿಸುವ ಪ್ಯಾಕೇಜ್ ಎಂದವರು ಆರೋಪಿಸಿದರು.ನಗರ ನಕ್ಸಲರು ಈ ದೇಶಕ್ಕೆ ಅತಿ ದೊಡ್ಡ ಅಪಾಯ. ಸರ್ಕಾರ ನಗರ ನಕ್ಸಲರ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ರಾಜಕೀಯದಲ್ಲಿ ಗಾಂಧಿವಾದ ಮುಂದಿಟ್ಟವರು ಮುಖ್ಯಮಂತ್ರಿಗಳು, ಆದರೆ ರಾಜಕೀಯದ ಕೊನೆಗಾಲದಲ್ಲಿ ಮಾವೋವಾದಕ್ಕೆ ವಾಲಿದ್ದಾರೆ. ಮುಖ್ಯಮಂತ್ರಿಗಳ ಧೋರಣೆ ಬದಲಾಗುತ್ತಿರುವುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಗಳೇ ನಗರ ನಕ್ಸಲರ ಬಗ್ಗೆ ಮೃದು ಧೋರಣೆ ಕೈಬಿಡಿ ಎಂದವರು ಸಲಹೆ ನೀಡಿದರು.ಎಎನ್‌ಎಫ್ ಮುಂದುವರಿಸಬೇಕು ಎಂದು ನಾನು ಹೇಳುವುದಿಲ್ಲ. ಆದರೆ ಈ ಪ್ರಕ್ರಿಯೆ ಸರಿಯಾಗಿಲ್ಲ ಅನ್ನೋದು ನನ್ನ ವಾದ, ನಗರ ನಕ್ಸಲರು ಸಂಪೂರ್ಣವಾಗಿ ಮುಖ್ಯಮಂತ್ರಿಗಳ ಕಚೇರಿಯನ್ನು ಆವರಿಸಿಕೊಂಡಿದ್ದಾರೆ. ಇದು ರಾಜ್ಯದ ಹಿತದೃಷ್ಟಿಯಿಂದ ಒಳಿತಲ್ಲ. ಕೃಷ್ಣ ಮುಖ್ಯಮಂತ್ರಿಗಳ ಕಚೇರಿಯಾಗಿಯೇ ಇರಬೇಕು, ಆದರೆ ಅದು ನಗರ ನಕ್ಸಲರ ಕಚೇರಿ ಆಗಿ ಪರಿವರ್ತನೆ ಆಗಬಾರದು. ಮುಖ್ಯಮಂತ್ರಿಗಳ ವಿವೇಚನೆ, ಆಲೋಚನೆ, ಚಟುವಟಿಕೆ, ಚಿಂತನೆ, ನಿರ್ಧಾರ ಅವರದ್ದೇ ಆಗಿರಬೇಕು. ಬದಲಿಗೆ ನಗರ ನಕ್ಸಲರ ಚಿಂತನೆ ಆಗಬಾರದು ಎಂದವರು ಹೇಳಿದರು.