ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್ಸಿಸಿ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಘಟಕದ ಸಹಭಾಗಿತ್ವದಲ್ಲಿ 2025-26ನೇ ಸಾಲಿನ ಭಾರತೀಯ ಸೇನಾ ದಿನವನ್ನು ಆಚರಿಸಲಾಯಿತು.13ನೇ ಕರ್ನಾಟಕ ಬೆಟಾಲಿಯನ್ ತರಬೇತಿ ಮಾರ್ಗದರ್ಶಕ ಬಾಬಾ ಸಾಬ್ ಹಾಗೂ ಹರ್ದೀಪ್ ಸಿಂಗ್ ಅವರು ಎನ್.ಸಿಸಿ ಕೆಡೆಟ್ ಗಳಿಗಾಗಿ ವಿಶೇಷ ಪಥಸಂಚಲನ ನಡೆಸಿ ಜಾಗತಿಕ ಮಟ್ಟದಲ್ಲಿ ವಿಶ್ವಗುರುವಿನ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯ, ಕೌಶಲ್ಯ, ಸಂಸ್ಕೃತಿ, ಪರಂಪರೆ ಹಾಗೂ ಅಪಾರವಾದ ನೈಸರ್ಗಿಕ ಸಂಪತ್ತನ್ನೊಂದಿರುವ ಭಾರತ ದೇಶದ ರಕ್ಷಣೆಯಲ್ಲಿ ದೇಶದ ಸೇನೆಯ ಸೇವೆ ಅವಿಸ್ಮರಣೀಯವಾದದ್ದು ಎಂದು ಬಣ್ಣಿಸಿದರು.ದೇಶದ ರಕ್ಷಣೆಗಾಗಿ ಹುತಾತ್ಮರಾಗಿರುವ ಸೇನಾ ಸೈನಿಕರನ್ನು ಸ್ಮರಿಸಿದರಲ್ಲದೆ, ಜ್ಞಾನ, ವಿಜ್ಞಾನ ಮತ್ತುತಂತ್ರಜ್ಞಾನಯುಗದಲ್ಲಿ ಭಾರತೀಯ ಸೈನಿಕರು ದೇಶದ ಕಣ್ಗಾವಲಾಗಿ ಸೇವೆ ಸಲ್ಲಿಸುತ್ತಿರುವುದು ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಪೂರ್ವಕವಾಗಿ ಹೆಮ್ಮೆ ಪಡುವಂತಹ ಸಾರ್ವಕಾಲಿಕ ಸತ್ಯವೆಂದು ಅಭಿಪ್ರಾಯಪಟ್ಟರು.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎನ್.ಸಿಸಿ ಕೆಡೆಟ್ ಗಳು ದೇಶ ಸಂರಕ್ಷಣೆಯಲ್ಲಿ ಭಾರತೀಯ ಸೇನೆಯ ಜವಾಬ್ದಾರಿ, ಕರ್ತವ್ಯ, ನಿಷ್ಠೆ, ಸಮಯ ಪ್ರಜ್ಞೆ ಮುಂತಾದ ದಕ್ಷ, ಪ್ರಾಮಾಣಿಕ ಹಾಗೂ ಮೌಲಿಕ ಅಂಶಗಳನ್ನು ಅರಿತು ತರಬೇತಿ ಪಡೆಯುವುದರೊಂದಿಗೆ ಸದೃಢ-ಸೇನಾ ಸೈನಿಕರಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.ಎನ್.ಸಿಸಿಯ ಎಲ್ಲ ಕೆಡೆಟ್ ಗಳು, ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಹಾಗೂ ಎನ್.ಸಿಸಿ ಘಟಕದ ಲೆಫ್ಟಿನೆಂಟ್ ಕೆ.ಜಿ. ಶಶಿಕುಮಾರ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))