ಕಾಂಗ್ರೇಸ್ ಸರ್ಕಾರ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳ ಬೆಲೆ ಏರಿಕೆ, ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದರಿಂದ ಬಡ ಜನರ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಬಿಜೆಪಿ ಮುಖಂಡ ಜಿಎನ್ ವೇಣುಗೋಪಾಲ್ ಆಕ್ರೋಶ
ಕನ್ನಡಪ್ರಭ ವಾರ್ತೆ ಚಿಂತಾಮಣಿದಿನೇ ದಿನೇ ರಾಜ್ಯ ಸರ್ಕಾರ ಒಂದರ ಹಿಂದೊಂದರಂತೆ ಹಾಲು, ಬಸ್ ಸೇರಿದಂತೆ ಅಗತ್ಯ ವಸ್ತುಗಳ ಮತ್ತು ಪ್ರಯಾಣದ ದರಗಳನ್ನು ಏರಿಸುವುದರ ಮೂಲಕ ಬಡವರಿಗೆ, ಕೂಲಿಕಾರ್ಮಿಕರಿಗೆ, ಸಾಮಾನ್ಯರಿಗೆ, ನಿತ್ಯ ಓಡಾಟ ಮಾಡುವವರಿಗೆ ಅನಾನುಕೂಲವಾಗುವಂತೆ ಮಾಡಿದೆಯೆಂದು ಸರ್ಕಾರದ ಧೋರಣೆಯನ್ನು ವಿರೋಧಿಸಿ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಎನ್ಡಿಎ ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿಯ ಬಳಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ರಾಜ್ಯದಲ್ಲಿನ ಕಾಂಗ್ರೇಸ್ ಸರ್ಕಾರ ಅಗತ್ಯ ವಸ್ತುಗಳಾದ ಆಹಾರ ಪದಾರ್ಥಗಳ ಬೆಲೆ ಏರಿಕೆ, ಹಾಲಿನ ಉತ್ಪನ್ನಗಳ ಬೆಲೆ ಏರಿಕೆ, ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದರಿಂದ ಬಡ ಜನರ ಮೇಲೆ ಬರೆ ಎಳೆದಂತಾಗಿದ್ದು ಇದ್ದನ್ನು ಖಂಡಿಸುತ್ತಿರುವುದಾಗಿ ನುಡಿದು ರಾಜ್ಯ ಸರ್ಕಾರ ದಿವಾಳಿಯ ಹಂತವನ್ನು ತಲುಪಿದ್ದು, ಬೆಲೆ ಏರಿಕೆ ಮೂಲಕ ಗ್ಯಾರಂಟಿಗಳಿಗೆ ಹಣವನ್ನು ಹೊಂದಿಸುತ್ತಿದೆಯೆಂದು ಸರ್ಕಾರದ ವಿರುದ್ಧ ಕಿಡಿಕಾಡಿದರು.ರಾಜ್ಯದ ಬಹುತೇಕ ಭಾಗಗಳಲ್ಲಿ ತೀವ್ರ ಬರದ ಪರಿಸ್ಥಿತಿ ಉಂಟಾಗಿದ್ದು, ರೈತರು ಹಾಗೂ ಗ್ರಾಮೀಣ ಭಾಗದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಕುಡಿಯುವ ನೀರಿನ ಅಭಾವ, ಜಾನುವಾರುಗಳಿಗೆ ಮೇವು ಹಾಗೂ ನೀರಿನ ಕೊರತೆ, ಕೃಷಿ ಉತ್ಪಾದನೆಯಲ್ಲಿ ಕುಸಿತ ಉಂಟಾಗಿದೆ. ಇದರ ಪರಿಣಾಮವಾಗಿ ಅಕ್ಕಿ, ಸಕ್ಕರೆ, ಬೆಳಕಾಳುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದ್ದು ಜನಸಾಮಾನ್ಯರ ಸುಲಿಗೆಯನ್ನು ಕಾಂಗ್ರೇಸ್ ಸರ್ಕಾರ ಮಾಡುತ್ತಿದೆಯೆಂದು ಕಿಡಿಕಾರಿದರು.
ಗೃಹಸಚಿವರ ಧೋರಣೆಗೆ ಖಂಡನೆ:ಗೃಹ ಸಚಿವರು ಬಂದ ಬಳಿಕ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಮತ್ತು ದುರಹಂಕಾರಿ ಧೋರಣೆ ಹೆಚ್ಚಾಗಿದೆ, ಪೊಲೀಸ್ ಠಾಣೆಗೆ ಹೋದರೆ ಸಾಮಾನ್ಯ ವ್ಯಕ್ತಿ ಜೇಬಿನಲ್ಲಿ ದುಡ್ಡಿರಬೇಕು, ಇಲ್ಲದಿದ್ದರೆ ನ್ಯಾಯ ಸಿಗಲಾರರು, ಅಷ್ಟೊಂದು ಭ್ರಷ್ಟ ವಾತಾವರಣ ಇಲಾಖೆಯಲ್ಲಿ ನಿರ್ಮಾಣವಾಗಿದೆ, ಇಂತಹ ಭ್ರಷ್ಟ ಮತ್ತು ದುರಹಂಕಾರಿ ಅಧಿಕಾರಿಗಳನ್ನು ಕೂಡಲೆ ಸೇವೆಯಿಂದ ವಜಾ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಒತ್ತಾಯಿಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ಮಾತನಾಡಿ, ರಾಜ್ಯ ಸರ್ಕಾರ ಒಂದೆಡೆ ಗೃಹಣಿಯರಿಗೆ ೨ಸಾವಿರ ನೀಡಿ ಮತ್ತೊಂದೆಡೆ ಕುಟುಂಬದ ಸದಸ್ಯರಿಂದ ೧೦ಸಾವಿರ ವಸೂಲಿಯನ್ನು ಮಾಡುತ್ತಿದ್ದು ಇಂತಹ ಸರ್ಕಾರದಿಂದ ಜನಸಾಮಾನ್ಯರಿಗೆ, ಬಡವರಿಗೆ, ಕೂಲಿಕಾರ್ಮಿಕರಿಗೆ ಏನೂ ಪ್ರಯೋಜನವಾಗುವುದಿಲ್ಲವೆಂದರು.ತಹಶೀಲ್ದಾರ್ರಿಗೆ ಮನವಿ ಸಲ್ಲಿಸುವುದಕ್ಕೂ ಮುನ್ನಾ ನಗರದ ಊರು ಮುಂದೆಯಿಂದ ಬೃಹತ್ ಪ್ರತಿಭಟನೆ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ದಿನನಿತ್ಯ ಬಳಕೆ ಮಾಡುವ ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿ ತಾಲೂಕು ಕಚೇರಿ ವೃತ್ತದಲ್ಲಿ ಕೆಲ ಸಮಯ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿ ತಾಲೂಕು ಕಛೇರಿ ಬಳಿ ತೆರಳಿ ತಹಶೀಲ್ದಾರ್ ಸುದರ್ಶನ್ಯಾದವ್ ಮೂಲಕ ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿರಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬೈರಾರೆಡ್ದಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜಣ್ಣ, ನಗರ ಘಟಕದ ಅಧ್ಯಕ್ಷ ಗೋವಿಂದರಾಜು ಇದ್ದರು.ಚಿತ್ರ ಶೀರ್ಷಿಕೆ: ತಹಸೀಲ್ದಾರ್ ಸುದರ್ಶನ್ ಯಾದವ್ರಿಗೆ ಮನವಿ ಸಲ್ಲಿಸುತ್ತಿರುವ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ಬಿಜೆಪಿ ಮುಖಂಡ ಜಿಎನ್ ವೇಣುಗೋಪಾಲ್ ಚಿತ್ರ.ಚಿತ್ರ ಶೀರ್ಷಿಕೆ: ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹಾಗೂ ಬಿಜೆಪಿ ಮುಖಂಡ ಜಿಎನ್ ವೇಣುಗೋಪಾಲ್ ಚಿತ್ರ.