ಬಿಹಾರದಲ್ಲಿ ಎನ್‌ಡಿಎಗೆ ಬಹುಮತ: ಬಿಜೆಪಿ ವಿಜಯೋತ್ಸವ

| Published : Nov 15 2025, 02:00 AM IST

ಸಾರಾಂಶ

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ‌ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಂಚಿ ಹಂಚಿ ಸಂಭ್ರಮಿಸಿದರು.

ಹುಬ್ಬಳ್ಳಿ:

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ‌ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹುಬ್ಬಳ್ಳಿ ಸೆಂಟ್ರಲ್ ಮತಕ್ಷೇತ್ರ ಹಾಗೂ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಹಳೇಹುಬ್ಬಳ್ಳಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ದತ್ತಮೂರ್ತಿ ಕುಲಕರ್ಣಿ, ಪ್ರವೀಣ್ ಪವಾರ, ರಾಮನಗೌಡ್ರ ಶೆಟ್ಟನಗೌಡ್ರ, ಕೃಷ್ಣ ಗಂಡಗಾಳೆಕರ, ಅಶೋಕ ವಾಲ್ಮೀಕಿ, ಅಕ್ಕಮ್ಮ ಹೆಗಡೆ, ಮಿನಾಕ್ಷಿ ಅಮರಗೋಳ, ಸುಮಾ ಶಿವನಗೌಡ್ರ, ಗೀತಾ, ಅಕ್ಕಮ್ಮ ಹೆಗಡೆ, ವೀಣಾ, ತಾರಾ ಸೇರಿದಂತೆ ಹಲವರಿದ್ದರು.

ಹಳೇಹುಬ್ಬಳ್ಳಿ ವೃತ್ತ:

ಹಳೇಹುಬ್ಬಳ್ಳಿ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮಂಜುನಾಥ ಕಾಟಕರ, ಮುಖಂಡರಾದ ನಾರಾಯಣ ಜರ್ತಾರಘರ, ಶಿವು ಮೆಣಸಿನಕಾಯಿ, ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಶಾಂತಾ ಹಿರೇಮಠ, ರಂಗಾ ಕಠಾರೆ, ಅನೂಪಕುಮಾರ ಬಿಜವಾಡ ಸೇರಿದಂತೆ ಹಲವರಿದ್ದರು.

ಕಾರ್ಯಕರ್ತರ ವಿಜಯೋತ್ಸವಕುಂದಗೋಳ:ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಬ್ರಹ್ಮದೇವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಮುಖಂಡರಾದ ಪ್ರಕಾಶಗೌಡ್ರ ಪಾಟೀಲ್, ವೀಣಾ ಆನಿ, ಬಿ.ಟಿ. ಗಂಗಾಯಿ, ಮಂಜುನಾಥಸ್ವಾಮಿ ಹಿರೇಮಠ, ಸಂತೋಷ್ ಮಲ್ಲಿಗವಾಡ, ರಮೇಶಗೌಡ ಮೇಲ್ಮಳಗಿ, ಚನ್ನು ಹುಂಬಿ, ಸತೀಶ್ ಪಾಟೀಲ್, ವಾಗೀಶ್ ಮನಕಟ್ಟಿಮಠ, ನಾಗರಾಜ್ ಸುಭರಗಟ್ಟಿ, ಹರೀಶ ಕೊನೇರಿ ಸೇರಿ ಹಲವರಿದ್ದರು.