ನಮ್ಮ ವಿದ್ಯಾರ್ಥಿಗಳು ಇಂದು ಆದರ್ಶ ಕೃಷಿಕರಾಗಿ, ಉದ್ಯಮಿಗಳಾಗಿ, ಸರ್ಕಾರಿ ನೌಕರರಾಗಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ
ಕನ್ನಡಪ್ರಭ ವಾರ್ತೆ ಬೆಟ್ಟದಪುರಗುರುಗಳು ನೀಡುವ ಆದರ್ಶ ಶಿಕ್ಷಣ, ಮೌಲ್ಯಗಳು ಉತ್ತಮ ಸಮಾಜ ನಿರ್ಮಾಣದ ಜೊತೆಗೆ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎಂದು ಪಿರಿಯಾಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಗೊರಹಳ್ಳಿ ಜಗದೀಶ್ ತಿಳಿಸಿದರು.ಪಿರಿಯಾಪಟ್ಟಣ ತಾಲೂಕಿನ ದೊಡ್ಡಕಮರವಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 2006 - 2007ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,. ನಮ್ಮ ವಿದ್ಯಾರ್ಥಿಗಳು ಇಂದು ಆದರ್ಶ ಕೃಷಿಕರಾಗಿ, ಉದ್ಯಮಿಗಳಾಗಿ, ಸರ್ಕಾರಿ ನೌಕರರಾಗಿ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ 20 ವರ್ಷದ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸ್ಮರಿಸಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಬಂಟ್ವಾಳ ತಾಲೂಕಿನ ಕಡೆ ಶಿವಾಲಯದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎನ್. ಲೋಕಾನಂದ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಭಗವದ್ಗೀತೆ, ವಚನ ಸಾಹಿತ್ಯ, ದಾಸ ಸಾಹಿತ್ಯ ಓದಿ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮನುಷ್ಯನ ಸ್ವಾರ್ಥ ಬದುಕಿನಿಂದ ಪ್ರಕೃತಿ ನಾಶವಾಗುತ್ತಿದ್ದು ನಾವೆಲ್ಲರೂ ಪ್ರಕೃತಿಯನ್ನು ಸಂರಕ್ಷಣೆ ಮಾಡಬೇಕು. ಪೋಷಕರು ಆಸ್ತಿ ಮಾಡದೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕೊಡಿಸಬೇಕು ಅವರೇ ಆಸ್ತಿಯಾಗುತ್ತಾರೆ ಎಂದರು. ಹುಣಸೂರು ತಾಲೂಕಿನ ಗಾವಡಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕಂಟೇನಹಳ್ಳಿ ಮಂಜುನಾಥ ಮಾತನಾಡಿದರು.ಶಿಕ್ಷಕರಾದ ಗೊರಹಳ್ಳಿ ಜಗದೀಶ್, ಕಂಟೇನಳ್ಳಿ ಮಂಜುನಾಥ್, ಲೋಕಾನಂದ್. ಎನ್, ಮಂಜುನಾಥ್. ಸಿ. ಪಿ, ರಾಘವೇಂದ್ರ ಗಾಣಿಗ, ಮಂಜುನಾಥ್, ಲೀಲಾವತಿ, ಸವಿತಾ ಅವರನ್ನು ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲ್ ಕೃಷ್ಣ, ಸದಸ್ಯರಾದ ಕೃಷ್ಣೆಗೌಡ, ಮಂಜುನಾಥ್, ಅರುಣ್ ಕುಮಾರ್, ದಿನೇಶ್, ಯಶೋಧನಂದ, ಪ್ರಭಾರ ಮುಖ್ಯಶಿಕ್ಷಕ ಮಹದೇವ್, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಹಿರಿಯ ವಿದ್ಯಾರ್ಥಿಗಳಾದ ಚೆಲುವೇಗೌಡ, ಅವಿನಾಶ್, ಗುರುಮೂರ್ತಿ, ಶಶಿಕುಮಾರ್, ಮಂಜುನಾಥ್, ನವೀನ, ಮೋಹನ್, ಕುಬೇರ, ಗಂಗೆಶ್, ಅನಿಲ್,ಪೃಥ್ವಿ, ಸೋಮಶೇಖರ್, ಶಶಿಕಲಾ, ಭುವನೇಶ್ವರಿ, ಕಾವ್ಯ, ಮೀನಾಕ್ಷಿ, ಶೃತಿ, ರೀಟಾ, ವಿದ್ಯಾ, ರೇಖಾ, ಶಿಕ್ಷಕರಾದ ಬಿ.ಆರ್. ಮೂರ್ತಿ, ಸಿ.ಕೆ. ಸುನೀತಾ, ಎಂ.ಜೆ. ಅನಿತಾ, ಪಿ.ಜೆ. ನಂದಿನಿ, ನಾಜಿಮಾ ಬಾನು, ವಿದ್ಯಾರ್ಥಿಗಳು ಇದ್ದರು.