ಮತ್ತೊಮ್ಮೆ ಮೋದಿ ಅಭಿಯಾನಕ್ಕೆ ಚಾಲನೆ

| Published : Feb 09 2024, 01:52 AM IST

ಸಾರಾಂಶ

ಈ ವೇಳೆ ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್, ಎಂ. ರಾಜೇಂದ್ರ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ. ಗಿರಿಧರ್. ಕೇಬಲ್ ಮಹೇಶ್, ಬಿ.ಎಂ. ರಘು, ಅನಿಲ್ ಥಾಮಸ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಇದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಮತ್ತೊಮ್ಮೆ ಮೋದಿ 2024ರ ಗೋಡೆ ಬರಹ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಚಾಲನೆ ನೀಡಿದರು.

ಬಿಜೆಪಿ ರಾಜ್ಯ ಘಟಕದ ಸೂಚನೆಯಂತೆ ಆಯೋಜಿಸಿರುವ ಈ ಅಭಿಯಾನ ಗುರುವಾರ ಮೈಸೂರಿನಲ್ಲಿ ಚಾಲನೆಗೊಂಡಿತು. ವಿವಿ ಪುರಂ ವ್ಯಾಪ್ತಿಯ ಕಾಳಿದಾಸ ರಸ್ತೆಯ ಶ್ರೀರಾಮಮಂದಿರ ಬಳಿ ಬಿ.ಎಸ್. ಯಡಿಯೂರಪ್ಪ ಅವರು ಬಣ್ಣದಿಂದ ದೀಪದ ಚಿತ್ರ ಬಿಡಿಸುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಇಂದಿನಿಂದ ಈ ಅಭಿಯಾನವು ನಗರದ ಪ್ರಮುಖ ಬಡಾವಣೆಗಳು ಮತ್ತು ರಸ್ತೆಗಳಲ್ಲಿ ನಡೆಯಲಿದ್ದು, ಆಯ್ದ ಸ್ಥಳಗಳಲ್ಲಿ ಮತ್ತೊಮ್ಮೆ ಮೋದಿ ಚಿತ್ರವು ಭಿತ್ತರಗೊಳ್ಳಲಿದೆ.

ಈ ವೇಳೆ ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್, ಎಂ. ರಾಜೇಂದ್ರ, ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ. ಗಿರಿಧರ್. ಕೇಬಲ್ ಮಹೇಶ್, ಬಿ.ಎಂ. ರಘು, ಅನಿಲ್ ಥಾಮಸ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಇದ್ದರು.

ಚಾಮರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸೋಮಶೇಖರ್, ದಿನೇಶ್ ಗೌಡ, ರಾಜು ಜಯಪ್ರಕಾಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ರವೀಂದ್ರ, ಬಿ.ವಿ. ಮಂಜುನಾಥ್, ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್. ಮುಖಂಡರಾದ ಜೋಗಿ ಮಂಜು, ದೇವರಾಜ್, ರಾಜೇಂದ್ರ, ನಿಶಾಂತ್ ಕಾರ್ತಿಕ್, ಮರಿಯಪ್ಪ ಮೊದಲಾದವರು ಪಾಲ್ಗೊಂಡಿದ್ದರು..