ನಗರ ಪಾಲಿಕೆಯಿಂದ ಮತದಾನ ಜಾಗೃತಿ

| Published : Apr 06 2024, 12:53 AM IST

ಸಾರಾಂಶ

ನಗರದ ರೈಲ್ವೆ ನಿಲ್ದಾಣದ ಬಳಿ ನಗರ ಪಾಲಿಕೆ ಸಿಬ್ಬಂದಿ ಮತದಾನ ಜಾಗೃತಿ ಮೂಡಿಸಿದರು. ಬಾಬೂ ಜಗಜೀವನರಾಮ್ ಜಯಂತಿ ಅಂಗವಾಗಿ ರೈಲ್ವೆ ನಿಲ್ದಾಣದ ಎದುರಿನಲ್ಲಿ ಜಮಾವಣೆಗೊಂಡಿದ್ದ ನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕರಪತ್ರಗಳನ್ನು ಹಂಚಿ, ಪೋಸ್ಟರ್‌ ಗಳನ್ನು ಹಿಡಿದು ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಪಾಲಿಕೆ ಆಯುಕ್ತೆ ಮಧು ಅವರ ನೇತೃತ್ವದಲ್ಲಿ ಜಾಗೃತಿ ಮೂಡಿಸಿದ ನಗರ ಪಾಲಿಕೆ ಸಿಬ್ಬಂದಿಯು ಮತದಾನದ ಮಹತ್ವ ಕುರಿತು ಅರಿವು ಮೂಡಿಸಿದರು.

ಈ ವೇಳೆ ಪೊಲೀಸರು ಮತ್ತು ವಿವಿಧ ಇಲಾಖೆ ಅಧಿಕಾರಿಗಳೂ ಪಾಲ್ಗೊಂಡರು.